ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಬುಧವಾರ ಜರುಗಿತು. ಅಧ್ಯಕ್ಷರಾಗಿ ಚಂದ್ರಶೇಖರ.ಎಸ್. ಬೆಳ್ಳುಬ್ಬಿ, ಉಪಾಧ್ಯಕ್ಷರಾಗಿ ಈರಯ್ಯ.ಹ. ಮಠಪತಿ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 12 ನಿರ್ದೇಶಕರ ನೇತೃತ್ವದ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ.ಎಸ್. ಬೆಳ್ಳುಬ್ಬಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಈರಯ್ಯ.ಹ. ಮಠಪತಿ ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ ಚುನಾವಣಾಧಿಕಾರಿ ಎಲ್.ಆರ್. ಕೆಲವಡಿ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಕಲ್ಲಪ್ಪ.ಈ ಗಿಡ್ಡಪ್ಪಗೋಳ, ಕಲ್ಲಪ್ಪ.ಬ ಸೊನ್ನದ, ರಮೇಶ.ಸಂ ಗಣಿ, ಪರಸಪ್ಪ.ಹ ಬಾಟಿ, ಕಲಂದರ.ಮೈ ಕಂಕರಪೀರ, ಶ್ರೀಮತಿ ಅನ್ನಪೂರ್ಣ.ಈ ಜಿಡ್ಡಬಾಗಿಲ, ಶ್ರೀಮತಿ ಶೀವಗಂಗವ್ವ.ಅ ಗಣಿ, ಕಾಸಪ್ಪ.ಸಂ ಕುದುರಿ, ಹಣಮಂತ.ಬ ಕೊಠಾರಿ, ಶರಣಪ್ಪ.ಶಿ ಬಾಲಗೊಂಡ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ ಬಾಟಿ ಸಹಿತ ಅನೇಕರು ಉಪಸ್ಥಿತರಿದ್ದರು.