ಉದಯರಶ್ಮಿ ದಿನಪತ್ರಿಕೆ
ಗದಗ: ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಬುದಪ್ಪ ಅಂಗಡಿ ಅವರ ಗದುಗಿನಲ್ಲಿರುವ ಮನೆಗೆ ಬುಧವಾರ ಬೇಟಿ ನೀಡಿ ಆರೋಗ್ಯ ಕುಶಲೋಪರಿ ವಿಚಾರಿಸಿದರು.
ಬುದಪ್ಪ ಅಂಗಡಿ ಅವರ 19 ವಯಸ್ಸಿನ ಸುಪುತ್ರ ಸಿದ್ದಲಿಂಗೇಶ್ವರ ಅಂಗಡಿ ಅಂಗವೈಕಲ್ಯತೆ ನೂನ್ಯತೆಯಿಂದ ಬಳಲುತ್ತಿದ್ದು ಅವರ ಆರೋಗ್ಯ ಸಮಸ್ಯೆಗಳನ್ನು ಆಲಿಸಿದರು. ಸಿದ್ದಲಿಂಗೇಶ್ವರನ ಕೃಪಾದಯೆ ಈ ಜೀವಿತ ಸಿದ್ದಲಿಂಗೇಶ್ವರ ಜೀವದ ಮೇಲೆ ಬೀರಲಿ.ಆರೋಗ್ಯ ಪರತೆ ಸುಧಾರಿಸಲಿ ಎಂದು ಆಶಿಸಿ ಶುಭಹರಿಸಿದರು.
ಅಂಗಡಿ ಅವರ ಮನೆಯಲ್ಲಿ ಶ್ರೀಗಳು ಪೂಜಾ,ಪ್ರಸಾದ ಸ್ವೀಕರಿಸಿದರು. ಈ ವೇಳೆ ಬೂದಪ್ಪ ಅಂಗಡಿ ಹಾಗೂ ಕುರ್ತಕೋಟಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಸರೋಜಾ ಅಂಗಡಿ ದಂಪತಿಗಳಿಗೆ ಹೂಮಾಲೆ ಹಾಕಿ ಸ್ವಾಮೀಜಿಯವರು ಸತ್ಕರಿಸಿ ಆಶೀರ್ವದಿಸಿದರು.
ಅಂಗಡಿಯವರ ಮನೆ ಹತ್ತಿರದಲ್ಲೇ ಶಾಲಾ ಶಿಕ್ಷಣ ಇಲಾಖೆ ಉಪನಿದೇ೯ಶಕರಾದ ಆರ್.ಎಸ್.ಬುರಡಿ ಅವರ ನಿವಾಸ ಇದಿದ್ದರಿಂದ ಅವರು ಸಹ ಸಹಜವಾಗಿ ಆಗಮಿಸಿದರು. ಸಮಾಜದ ಪ್ರಮುಖರಾದ ಅಯ್ಯಪ್ಪ ಅಂಗಡಿ, ಬಸವರಾಜ ಗಡೇಪ್ಪನವರ, ಸಂತೋಷ ಅಕ್ಕಿ, ಶಿವಾನಂದ ಅಂಗಡಿ, ಲಲಿತಾ ಅಂಗಡಿ ಸೇರಿದಂತೆ ಹಲವಾರು ಭಕ್ತರು ಇದ್ದರು.