ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರೈತರ ಕೃಷಿ ಪಂಪಸೆಟ್‌ಗಳಿಗೆ ಸೋಲಾರ ಮುಖಾಂತರ ವಿದ್ಯುತ್ ಸರಬರಾಜು ಮಾಡುವ ಪಿಎಂ ಕುಸುಮ್ ಪೀಡರ್ ಲೇವಲ್ ಸೋಲರೈಸೆಷನ್ ಯೋಜನೆಯಡಿ ಸೌರ ಘಟಕಗಳನ್ನು ಸ್ಥಾಪಿಸಲು ವಿಜಯಪುರ ಜಿಲ್ಲೆಯ ಬುರಣಾಪೂರ ಗ್ರಾಮದ ರಿಸನಂ.೫೩ರ ೩೧೯ ಎಕರೆ, ೨೯ ಗುಂಟೆ ಪೈಕಿ ೩೦ ಎಕರೆ ೮ ಗುಂಟೆ ಹಾಗೂ ರಿಸನಂ ೯ರ ೧೯೩ ಎಕರೆ ೩೩ ಗುಂಟೆ ಪೈಕಿ ೭ ಎಕರೆ ೩೨ ಗುಂಟೆ ಹೀಗೆ ಒಟ್ಟು ೩೮ ಎಕರೆ ಗಾಯರಾಣ ಜಮೀನು ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಕಾಯ್ದಿರಿಸಲಾಗಿದೆ. ಇದಕ್ಕೆ ಸಂಬAಧಪಟ್ಟAತೆ ಸಾರ್ವಜನಿಕರು ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆ ಹೊರಡಿಸಿದ ೩೦ ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
