ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇ.ಪಿ.ಎಸ್.೯೫ ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ರೂ. ೭೫೦೦ +ಡಿ.ಎ. + ಮೆಡಿಕಲ್ ಬೇಡಿಕೆ ಈಡರಿಸಲೇಬೇಕೆಂದು ಆಗ್ರಹಿಸಿ ಸುಮಾರು ೩೦೦ಕ್ಕೂ ಹೆಚ್ಚು ಪಿಂಚಣಿದಾರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಿ ಮೋದಿಜಿಯವರಿಗೆ ಹಾಗೂ ಸಂಸದ ರಮೇಶ ಜಿಗಜಿಣಗಿಯವರಿಗೆ ಅವರ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿದರು.
ವೀರಕುಮಾರ ಗಡಾದ ಉಪಾಧ್ಯಕ್ಷ ರಾಷ್ಟ್ರೀಯ ಸಂಘರ್ಷ ಸಮಿತಿ ಇವರ ನೇತೃತ್ವದಲ್ಲಿ ಮನವಿ ಸಲ್ಲಿಸಿ ಕೇಂದ್ರ ಸರಕಾರದ ಗಮನ ಸೆಳೆಯುವಂತೆ ಕೋರಲಾಯಿತು.
ಕೇಂದ್ರ ಸರಕಾರ ಈ ಬಜೆಟಿನಲ್ಲಿ ಕನಿಷ್ಠ ಪಿಂಚಣಿ ರೂ ೭೫೦೦ + ಡಿ.ಎ. + ಮೆಡಿಕಲ್ ಘೋಷಿಸಿ ಮಂಜೂರು ಮಾಡಲೇಬೇಕು ಇಲ್ಲದಿದ್ದರೆ ಈಗಾಗಲೇ ೭೦-೮೦ ವರ್ಷ ದಾಟುತ್ತಿರುವ ವೃದ್ಧ ಪಿಂಚಣಿದಾರರು ಉಗ್ರ ಹೋರಾಟಕ್ಕೆ ಇಳಿದು ಆಮರಣ ಉಪವಾಸದಂತಹ ಆಂದೋಲನಕ್ಕೆ ಈಗಾಗಲೇ ಸಿದ್ಧಮಾಡಿಕೊಂಡಿದ್ದಾರೆ. ಸರಕಾರ ಇಂತಹ ಸ್ಥಿತಿ ತಂದೊದಗಿಸದೇ ಕನಿಷ್ಠ ಪಿಂಚಣಿ ಹೆಚ್ಚಳ ಮಾಡಿ ದೇಶದ ವೃದ್ಧ ಪಿಂಚಣಿದಾರರನ್ನು ರಕ್ಷಿಸಬೇಕೆಂದು ಎಸ್.ಜೆ. ಗೌಡರ ರಾಷ್ಟ್ರೀಯ ಸಂಘರ್ಷ ಸಮಿತಿ ವಿಜಯಪುರದ ಅಧ್ಯಕ್ಷರು, ಕಾರ್ಮಿಕ ಮುಖಂಡರಾದ ಆಯ್.ಎ. ಮುಶ್ರೀಫ, ಗೋಪಾಲ ಬಿರಾದಾರ ಆಗ್ರಹಿಸಿದರು.
ಈ ಸಮಯದಲ್ಲಿ ಸಮಿತಿಯ ಗೌರವ ಉಪಾಧ್ಯಕ್ಷ ಶಾಂತಿನಾಥ ಪಾಟೀಲ, ವಸ್ತ್ರದ, ಅಲಗೊಂಡ, ಮುಂಡರಗಿ, ದೇಗಿನಾಳ, ಆಲಗುಂಡಿ, ರಜಪೂತ, ಪಾಟೀಲ, ಸಂಖ, ಸಾತಪುತೇ, ಗುರುಭಟ್ಟ, ತೋಂಡಿನವರ, ಜಹಾಗೀರದಾರ ಸುಮಾರು ೩೦೦ ಕ್ಕೂ ಹೆಚ್ಚು ಇ.ಪಿ.ಎಸ್. ೯೫ ಪಿಂಚಣಿದಾರರು ಭಾಗವಹಿಸಿದ್ದರು.