Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಬುಧವಾರ ಜರುಗಿತು. ಅಧ್ಯಕ್ಷರಾಗಿ ಚಂದ್ರಶೇಖರ.ಎಸ್. ಬೆಳ್ಳುಬ್ಬಿ, ಉಪಾಧ್ಯಕ್ಷರಾಗಿ ಈರಯ್ಯ.ಹ. ಮಠಪತಿ ಅವಿರೋಧವಾಗಿ ಆಯ್ಕೆಯಾದರು.ಒಟ್ಟು 12 ನಿರ್ದೇಶಕರ ನೇತೃತ್ವದ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ.ಎಸ್. ಬೆಳ್ಳುಬ್ಬಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಈರಯ್ಯ.ಹ. ಮಠಪತಿ ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ ಚುನಾವಣಾಧಿಕಾರಿ ಎಲ್.ಆರ್. ಕೆಲವಡಿ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಕಲ್ಲಪ್ಪ.ಈ ಗಿಡ್ಡಪ್ಪಗೋಳ, ಕಲ್ಲಪ್ಪ.ಬ ಸೊನ್ನದ, ರಮೇಶ.ಸಂ ಗಣಿ, ಪರಸಪ್ಪ.ಹ ಬಾಟಿ, ಕಲಂದರ.ಮೈ ಕಂಕರಪೀರ, ಶ್ರೀಮತಿ ಅನ್ನಪೂರ್ಣ.ಈ ಜಿಡ್ಡಬಾಗಿಲ, ಶ್ರೀಮತಿ ಶೀವಗಂಗವ್ವ.ಅ ಗಣಿ, ಕಾಸಪ್ಪ.ಸಂ ಕುದುರಿ, ಹಣಮಂತ.ಬ ಕೊಠಾರಿ, ಶರಣಪ್ಪ.ಶಿ ಬಾಲಗೊಂಡ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ ಬಾಟಿ ಸಹಿತ ಅನೇಕರು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಗದಗ: ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಬುದಪ್ಪ ಅಂಗಡಿ ಅವರ ಗದುಗಿನಲ್ಲಿರುವ ಮನೆಗೆ ಬುಧವಾರ ಬೇಟಿ ನೀಡಿ ಆರೋಗ್ಯ ಕುಶಲೋಪರಿ ವಿಚಾರಿಸಿದರು.ಬುದಪ್ಪ ಅಂಗಡಿ ಅವರ 19 ವಯಸ್ಸಿನ ಸುಪುತ್ರ ಸಿದ್ದಲಿಂಗೇಶ್ವರ ಅಂಗಡಿ ಅಂಗವೈಕಲ್ಯತೆ ನೂನ್ಯತೆಯಿಂದ ಬಳಲುತ್ತಿದ್ದು ಅವರ ಆರೋಗ್ಯ ಸಮಸ್ಯೆಗಳನ್ನು ಆಲಿಸಿದರು. ಸಿದ್ದಲಿಂಗೇಶ್ವರನ ಕೃಪಾದಯೆ ಈ ಜೀವಿತ ಸಿದ್ದಲಿಂಗೇಶ್ವರ ಜೀವದ ಮೇಲೆ ಬೀರಲಿ.ಆರೋಗ್ಯ ಪರತೆ ಸುಧಾರಿಸಲಿ ಎಂದು ಆಶಿಸಿ ಶುಭಹರಿಸಿದರು.ಅಂಗಡಿ ಅವರ ಮನೆಯಲ್ಲಿ ಶ್ರೀಗಳು ಪೂಜಾ,ಪ್ರಸಾದ ಸ್ವೀಕರಿಸಿದರು. ಈ ವೇಳೆ ಬೂದಪ್ಪ ಅಂಗಡಿ ಹಾಗೂ ಕುರ್ತಕೋಟಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಸರೋಜಾ ಅಂಗಡಿ ದಂಪತಿಗಳಿಗೆ ಹೂಮಾಲೆ ಹಾಕಿ ಸ್ವಾಮೀಜಿಯವರು ಸತ್ಕರಿಸಿ ಆಶೀರ್ವದಿಸಿದರು.ಅಂಗಡಿಯವರ ಮನೆ ಹತ್ತಿರದಲ್ಲೇ ಶಾಲಾ ಶಿಕ್ಷಣ ಇಲಾಖೆ ಉಪನಿದೇ೯ಶಕರಾದ ಆರ್.ಎಸ್.ಬುರಡಿ ಅವರ ನಿವಾಸ ಇದಿದ್ದರಿಂದ ಅವರು ಸಹ ಸಹಜವಾಗಿ ಆಗಮಿಸಿದರು. ಸಮಾಜದ ಪ್ರಮುಖರಾದ ಅಯ್ಯಪ್ಪ ಅಂಗಡಿ, ಬಸವರಾಜ ಗಡೇಪ್ಪನವರ, ಸಂತೋಷ…
