ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಇರುವೆ ಎಂಬತ್ತು ಕೋಟಿ ಜೀವರಾಶಿಗಳಲ್ಲಿ ಮಾನವ ಜನ್ಮ ಬಲು ದೊಡ್ಡದು, ಅರಿತು ನಡೆಯದಿದ್ದರೆ, ಅರವತ್ತು ಸಾವಿರ ವರ್ಷಗಳ ಕಾಲ ಕ್ರಿಮಿಕೀಟಗಳಾಗಿ ಜನಿಸುತ್ತವೆ ಎಂದು ಸಿಂಗನಹಳ್ಳಿ ರಾಮಲಿಂಗೇಶ್ವರ ಮಠದ ಪ್ರಣವಲಿಂಗ ಸ್ವಾಮಿಗಳು ಹೇಳಿದರು
ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಸೋಮವಾರ ಸಂಜೆ ಜರುಗಿದ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಚನ್ನಬಸವ ಶಿವಾಚಾರ್ಯರು ಹಿರೇಮಠ ಸಂಸ್ಥಾನದಲ್ಲಿ ಆರಂಭಿಸಿದ ಅರಿವಿನ ಅಮೃತಧಾರೆ ಜನರನ್ನು ಜಾಗೃತಗೊಳಿಸಿ, ಜಗದೊಡೆಯನ ಸಾಮಿಪ್ಯ ಕರುಣಿಸಿ, ಸದ್ಭಕರನ್ನು ಕೈಹಿಡಿದು ಮುನ್ನಡೆಸುವ ಮಹಾ ಬೆಳಕು, ಗುರು ಹಿರಿಯರನ್ನು ಗೌರವಿಸುವ ಪರಂಪರೆ ನಮ್ಮದಾಗಬೇಕು ಎಂದವರು, ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಎನ್ನುತ್ತಾ ತಂದೆ ತಾಯಂದಿರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಸಹಬಾಳ್ವೆ ಸಮನ್ವಯತೆ, ಪಾಠ ಹೇಳಿ ಕೊಡಲಿ ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚನ್ನಬಸವ ಶಿವಾಚಾರ್ಯರು ಶ್ರೀಮಠದಲ್ಲಿ ಪ್ರತಿ ತಿಂಗಳು ಜರುಗುವ ಹುಣ್ಣಿಮೆಯ ಶಿವಾನುಭವ ಸದ್ಭಕ್ತರ ಬಾಳಲಿ ಬರುವ ಒಳಿತು ಕೆಡುಕುಗಳ ಮಧ್ಯೆ ಸರಿ ದಾರಿಯಲ್ಲಿ ಸಾಗಲು ಪ್ರೇರೇಪಣೆ ನೀಡುತ್ತದೆ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವಲಯ ಕಸಾಪ ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತ ಬಸಣ್ಣ ಬೂದೂರ ನಗನೂರು ಹಾಗೂ ತಾಲೂಕು ಕಸಾಪ ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತ ನಿಂಗನಗೌಡ ದೇಸಾಯಿ ಪರಸನಹಳ್ಳಿ ಹಾಗೂ ಯಾದಗಿರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಕುಮಾರ ಯಾಳಗಿ ಇವರನ್ನು ಶ್ರೀಮಠದಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಶರಣಕುಮಾರ ಯಾಳಗಿ ಹಾಗೂ ಯಮನೇಶ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು. ಪ್ರಮುಖರಾದ ಮಹಾದೇವಪ್ಪ ವಜ್ಜಲ್, ನಿಜಗುಣಿ ವಿಶ್ವಕರ್ಮ, ಶಿವರಾಜ ಬುದೂರ, ರಮೇಶ ಸೊನ್ನದ, ಗುಡದಯ್ಯ ದಾವಣಗೆರೆ, ಮಲ್ಲನಗೌಡ ಪಾಟೀಲ, ಬಾಪುಗೌಡ ಯಡಹಳ್ಳಿ, ದೇವಣ್ಣ ಜಂಬಲದಿನ್ನಿ, ಬಂದೇನವಾಜ್ ನಾಲತವಾಡ, ಮಹಾಲಿಂಗಸ್ವಾಮಿ ಹಿರೇಮಠ, ಅಭಿಷೇಕ್ ಪಾಟೀಲ, ಡಾ ಯಂಕನಗೌಡ ಎಸ್ ಪಾಟೀಲ, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು, ಮಹಿಳೆಯರು ಮಕ್ಕಳು ಮಾಸಿಕ ಹುಣ್ಣಿಮೆಯ ಸತ್ಸಂಗದಲ್ಲಿ ಪಾಲ್ಗೊಂಡು ಪುನೀತರಾದರು.

