ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೪-೨೫ನೇ ಸಾಲಿನಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗಾಗಿ “ಯುವನಿಧಿ ವಿಶೇಷ ನೊಂದಣಿ ಅಭಿಯಾನ”ವನ್ನು ಜ.೬ ರಿಂದ ೨೦ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕದಲ್ಲಿ ಕನಿಷ್ಠ ೬ ವರ್ಷ ಪದವಿ/ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಅಧ್ಯಯನ ಮಾಡಿದವರು, ತೇರ್ಗಡೆ ಹೊಂದಿ ೧೮೦ದಿನಗಳ ನಂತರವ ಉದ್ಯೋಗ ದೊರಕದೆ/ ಉನ್ನತ ವ್ಯಾಸಾಂಗಕ್ಕೆ ವಿದ್ಯಾಭ್ಯಾಸ ಮುಂದುವರಿಸದ ಅಭ್ಯರ್ಥಿ, ಸ್ವಯಂ ಉದ್ಯೋಗ ಹೊಂದಿಲ್ಲದ ಅಭ್ಯರ್ಥಿ ಈ ಯೋಜನೆಗೆ ಅರ್ಹವಾಗಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://yuvanidhischeme.in/ಗೆ ಸಂಪರ್ಕಿಸಬಹುದು ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