ಉದಯರಶ್ಮಿ ದಿನಪತ್ರಿಕೆ ಗದಗ: ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಬುದಪ್ಪ ಅಂಗಡಿ ಅವರ ಗದುಗಿನಲ್ಲಿರುವ ಮನೆಗೆ ಬುಧವಾರ ಬೇಟಿ ನೀಡಿ ಆರೋಗ್ಯ ಕುಶಲೋಪರಿ ವಿಚಾರಿಸಿದರು.ಬುದಪ್ಪ ಅಂಗಡಿ ಅವರ 19 ವಯಸ್ಸಿನ ಸುಪುತ್ರ ಸಿದ್ದಲಿಂಗೇಶ್ವರ ಅಂಗಡಿ ಅಂಗವೈಕಲ್ಯತೆ ನೂನ್ಯತೆಯಿಂದ ಬಳಲುತ್ತಿದ್ದು ಅವರ ಆರೋಗ್ಯ ಸಮಸ್ಯೆಗಳನ್ನು ಆಲಿಸಿದರು. ಸಿದ್ದಲಿಂಗೇಶ್ವರನ ಕೃಪಾದಯೆ ಈ ಜೀವಿತ ಸಿದ್ದಲಿಂಗೇಶ್ವರ ಜೀವದ ಮೇಲೆ ಬೀರಲಿ.ಆರೋಗ್ಯ ಪರತೆ ಸುಧಾರಿಸಲಿ ಎಂದು ಆಶಿಸಿ ಶುಭಹರಿಸಿದರು.ಅಂಗಡಿ ಅವರ ಮನೆಯಲ್ಲಿ ಶ್ರೀಗಳು ಪೂಜಾ,ಪ್ರಸಾದ ಸ್ವೀಕರಿಸಿದರು. ಈ ವೇಳೆ ಬೂದಪ್ಪ ಅಂಗಡಿ ಹಾಗೂ ಕುರ್ತಕೋಟಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಸರೋಜಾ ಅಂಗಡಿ ದಂಪತಿಗಳಿಗೆ ಹೂಮಾಲೆ ಹಾಕಿ ಸ್ವಾಮೀಜಿಯವರು ಸತ್ಕರಿಸಿ ಆಶೀರ್ವದಿಸಿದರು.ಅಂಗಡಿಯವರ ಮನೆ ಹತ್ತಿರದಲ್ಲೇ ಶಾಲಾ ಶಿಕ್ಷಣ ಇಲಾಖೆ ಉಪನಿದೇ೯ಶಕರಾದ ಆರ್.ಎಸ್.ಬುರಡಿ ಅವರ ನಿವಾಸ ಇದಿದ್ದರಿಂದ ಅವರು ಸಹ ಸಹಜವಾಗಿ ಆಗಮಿಸಿದರು. ಸಮಾಜದ ಪ್ರಮುಖರಾದ ಅಯ್ಯಪ್ಪ ಅಂಗಡಿ, ಬಸವರಾಜ ಗಡೇಪ್ಪನವರ, ಸಂತೋಷ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕಾಲುವೆಗಾಗಿ ವಶಪಡಿಸಿಕೊಂಡಿದ್ದ ರೈತರ ಜಮೀನಿಗೆ, ನ್ಯಾಯಾಲಯ ನೀಡಿದ ತೀರ್ಪಿನಂತೆ ಪರಿಹಾರ ನೀಡದ ಕಾರಣ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯದ ಎರಡು ಕಂಪ್ಯೂಟರ್ ಗಳನ್ನು ಬುಧವಾರ ಜಪ್ತಿ ಮಾಡಲಾಯಿತು.ಬಸವನಬಾಗೇವಾಡಿ ತಾಲ್ಲೂಕಿನ ನಂದಿಹಾಳ ಪಿಎಚ್ ಗ್ರಾಮದ ತಾರಾನಾಥ ದೊಡಬಸಪ್ಪ ದೇಸಾಯಿ ಹಾಗೂ ಮತ್ತೀತರರಿಗೆ ಸೇರಿದ ನಾಲ್ಕು ಎಕರೆ ಜಮೀನನ್ನು ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಲುವೆಗಾಗಿ ವಶಪಡಿಸಿಕೊಳ್ಳಲಾಗಿತ್ತು.