ಉದಯರಶ್ಮಿ ದಿನಪತ್ರಿಕೆ
ಆಲಮೇಲ: ರಕ್ತದಾನದಿಂದ ರಕ್ತದೊತ್ತಡ, ಮಧು ಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜತೆಗೆ ಆತ್ಮತೃಪ್ತಿ ಸಿಗುತ್ತದೆ ಎಂದು ಡಾ.ಶ್ರೀಶೈಲ ಪಾಟೀಲ (ಹೂವಿನಹಳ್ಳಿ) ಹೇಳಿದರು.
ಪಟ್ಟಣದ ಪಟ್ಟಣ ಪಂಚಾಯತ ಆವರಣದಲ್ಲಿ ಶ್ರೀ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಯುವಕರ ಸೇವಾ ಸಂಘ ಆಲಮೇಲ ಇವರು ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 162ನೇ ಜಯಂತೋತ್ಸವದ ಅಂಗವಾಗಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪೂರ, ಅನುಗ್ರಹ ವ್ಹಿಜನ್ ಫೌಂಡೇಶನ್ ಟ್ರಸ್ಟ್ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಹಾಗೂ ಶ್ರೀ ಸಿದ್ಧೇಶ್ವರ ಬ್ಲಡ್ ಬ್ಯಾಂಕ್ ವಿಜಯಪೂರ ಇವರ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸಾ ಮತ್ತು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ದಲಿತ ಯುವ ಮುಖಂಡ ಹರೀಶ ಎಂಟಮಾನ ಮಾತನಾಡಿ, ರಕ್ತದಾನ ಮಹಾದಾನ ಯುವ ತರುಣರೇ ತುಂಬಿರುವಂತಹ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗ ಬೇಕಾದರೆ ರಕ್ತದಾನ ಮಾಡಬೇಕು, ನಮ್ಮ ಒಂದೊಂದು ಹನಿರಕ್ತವು ಒಂದೊಂದು ಜೀವವನ್ನು ಬದುಕಿಸುತ್ತದೆ, ಇದರಿಂದ ಆರೋಗ್ಯವಂತ ಭಾರತ ನಿರ್ಮಾಣವಾಗುತ್ತದೆ ಎಂದರು.
ಈ ಶಿಬಿರದಲ್ಲಿ 46 ಜನ ರಕ್ತದಾನ ಮಾಡಿದರು ಹಾಗೂ 180ಕ್ಕೂ ಅಧಿಕ ಜನರ ಕಣ್ಣಿನ ತಪಾಸಣೆ ಮಾಡಲಾಯಿತು ಮತ್ತು 60 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀಶೈಲಯ್ಯ ಅಳ್ಳೋಳ್ಳಿಮಠ, ಮಕ್ಕಳ ತಜ್ಞ ಡಾ.ರಾಜೇಶ ಪಾಟೀಲ, ಡಾ.ಸಿ.ಎಸ್.ನಿಂಬಾಳ, ಪಿಎಸ್ಐ ಅರವಿಂದ ಅಂಗಡಿ, ಸುರೇಶ ಮಹೇಂದ್ರಕರ, ಈರಣ್ಣ ಕಲ್ಲೂರ, ಶಶಿಧರ ನಾಯ್ಕೋಡಿ, ಅಜಯ್ ಭಂಟನೂರ, ಪ್ರಶಾಂತ ನಾಶಿ, ಶಿವು ಗುರಕಾರ, ಚಂದು ಕಾಂಬಳೆ,ಪುಂಡಲೀಕ ದೊಡ್ಡಮನಿ, ಗುರು ಹಡಪದ, ಸ್ವಾಮಿ ವಿವೇಕಾನಂದರ ಸೇವಾ ಸಂಘದ ಅಧ್ಯಕ್ಷ ಹಣಮಂತಸಿಂಗ ರಜಪೂತ, ಅಶೋಕ ಪರೀಟ, ವಿಶ್ವನಾಥ ಅಮರಗೊಂಡ, ಶ್ರೀಶೈಲ ಜೋಗೂರ ಅನೇಕರಿದ್ದರು.

