ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ತಾರಾಪೂರ ಗ್ರಾಮದಲ್ಲಿ ಸಮಸ್ತ ಭೋವಿ ಸಮಾಜದ ವತಿಯಿಂದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ 853 ನೇ ಜಯಂತೋತ್ಸವ ಆಚರಣೆ ಮಾಡಲಾಯಿತು.
ಕಾರ್ಯಕ್ರಮವು ಗಾನಯೋಗಿ ಪಂಡಿತ ಪುಟ್ಟರಾಜರ ಗವಾಯಿಗಳ ಶಿಷ್ಯರಾದ ಶ್ರೀ ವೇದಮೂರ್ತಿ ಸಿದ್ದರಾಮಯ್ಯ ಶಾಸ್ತ್ರಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ನೇತೃತ್ವ ಶ್ರೀ ವೇದಮೂರ್ತಿ ರೇವಣಸಿದ್ದಯ್ಯ ಹಿರೇಮಠ, ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಜೋಗುರ ಕೆಪಿಆರ್ ಶುಗರ್ ನಿರ್ದೇಶಕರು ಬಸಲಿಂಗಪ್ಪ ಕತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಡಣಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು ಫೋಟೋ ಪೂಜೆ ಸಾಬಗೌಡ ಭೋಗೊಂಡಿ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಹರೀಶ್ ಯಂಟಮನ ಆಣವೀರ ಕತ್ತಿ ಭೋಗೇಶ ಮನಗೂಳಿ ಸುರೇಶ್ ಪೂಜಾರ್ ಸಂತೋಷ್ ಕ್ಷತ್ರಿ ಖಾಜಪ್ಪ ಜಮಾದಾರ ಬಸವರಾಜ್ ನಂದೂರ ಗ್ಯಾರೆಂಟಿ ಯೋಜನೆ ಸದಸ್ಯರು ಹಾಗೂ ಸಮಸ್ತ ಗ್ರಾಮಸ್ಥರು ಹಾಗೂ ಭೋವಿ ಸಮಾಜದ ಮುಖಂಡರು ಭಾಗಿಯಾದರು.

