ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕುಡಿಯುವ ನೀರು ಒದಗಿಸುವ ಯೋಜನೆಯಡಿ ಜಿಲ್ಲೆಯ ಮುದ್ದೇಬಿಹಾಳ ಹಾಗೂ ಸಿಂದಗಿ ತಾಲೂಕಿನ ೩೪೩ ಜನವಸತಿಗಳಿಗೆ ಹಾಗೂ ೬ ಪುರಸಭೆಗಳಿಗೆ Zonal Balancing Reservoirನೀರಿನ ಘಟಕಗಳನ್ನು ನಿರ್ಮಿಸಲು ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದ ರಿಸನಂ.೩೭ರ ೪೮ ಎಕರೆ, ೪ಗುಂಟೆ ಹಾಗೂ ಸದರಿ ಗ್ರಾಮದ ಧನಗಳು ನಿಲ್ಲುವ ಬಗ್ಗೆ ಕ್ಷೇತ್ರ ೩೭ಎ- ೩೪ಗು ಪೈಕಿ ಕ್ಷೇತ್ರ ೧ಎ – ೨೦ಗು ಜಮೀನನ್ನು ಮಂಜೂರು ಮಾಡಿಸುವ ಕುರಿತು ಗಾಯರಾಣ ಜಮೀನು ಮಂಜೂರಿಸುವ ಕುರಿತು ಅದುಸೂಚಿಯಲ್ಲಿ ತಿಳಿಸಿರುವಂತೆ ಸಾರ್ವಜನಿಕರ ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆ ಹೊರಡಿಸಿದ ೩೦ ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
