ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಮಾದಿಗರ ಸಂಘ (ರಿ ) ವಿಜಯಪುರ ಗಾಂಧಿನಗರದಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ನಡೆದ ಅಮಾನುಷವಾಗಿ ಕೂಲಿ ಕಾರ್ಮಿಕರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಮಾನ್ಯ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ಮಾದಿಗ ಸಂಘದ ಜಿಲ್ಲಾಧ್ಯಕ್ಷ ಶ್ರೀಶೈಲ ರತ್ನಾಕರ್ ಅವರು ಮಾತನಾಡಿ, ವಿಜಯಪುರ ಗಾಂಧಿನಗರದಲ್ಲಿರುವ ( ಸ್ಟಾರ್ ಚೌಕ್) ಇಟ್ಟಂಗಿ ಬಟ್ಟಿಯಲ್ಲಿ ಪ್ರತಿದಿನ 600 ರೂಪಾಯಿ ಗೆ ಕೆಲಸ ಮಾಡುತ್ತಿದ್ದ 1) ಸದಾಶಿವ ಮಾದರ,2) ಸದಾಶಿವ ಬಬಲಾದ್ 3) ಉಮೇಶ್ ಮಾದರ ಅವರು ಸಾ / ಚಿಕ್ಕಲಕಿ, ತಾಲೂಕು ಜಮಖಂಡಿ ಜಿಲ್ಲಾ ಬಾಗಲಕೋಟೆಯವರಾಗಿದ್ದು ಈ ಮೂರು ಕೂಲಿ ಕಾರ್ಮಿಕರ ಮೇಲೆ ೧೬-೦೧-೨೦೨೫ ರಂದು ಊರಿನಿಂದ ಸಂಕ್ರಮಣ ಹಬ್ಬ ಮುಗಿಸಿಕೊಂಡು ಮರಳಿ ಕೆಲಸಕ್ಕೆ ಬಂದಾಗ ಇವರು ತಡವಾಗಿ ಬಂದಿದ್ದಾರೆ ಎಂದು ಇಟ್ಟಂಗಿ ಬಟ್ಟೆ ಮಾಲೀಕನಾದ, ಖೆಮು ರಾಥೋಡ್, ಮತ್ತು ಅವನ ಮಗನಾದ ಮೋಹನ್ ರಾಟೋಡ್, ಮತ್ತು ಇತರ ತಮ್ಮ ಹದಿನೈದು ಬೆಂಬಲಿಗರೊಂದಿಗೆ ಸತತವಾಗಿ ಭೀಕರವಾಗಿ ಹಲ್ಲೆ ಮಾಡಿಸಿದ್ದಾರೆ. ಮೂರು ದಿನಗಳವರೆಗೆ ಕೋಣೆಯಲ್ಲಿ ಕೂಡಿಹಾಕಿ 15 ನಿಮಿಷಗಳಿಗೊಮ್ಮೆ ಒಬ್ಬರಾದ ಮೇಲೆ ಒಬ್ಬರು ಸತತವಾಗಿ ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಕೂಲಿ ಕಾರ್ಮಿಕರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಈ ಮೂರು ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ಎಸೆಗಿರುವಾರ ಮೇಲೆ ಕಠಿಣ ಕ್ರಮ ಕೈಗೊಂಡು, ಅವರ ಆಸ್ತಿಗೆಯನ್ನು ಮುಟ್ಟುಗಳಾಗಿಕೊಳ್ಳಬೇಕು, ಮತ್ತು ಅವರ ಲೈಸೆನ್ಸ್ ಅನ್ನು ರದ್ದುಪಡಿಸಬೇಕು, ಅವರ ಮೇಲೆ ರೌಡಿಶೀಟರ್ ದಾಖಲಿಸಿ ಗಡಿಪಾರು ಮಾಡಬೇಕು, ಇಲ್ಲದಿದ್ದರೆ ನಮ್ಮ ಸಂಘಟನೆ ವತಿಯಿಂದ ಜಿಲ್ಲಾಧ್ಯದಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರಶುರಾಮ ರೋಣಿಹಾಳ್, ಧರ್ಮರಾಜ್ ಹೊಸೂರ, ಪ್ರಶಾಂತ ದೊಡ್ಮನಿ, ಹಣಮಂತ ದೊಡ್ಡಮನಿ, ಹೆಚ್ ಬಿ ದೊಡ್ಮನಿ, ಧರ್ಮಣ್ಣ ಮಾದರ, ಶಾಸ್ತ್ರಿ ಹೊಸಮನಿ, ವಿಠಲ ಸಂಧಿ ಮನೆ, ಸದಾನಂದ ಗುನ್ನಾಪುರ್, ಶಿವಾನಂದ್ ನಂದ್ಯಾಳ್, ರವಿ ನಾಗೂರ್, ಸಿದ್ದು ಪೂಜಾರಿ , ಯಲ್ಲು ಇಂಗಳಗಿ, ಸೋಮನಾಥ ನಡಗೇರಿ, ವಿಜಯ್ ಮಾದರ ಮತ್ತು ಇತರರು ಉಪಸ್ಥಿತರಿದ್ದರು.