ಸರ್ಕಾರ ನಿಗದಿಪಡಿಸಿದ ಪರಿಹಾರಕ್ಕಿಂತಲೂ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ರೈತ ತಾರಾನಾಥ ಮತ್ತೀತರರು ಕೋರ್ಟ್ ಮೊರೆ ಹೋಗಿದ್ದರು. ವಿಜಯಪುರದ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನಾಲ್ಕು ಎಕರೆಗೆ ೧.೬೭ ಕೋಟಿ ರೂ ಪರಿಹಾರ ನೀಡುವಂತೆ ಆದೇಶಿಸಿ ೧೫-೦೯-೨೦೨೧ ರಲ್ಲಿ ತೀರ್ಪು ನೀಡಿತ್ತು. ಪರಿಹಾರ ಹಣ ರೈತರಿಗೆ ನೀಡುವವರೆಗೂ ವಾರ್ಷಿಕ ೧೫% ಬಡ್ಡಿಯನ್ನು ವಿಧಿಸಿತ್ತು. ತೀರ್ಪು ಪ್ರಕಟಿಸಿ ನಾಲ್ಕು ವರ್ಷ ಕಳೆದರೂ ರೈತನಿಗೆ ಪರಿಹಾರ ನೀಡದ ಕಾರಣ ಅದೇ ನ್ಯಾಯಾಲಯ, ವಿಶೇಷ ಭೂಸ್ವಾಧಿನಾಧಿಕಾರಿಗಳ ಕಾರ್ಯಾಲಯದ ಕಂಪ್ಯೂಟರ್ ಜಪ್ತಿಗೆ ಆದೇಶಿಸಿತ್ತು.ನ್ಯಾಯಾಲಯದ ಆದೇಶದಂತೆ ಬುಧವಾರ, ರೈತರ…
ಹೆಸ್ಕಾಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಂಜಿನಿಯರ್, ಲೈನ್ ಮ್ಯಾನ್ ಗಳು ಹಾಗೂ ಜನಪ್ರತಿನಿಧಿಗಳು ನೇರ ಸಂಪರ್ಕಕ್ಕೆ ಬರುವುದರ ಮೂಲಕ ವಿದ್ಯುತ್ ತೊಂದರೆಗಳನ್ನು ಸರಿಪಡಿಸಬಹುದು ಎಂದು ರಾಜ್ಯ ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.ರಾಜ್ಯದ ಇಂದನ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಮದ್ಯಾಹ್ನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ಹಾಗೂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ವಿಜಯಪುರ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳೊಂದಿಗೆ ಇಂಧನ ಇಲಾಖೆಯ ವಿವಿಧ ವಿಷಯಗಳ ಚರ್ಚಿಸುವ ಕುರಿತು ಆಯೋಜಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಕೃಷಿ ವಲಯದ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ‘ಪಿಎಂ ಕುಸುಮ ಯೋಜನೆ’ ಅಡಿಯಲ್ಲಿ ಜಮೀನಿನಲ್ಲಿ ಸೋಲಾರ್ ಪಂಪ್ ಅಳವಡಿಸುವ ರೈತರಿಗೆ ೪೦ ಎಕರೆ ಭೂಮಿಯ ಅವಶ್ಯಕತೆ ಇರುವುದಾಗಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಮಾದಿಗರ ಸಂಘ (ರಿ ) ವಿಜಯಪುರ ಗಾಂಧಿನಗರದಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ನಡೆದ ಅಮಾನುಷವಾಗಿ ಕೂಲಿ ಕಾರ್ಮಿಕರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಮಾನ್ಯ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಕರ್ನಾಟಕ ಮಾದಿಗ ಸಂಘದ ಜಿಲ್ಲಾಧ್ಯಕ್ಷ ಶ್ರೀಶೈಲ ರತ್ನಾಕರ್ ಅವರು ಮಾತನಾಡಿ, ವಿಜಯಪುರ ಗಾಂಧಿನಗರದಲ್ಲಿರುವ ( ಸ್ಟಾರ್ ಚೌಕ್) ಇಟ್ಟಂಗಿ ಬಟ್ಟಿಯಲ್ಲಿ ಪ್ರತಿದಿನ 600 ರೂಪಾಯಿ ಗೆ ಕೆಲಸ ಮಾಡುತ್ತಿದ್ದ 1) ಸದಾಶಿವ ಮಾದರ,2) ಸದಾಶಿವ ಬಬಲಾದ್ 3) ಉಮೇಶ್ ಮಾದರ ಅವರು ಸಾ / ಚಿಕ್ಕಲಕಿ, ತಾಲೂಕು ಜಮಖಂಡಿ ಜಿಲ್ಲಾ ಬಾಗಲಕೋಟೆಯವರಾಗಿದ್ದು ಈ ಮೂರು ಕೂಲಿ ಕಾರ್ಮಿಕರ ಮೇಲೆ ೧೬-೦೧-೨೦೨೫ ರಂದು ಊರಿನಿಂದ ಸಂಕ್ರಮಣ ಹಬ್ಬ ಮುಗಿಸಿಕೊಂಡು ಮರಳಿ ಕೆಲಸಕ್ಕೆ ಬಂದಾಗ ಇವರು ತಡವಾಗಿ ಬಂದಿದ್ದಾರೆ ಎಂದು ಇಟ್ಟಂಗಿ ಬಟ್ಟೆ ಮಾಲೀಕನಾದ, ಖೆಮು ರಾಥೋಡ್, ಮತ್ತು ಅವನ ಮಗನಾದ ಮೋಹನ್ ರಾಟೋಡ್, ಮತ್ತು ಇತರ ತಮ್ಮ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಡೊಂಕಮಡು ಗ್ರಾಮ, ಪಟ್ಟಣದ ಶಿರೋಳ ರಸ್ತೆಯಲ್ಲಿರುವ ಆಶ್ರಯ ಕಾಲೋನಿ ಮತ್ತು ಹಡಲಗೇರಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಬುಧವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ಪರಿಶೀಲಿಸಿದರು.ಸರ್ಕಾರಿ ಆಸ್ಪತ್ರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡೊಂಕಮಡು ಗ್ರಾಮಕ್ಕೆ ಬಸ್ಸಿನ ಕೊರತೆ, ಉದ್ಯೋಗ ಖಾತ್ರಿ ಬಗ್ಗೆ ಎಷ್ಟು ಜನಕ್ಕೆ ಕೆಲಸಾ ಕೊಡ್ತಾರೆ ಏನು ಅಂತಾ ಸರಿಯಾದ ಮಾಹಿತಿ ಯಾವ ಸಾರ್ವಜನಿಕರಿಗೂ ಇಲ್ಲ. ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರಾಟ, ಶೌಚಾಲಯಗಳ ಕೊರತೆ, ಮುಖ್ಯ ರಸ್ತೆಯ ಸೇತುವೆ ತೊಂದರೆ, ಮೊಸಳೆ ಇದೆ ಎಂದು ದೂರಿದರೂ ಯಾರೊಬ್ಬರೂ ಪರಿಶೀಲಿಸದಿರುವದು, ಎಸ್‌ಸಿ ಎಸ್‌ಟಿ ಕಾಲೋನಿಗಳಲ್ಲಿ ರಸ್ತೆ ಇಲ್ಲ, ಕುಡಿಯುವ ನೀರಿಲ್ಲ, ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ, ಲೈಬ್ರರಿ ಇಲ್ಲ, ಜಲಜೀವನ ಮಿಶನ್ ಮಿಶನ್ ಅಡಿ ಇರುವ ಪೈಪ್‌ಗಳಲ್ಲಿ ಎಲ್ಲೂ ನೀರು ಬರೊಲ್ಲ. ಕೋಟ್ಯಾಂತರ ರೂಪಾಯಿಗಳ ಎಸ್‌ಸಿ ಎಸ್‌ಟಿ ಫಂಡ್ಸ್ ಏನ್ಮಾತ್ತಿದ್ದಾರೆೆ? ಎಲ್ಲೆಲ್ಲಿಗೆ ಡೈವರ್ಟ ಮಾಡ್ತಿದ್ದಾರೆ? ಯಾರ ತಗೋತಾರೆ? ಎಂದು ಬೇಸರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇತ್ತೀಚಿಗೆ ಜಿಲ್ಲೆಯ ಬಸವನಗರದ ಖೇಮು ರಾಠೋಡ ಮಾಲೀಕತ್ವದ ಇಟ್ಟಂಗಿ ಬಟ್ಟಿಯಲ್ಲಿ ನಡೆದ ಹಲ್ಲೆ ಗಾಯಗೊಳಗಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಮಿಕರ ಯೋಗ್ಯಕ್ಷೇಮವನ್ನು ವಿಚಾರಿಸಿದರು. ಕಾರ್ಮಿಕರಿಗೆ ಅವರಿಗೆ ಪರಿಹಾರ ಹಣ ಮತ್ತು ಉದ್ಯೋಗ ನೀಡಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.ಇಟ್ಟಂಗಿ ಬಟ್ಟಿ ನೊಂದಣಿಯನ್ನು ರದ್ದು ಪಡಿಸಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ. ಉಳಿದವರ ಬಂಧನಕ್ಕೆ ವಿಶೇಷ ತಂಡ ರಚನೆಯಾಗಿದೆ. ಕಾಲಕಾಲಕ್ಕೆ ಜಿಲ್ಲೆಯಲ್ಲಿರುವ ಇಟ್ಟಂಗಿ ಬಟ್ಟಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಯೋಗಕ್ಷೇಮ ವಿಚಾರಿಸಲು ಸಮೀತಿ ರಚಿಸಲಾಗಿದ್ದು, ತಹಶೀಲ್ದಾರ, ತಾಲೂಕು ಮುಖ್ಯ ನಿರ್ವಾಕ ಅಧಿಕಾರಿ, ಕಾರ್ಮಿಕಾಧಿಕಾರಿ, ತಾಲೂಕು ಆರೋಗ್ಯ ಅಧಿಕಾರಿ ಹಾಗೂ ಜಿಲ್ಲಾ ಸ್ಥಳೀಯ ಸಂಘಟಕರು ಸೇರಿದಂತೆ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ, ಶವಾಗಾರ ಹಾಗೂ ಇತರ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಲ್ಲಿನ ವ್ಯವಸ್ಥೆಗಳ ಕುರಿತು ಮಾಹಿತಿ…
ಲೀನ್ ಯೋಜನೆ ಮತ್ತು ಝಡ್.ಇ.ಡಿ ಹಾಗೂ ರಫ್ತು ಕುರಿತು ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯು ಕೃಷಿ ಪ್ರಧಾನವಾದ ಜಿಲ್ಲೆಯಾಗಿದೆ. ಶೇ ೮೦ ರಷ್ಟು ಕೃಷಿ ಚಟುವಟಿಕೆಯಿಂದ ಆರ್ಥಿಕ ವ್ಯವಹಾರಗಳು ನಡೆಯುತ್ತಿವೆ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪನೆಯಾದಲ್ಲಿ ಉದ್ಯೋಗ ಸೃಷ್ಟಿ, ಸಾರ್ವಜನಿಕ ವಹಿವಾಟು, ರಫ್ತು, ಆದಾಯ ಹೆಚ್ಚಿಗೆ ನಿರೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ಬುಧವಾರ ನಗರದ ಸ್ಪೂರ್ತಿ ರೆಸಾರ್ಟನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರ ವ್ಯಾಪಾರ ಉತ್ತೇಜನಾ ಕೇಂದ್ರ, ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಎಂ.