Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಲ್ಲ ಸರ್ಕಾರಿ ನೌಕರರ ಹಾಗೂ ಅಧಿಕಾರಿಗಳ ಆಸ್ತಿ ವಿವರ ಲೋಕಾಯುಕ್ತ ಸಂಸ್ಥೆಗೆ ಲಭ್ಯವಾಗುವಂತಹ ವ್ಯವಸ್ಥೆ ರೂಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅಶೋಕ ಜಾಧವ ಮಾತನಾಡಿ, ರಾಜ್ಯ ಸರ್ಕಾರದ ಇಲಾಖಾ ಅಧಿಕಾರಿಗಳು ಅವರ ಅಧೀನದ ಅಧಿಕಾರಿಗಳ ಹಾಗೂ ನೌಕರರ ಆಸ್ತಿ ವಿವರಗಳನ್ನು ನೀಡಲು ವಿನಾಕಾರಣ ವಿಳಂಬ ಮಾಡುತ್ತಿರುವುದು ಮತ್ತು ಈ ವಿಚಾರದ ಗೌಪ್ಯತೆ ಕಾಪಾಡದೇ ಅಕ್ರಮ ಆಸ್ತಿ ಗಳಿಸಿರುವ ನೌಕರರ ವಿರುದ್ಧ ತನಿಖೆಯ ದಾರಿ ತಪ್ಪಿಸುವಂತಹ ಪರಿಸ್ಥಿತಿ ನಿರ್ಮಾಣ ಆಗುತ್ತಿರುವುದರಿಂದ ಕರ್ನಾಟಕ ಲೋಕಾಯುಕ್ತರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪರಿಹಾರೋಪಾಯವನ್ನು ಸೂಚಿಸಿರುತ್ತಾರೆ . ಈ ವಿಚಾರವಾಗಿ ಅವರು ಎಲ್ಲಾ ಸರ್ಕಾರಿ ನೌಕರರ ಆಸ್ತಿ ವಿವರವನ್ನು ಕಡ್ಡಾಯವಾಗಿ ಪ್ರತಿವರ್ಷ ಸಂಗ್ರಹಿಸಿ, ಆ ವಿವರಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ , ಆ ವಿವರಗಳು ನಿರಂತರವಾಗಿ ಲೋಕಾಯುಕ್ತ ಸಂಸ್ಥೆಗೆ ಮುಕ್ತವಾಗಿ ಲಭ್ಯವಾಗುವಂತಹ ವ್ಯವಸ್ಥೆಯನ್ನು…

Read More

ಕೂಲ್ ಚಳಿಯೂ, ಹೊದಿಕೆಯ ಸೇವೆಯೂ | ಶಿಕ್ಷಕ ನಾರಾಯಣ ಕುಲಕರ್ಣಿ ಸಾಮಾಜಿಕ ಸೇವೆ ಅನನ್ಯ ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಸಂಜೆವಾದರೆ ಸಾಕು ಚಳಿ ಥರಗುಟ್ಟುತ್ತೆ. ಥಂಡಿಗೆ ಮೈಮನ ಮುದುಡಿಕೊಳ್ಳುತ್ತೆ. ಹೀಗಾಗಿ ಬಹುತೇಕ ಸುಸ್ಥಿತರು ಒಂದೆಡೆ ಬಿಸಿಯುತ ಆಹಾರಕ್ಕೆ ಮೊರೆಯಿರಿಸುತ್ತಾರೆ ಇನ್ನೊಂದೆಡೆ ರಾತ್ರಿ ನಿದಿರೆಗೆ ಬೆಚ್ಚನೆಯ ಹೊದಿಕೆ ಬಯಸುತ್ತಾರೆ. ಅನುಕೂಲಸ್ಥ ಜನತೆಗೆ ಇವೆಲ್ಲವೂ ಸುಲಲಿತ ಪ್ರಾಪ್ತಿ! ಆದರೆ ಇಂಥ ವ್ಯವಸ್ಥೆ, ಅನುಕೂಲ ಬಡಬಗ್ಗ ಅನಾಥ ಭಿಕ್ಷುಕರು, ನಿರಾಶ್ರಿತರಿಗೆ ಲಭಿಸುವುದು ಬಲು ಕಷ್ಟ ! ಅವರಿಗೆಲ್ಲ ಇದು ಕನಸಿನ ಮಾತು. ಇಂಥವರ ದಯನೀಯ ಸ್ಥಿತಿಗತಿ ಕಂಡು ಮರುಗುವರು ವಿರಳ ! ನೆರವಿನ ಹಸ್ತ ಚಾಚುವರು ಅಪರೂಪ ! ಈ ಪರಿಯ ಸನ್ನಿವೇಶ ಎಲ್ಲೆಡೆಯೂ ಇಂದು ಕಣ್ಣೆದುರಿಗೆ ಕಾಣುತ್ತಿರುವಾಗ ಪರೋಪಕಾರ ಗುಣ ಸ್ವಭಾವಯುಳ್ಳ ಸಾಮಾಜಿಕ ಸೇವಾಬಿಂಬದೊಂದಿಗೆ ಇಲ್ಲೊಬ್ಬ ಶಿಕ್ಷಕ ಹೊದಿಕೆ ನೆರವಿನ ಸಹಾಯಹಸ್ತ ಚಾಚಿ ಅಪರೂಪದ ಗುರು ಎನಿಸಿಕೊಂಡಿದ್ದಾರೆ!ಔದಾರ್ಯತೆ ಭಾವದೊಂದಿಗೆ ಮೌಲ್ಯಯುತ ಧಾರಣೆಯ ಮಾನವೀಯತೆ ಸಾರಯುಳ್ಳ ಸಾಮಾಜಿಕ ಸೇವಾ ಮಿಡಿತಕ್ಕೆ ಸದ್ದಿಲ್ಲದೆ ಜಮಖಂಡಿ ನಗರದ ಸರಕಾರಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೪-೨೫ನೇ ಸಾಲಿನಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗಾಗಿ “ಯುವನಿಧಿ ವಿಶೇಷ ನೊಂದಣಿ ಅಭಿಯಾನ”ವನ್ನು ಜ.೬ ರಿಂದ ೨೦ರ ವರೆಗೆ ಹಮ್ಮಿಕೊಳ್ಳಲಾಗಿದೆ.ಕರ್ನಾಟಕದಲ್ಲಿ ಕನಿಷ್ಠ ೬ ವರ್ಷ ಪದವಿ/ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಅಧ್ಯಯನ ಮಾಡಿದವರು, ತೇರ್ಗಡೆ ಹೊಂದಿ ೧೮೦ದಿನಗಳ ನಂತರವ ಉದ್ಯೋಗ ದೊರಕದೆ/ ಉನ್ನತ ವ್ಯಾಸಾಂಗಕ್ಕೆ ವಿದ್ಯಾಭ್ಯಾಸ ಮುಂದುವರಿಸದ ಅಭ್ಯರ್ಥಿ, ಸ್ವಯಂ ಉದ್ಯೋಗ ಹೊಂದಿಲ್ಲದ ಅಭ್ಯರ್ಥಿ ಈ ಯೋಜನೆಗೆ ಅರ್ಹವಾಗಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://yuvanidhischeme.in/ಗೆ ಸಂಪರ್ಕಿಸಬಹುದು ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕುಡಿಯುವ ನೀರು ಒದಗಿಸುವ ಯೋಜನೆಯಡಿ ಜಿಲ್ಲೆಯ ಮುದ್ದೇಬಿಹಾಳ ಹಾಗೂ ಸಿಂದಗಿ ತಾಲೂಕಿನ ೩೪೩ ಜನವಸತಿಗಳಿಗೆ ಹಾಗೂ ೬ ಪುರಸಭೆಗಳಿಗೆ Zonal Balancing Reservoirನೀರಿನ ಘಟಕಗಳನ್ನು ನಿರ್ಮಿಸಲು ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದ ರಿಸನಂ.೩೭ರ ೪೮ ಎಕರೆ, ೪ಗುಂಟೆ ಹಾಗೂ ಸದರಿ ಗ್ರಾಮದ ಧನಗಳು ನಿಲ್ಲುವ ಬಗ್ಗೆ ಕ್ಷೇತ್ರ ೩೭ಎ- ೩೪ಗು ಪೈಕಿ ಕ್ಷೇತ್ರ ೧ಎ – ೨೦ಗು ಜಮೀನನ್ನು ಮಂಜೂರು ಮಾಡಿಸುವ ಕುರಿತು ಗಾಯರಾಣ ಜಮೀನು ಮಂಜೂರಿಸುವ ಕುರಿತು ಅದುಸೂಚಿಯಲ್ಲಿ ತಿಳಿಸಿರುವಂತೆ ಸಾರ್ವಜನಿಕರ ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆ ಹೊರಡಿಸಿದ ೩೦ ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ವಲಯ ವ್ಯಾಪ್ತಿಯಲ್ಲಿ ಜಪ್ತಿ ಮಾಡಿರುವ ಒಟ್ಟು ೪೧ ವಿವಿಧ ವಾಹನಗಳ ಹರಾಜು ಪ್ರಕ್ರಿಯೆ ಜ.೧೭ರ ಮದ್ಯಾಹ್ನ ೧೨ಗಂಟೆಗೆ ಅಬಕಾರಿ ಉಪ ಆಯುಕ್ತರ ಕಛೇರಿಯಲ್ಲಿ ನಡೆಯಲಿದೆ.ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. ೮೧೦೫೭೭೩೮೧೧ಗೆ ಸಂಪರ್ಕಿಸಬಹುದು ಎಂದು ಅಬಕಾರಿ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿಕಲಚೇತನರಿಗಾಗಿ ಇರುವ ಬ್ಯಾಟರಿ ಚಾಲಿತ ವ್ಹೀಲ್ ಚೇರ ಯೋಜನೆಯನ್ನು ಡಿ.ಬಿ.ಟಿ (ನೇರ ನಗದು ವರ್ಗಾವಣೆ) ತಂತ್ರಾಂಶದಡಿ ೨೦೨೪-೨೫ನೇ ಸಾಲಿನಲ್ಲಿ ಆನ್‌ಲೈನ್ ಮೂಲಕ ಸೇವಾ ಸುವಿಧಾ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಫಲಾನುಭವಿಗಳು ಸೇವಾಸಿಂಧು ವೆಬ್‌ಸೈಟ್ https://(suvidha. Karnataka.gov.in/ಪೋರ್ಟಲ್ ನಲ್ಲಿ ಜ.೨೧ರ ವರೆಗೆ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕಿ ಪ್ರತಿಭಾ ಮಾದರ-೯೬೦೬೧೫೧೧೪೯, ತಾಲೂಕ ಪಂಚಾಯತ ರವಿ ರಾಠೋಡ- ೯೦೩೫೫೫೩೩೩೭, ಇಂಡಿ ತಾಲೂಕ ಪಂಚಾಯತ ಪರಶುರಾಮ ಭೋಸಲೆ- ೯೯೭೨೪೪೧೪೬೪, ಸಿಂಸಗಿ ತಾಲೂಕ ಪಂಚಾಯತ ಮುತ್ತುರಾಜ ಸಾತಿಹಾಳ- ೯೯೮೦೦೧೯೬೩೫, ಮುದ್ದೇಬಿಹಾಳ ತಾಲೂಕ ಪಂಚಾಯತ- ೯೭೪೦೬೮೨೯೭೯, ಬ.ಬಾಗೇವಾಡಿ ಶೀವಲಿಲಾ ಬಿರಾದಾರ- ೮೭೨೨೧೩೫೬೬೦ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ವತಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಕಿತ್ತೂರ ರಾಣಿ ಚನ್ನಮ್ಮ/ ಡಾ.ಬಿ.ಆರ್.ಅಂಬೇಡ್ಕರ್ / ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ ೨೦೨೫-೨೬ನೇ ಸಾಲಿನ ೬ನೇ ತರಗತಿಯ ಪ್ರವೇಶ ಪರೀಕ್ಷೆಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.ಜನವರಿ ೨೫ರ ರಾತ್ರಿ ೧೧.೫೯ರ ವರೆಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಪ್ರವೇಶ ಪತ್ರವನ್ನು ಫೆಬ್ರವರಿ ೬ರಂದು ಆನ್‌ಲೈನ್ ನಲ್ಲಿ ಪಡೆದುಕೊಳ್ಳಬಹುದು. ಫೆ. ೧೫ರಂದು ಮದ್ಯಾಹ್ನ ೨.೩೦ ರಿಂದ ೪.೩೦ರ ವರೆಗೆ ಪ್ರವೇಶ ಪರೀಕ್ಷೆಗಳು ನಡೆಯಲಿವೆ.ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಆದಾಯ ಮಿತಿ ಪ.ಜಾತಿ/ ಪ.ಪಂಗಡ, ಹಿ.ವರ್ಗದ ಪ್ರವರ್ಗ-೧ ೨.೫೦.೦೦೦/- ಹಾಗೂ ಹಿಂ.ವರ್ಗ ೨ಎ,೨ಬಿ, ೩ಎ ಮತ್ತು ೩ಬಿ ವಿದ್ಯಾರ್ಥಿಗಳ ಆದಾಯ ಮಿತಿ ೧.೦೦.೦೦೦/- ಮಿರಿರಬಾರದು.ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಮೊರಾರ್ಜಿ ದೇಸಾಯಿ/ ಕಿತ್ತೂರ ರಾಣಿ ಚನ್ನಮ್ಮ/ ಡಾ.ಬಿ.ಆರ್.ಅಂಬೇಡ್ಕರ್/ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರಿಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರೈತರ ಕೃಷಿ ಪಂಪಸೆಟ್‌ಗಳಿಗೆ ಸೋಲಾರ ಮುಖಾಂತರ ವಿದ್ಯುತ್ ಸರಬರಾಜು ಮಾಡುವ ಪಿಎಂ ಕುಸುಮ್ ಪೀಡರ್ ಲೇವಲ್ ಸೋಲರೈಸೆಷನ್ ಯೋಜನೆಯಡಿ ಸೌರ ಘಟಕಗಳನ್ನು ಸ್ಥಾಪಿಸಲು ವಿಜಯಪುರ ಜಿಲ್ಲೆಯ ಬುರಣಾಪೂರ ಗ್ರಾಮದ ರಿಸನಂ.೫೩ರ ೩೧೯ ಎಕರೆ, ೨೯ ಗುಂಟೆ ಪೈಕಿ ೩೦ ಎಕರೆ ೮ ಗುಂಟೆ ಹಾಗೂ ರಿಸನಂ ೯ರ ೧೯೩ ಎಕರೆ ೩೩ ಗುಂಟೆ ಪೈಕಿ ೭ ಎಕರೆ ೩೨ ಗುಂಟೆ ಹೀಗೆ ಒಟ್ಟು ೩೮ ಎಕರೆ ಗಾಯರಾಣ ಜಮೀನು ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಕಾಯ್ದಿರಿಸಲಾಗಿದೆ. ಇದಕ್ಕೆ ಸಂಬAಧಪಟ್ಟAತೆ ಸಾರ್ವಜನಿಕರು ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆ ಹೊರಡಿಸಿದ ೩೦ ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡ್ಬಲ್ಯೂಜೆ)ದ ೩೯ನೇ ರಾಜ್ಯಸಮ್ಮೇಳನ ಜ. ೧೮ ಮತ್ತು ೧೯ ರಂದು ಕಲ್ಪತರುನಾಡು ತುಮಕೂರಿನಲ್ಲಿ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಿ.ಬಿ. ವಡವಡಗಿ ತಿಳಿಸಿದ್ದಾರೆ.ಜಂಟಿ ಹೇಳಿಕೆ ನೀಡಿರುವ ಅವರು, ಪತ್ರಿಕೋದ್ಯಮ, ಪತ್ರಕರ್ತರು ಸೇರಿದಂತೆ ನ್ಯೂಸ್ ರೂಂ ನ ಎಲ್ಲ ಆಯಾಮಗಳ ಕುರಿತು ಚಿಂತನ-ಮಂಥನ, ತನ್ಮೂಲಕ ಪತ್ರಿಕೋದ್ಯಮದ ಸಮಗ್ರ ಹಿನ್ನೋಟ, ಮುನ್ನೋಟಗಳನ್ನು ಕಾಣುವುದು ಸಮ್ಮೇಳನದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ ಎಂದವರು ತಿಳಿಸಿದ್ದಾರೆ.ಕೋವಿಡ್ ಕಷ್ಟದ ಕಾಲದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರ ನೆರವಿಗೆ ಧಾವಿಸುವ ಮೂಲಕ ಅಭದ್ರತೆಯ ಆತಂಕದಲ್ಲಿದ್ದ ಪತ್ರಕರ್ತರಿಗೆ ಆಸರೆಯಾಗಿದ್ದು ಸಂಘಟನಾ ಶಕ್ತಿಯ ಸಾರ್ಥಕತೆ ಎನ್ನಬಹುದು.ಸಮ್ಮೇಳನ ಉದ್ಘಾಟನೆ: ೩೯ನೇ ರಾಜ್ಯ ಸಮ್ಮೇಳನದ ಉದ್ಘಾಟನೆ ಜ.೧೮ ರಂದು ತುಮಕೂರಿನಲ್ಲಿ ನಡೆಯಲಿದೆ.ಇದಕ್ಕೂ ಮುನ್ನ ಬೆಳಗ್ಗೆ ೮.೩೦ಕ್ಕೆ ತುಮಕೂರಿನ ಟೌನ್ ಹಾಲ್ ಬಿಜಿಎಸ್ ವೃತ್ತದಿಂದ ಪತ್ರಕರ್ತರ ಸಾಂಸ್ಕೃತಿಕ ಮೆರಗಿನ ಮೆರವಣಿಗೆಗೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಜ೧೬ ರಂದು ಬೆಳಿಗ್ಗೆ ೧೦ರಿಂದ ೧ ರವರೆಗೆ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಆಸಕ್ತರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

Read More