ಎಸ್.ಎಂ.ಇ ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವು ಯೋಜನೆಯಡಿಯಲ್ಲಿ ಲೀನ್ ಯೋಜನೆ ಮತ್ತು ಝಡ್.ಇ.ಡಿ ಹಾಗೂ ರಫ್ತು ಕುರಿತು ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ನಮ್ಮ ಜಿಲ್ಲೆಯಲ್ಲಿರುವ ಸಂಪನ್ಮೂಲಗಳನ್ನು ಸದುಪಯೋಗ ಪಡಿಸಿಕೊಂಡು ಸರ್ಕಾರ, ಜಿಲ್ಲಾಡಳಿತ ಹಾಗೂ ವಿವಿಧ ಸಂಸ್ಥೆಗಳು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇ.ಪಿ.ಎಸ್.೯೫ ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ರೂ. ೭೫೦೦ +ಡಿ.ಎ. + ಮೆಡಿಕಲ್ ಬೇಡಿಕೆ ಈಡರಿಸಲೇಬೇಕೆಂದು ಆಗ್ರಹಿಸಿ ಸುಮಾರು ೩೦೦ಕ್ಕೂ ಹೆಚ್ಚು ಪಿಂಚಣಿದಾರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಿ ಮೋದಿಜಿಯವರಿಗೆ ಹಾಗೂ ಸಂಸದ ರಮೇಶ ಜಿಗಜಿಣಗಿಯವರಿಗೆ ಅವರ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿದರು.ವೀರಕುಮಾರ ಗಡಾದ ಉಪಾಧ್ಯಕ್ಷ ರಾಷ್ಟ್ರೀಯ ಸಂಘರ್ಷ ಸಮಿತಿ ಇವರ ನೇತೃತ್ವದಲ್ಲಿ ಮನವಿ ಸಲ್ಲಿಸಿ ಕೇಂದ್ರ ಸರಕಾರದ ಗಮನ ಸೆಳೆಯುವಂತೆ ಕೋರಲಾಯಿತು.ಕೇಂದ್ರ ಸರಕಾರ ಈ ಬಜೆಟಿನಲ್ಲಿ ಕನಿಷ್ಠ ಪಿಂಚಣಿ ರೂ ೭೫೦೦ + ಡಿ.ಎ. + ಮೆಡಿಕಲ್ ಘೋಷಿಸಿ ಮಂಜೂರು ಮಾಡಲೇಬೇಕು ಇಲ್ಲದಿದ್ದರೆ ಈಗಾಗಲೇ ೭೦-೮೦ ವರ್ಷ ದಾಟುತ್ತಿರುವ ವೃದ್ಧ ಪಿಂಚಣಿದಾರರು ಉಗ್ರ ಹೋರಾಟಕ್ಕೆ ಇಳಿದು ಆಮರಣ ಉಪವಾಸದಂತಹ ಆಂದೋಲನಕ್ಕೆ ಈಗಾಗಲೇ ಸಿದ್ಧಮಾಡಿಕೊಂಡಿದ್ದಾರೆ. ಸರಕಾರ ಇಂತಹ ಸ್ಥಿತಿ ತಂದೊದಗಿಸದೇ ಕನಿಷ್ಠ ಪಿಂಚಣಿ ಹೆಚ್ಚಳ ಮಾಡಿ ದೇಶದ ವೃದ್ಧ ಪಿಂಚಣಿದಾರರನ್ನು ರಕ್ಷಿಸಬೇಕೆಂದು ಎಸ್.ಜೆ. ಗೌಡರ ರಾಷ್ಟ್ರೀಯ ಸಂಘರ್ಷ ಸಮಿತಿ ವಿಜಯಪುರದ ಅಧ್ಯಕ್ಷರು, ಕಾರ್ಮಿಕ ಮುಖಂಡರಾದ ಆಯ್.ಎ. ಮುಶ್ರೀಫ, ಗೋಪಾಲ…
