Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮಮದಾಪುರ: ಗ್ರಾಮೀಣ ಕರ್ನಾಟಕದಲ್ಲಿ ಶೈಕ್ಷಣಿಕ ವ್ಯವಸ್ಥೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿ ವಿಜಯಪುರದಲ್ಲಿ ತನ್ನ ಸಮಗ್ರ ಶೈಕ್ಷಣಿಕ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿತ್ತು.ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ್ ಅವರು ಮಾತನಾಡಿ, “ಸುಸ್ಥಿರ ಬೆಳವಣಿಗೆಗೆ ಮತ್ತು ಸಮಾಜದ ಏಳಿಗೆಗೆ ಗುಣಮಟ್ಟದ ಶಿಕ್ಷಣವೇ ಅಡಿಪಾಯ. ವಿಜಯಪುರದಲ್ಲಿ ಶೈಕ್ಷಣಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಸಂಸ್ಥೆಗೆ ಬದ್ಧತೆ ಮೆಚ್ಚುಗೆಗೆ ಅರ್ಹ. ಈ ಯೋಜನೆಯು ವಿದ್ಯಾರ್ಥಿಗಳ ತಕ್ಷಣದ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಅತ್ಯುತ್ತಮ ಭವಿಷ್ಯವನ್ನು ರೂಪಿಸಲು ಸೂಕ್ತ ಅಡಿಪಾಯವನ್ನು ಹಾಕಿಕೊಡಲಿದೆ. ಈ ಯೋಜನೆಯು ಸಾವಿರಾರು ಯುವ ಮನಸ್ಸುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿದರು.ಟಿಕೆಎಂನ ರಾಜ್ಯ ವ್ಯವಹಾರಗಳ ಮುಖ್ಯಸ್ಥರು, ಮುಖ್ಯ ಸಂವಹನ ಅಧಿಕಾರಿ, ಹಿರಿಯ ಉಪಾಧ್ಯಕ್ಷ ಸುದೀಪ್ ಎಸ್ ದಳವಿ, ಶಿಕ್ಷಣವು ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆ ಉಂಟು ಮಾಡುವ ಶಕ್ತಿಯನ್ನು ಹೊಂದಿದೆ ಎಂಬುದು ಟೊಯೋಟಾ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ವಿದ್ಯಾರ್ಥಿಗಳು ಶಾಲಾ, ಕಾಲೇಜು ಹಂತದಲ್ಲಿ ನಾಡು, ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತದ ಆಸಕ್ತಿ ಮತ್ತು ಅಭಿರುಚಿ ಅಳವಡಿಸಿಕೊಳ್ಳಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಹಿರಿಯ ಸಾಹಿತಿ ಸಿದ್ದರಾಮ ಹೊನ್ಕಲ್ ಹೇಳಿದರು.ಪಟ್ಟಣದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ವಲಯ ಕನ್ನಡ ಸಾಹಿತ್ಯ ಪರಿಷತ್ತು, ಸಹೋದರಿ ನಿವೇದಿತಾ ಸಹಕಾರಿ ಸಂಘ (ನಿ) ಸಹಯೋಗದಲ್ಲಿ ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ರವಿವಾರ ಹಮ್ಮಿಕೊಂಡಿರುವ ವಿಶೇಷ ಉಪನ್ಯಾಸ ಹಾಗೂ ಕವಿಗೋಷ್ಠಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ವಿಶೇಷ ಉಪನ್ಯಾಸ ನೀಡಿದ ಡಾ. ಯಂಕನಗೌಡ ಎಸ್ ಪಾಟೀಲ್, ವಚನ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು ಅಡಗಿವೆ, ಅವು ಸಾರ್ವಕಾಲಿಕ ಸತ್ಯವಾದವುಗಳು, ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರ, ಸಹಬಾಳ್ವೆ, ಸಮನ್ವಯತೆ, ಸಹೋದರತ್ವ, ಶಾಂತಿ, ಪರಿಕಲ್ಪನೆಯೇ ಸೌಹಾರ್ದತೆ ಮತ್ತು ಸಮಾನತೆ ಎಂದವರು, ಬಸವಾದಿ ಶರಣರು ಸ್ಥಾಪಿಸಿದ ಅನುಭವ ಮಂಟಪವೇ ಇಂದು ದೆಹಲಿಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯಾವುದೇ ಕಾರ್ಯವನ್ನು ನಿರ್ವಹಿಸಿದರು ಮೊದಲು ಅದರ ಮೂಲ ಆಶಯ ಏನಿದೆ ಎನ್ನುವುದನ್ನು ಅರಿತುಕೊಂಡು ಅದರ ಮೂಲ ಉದ್ಧೇಶಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುಭಾಷ ಸಂಕದ ಹೇಳಿದರು.೭೬ ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದ ಅವರು; ಕಾರ್ಯ ಯಾವುದೇ ಆಗಿರಲಿ ಅದರ ಮೂಲ ಉದ್ಧೇಶ ಬಹಳ ಮುಖ್ಯವಾಗಿರುತ್ತದೆ. ಅದನ್ನು ಅರಿತುಕೊಳ್ಳದೆ ಮಾಡುವ ಕಾರ್ಯ ಎಂದಿಗೂ ಯಶಸ್ವಿಯಾಗುವುದಕ್ಕೆ ಸಾಧ್ಯವಿಲ್ಲ. ಹಾಗೆಯೇ ನಮ್ಮ ದೇಶಕ್ಕಾಗಿ ನೀಡಿದ ಸಂವಿಧಾನದ ಮೂಲ ಉದ್ಧೇಶಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಾವುಗಳು ಬದುಕು ನಿರ್ವಹಿಸಬೇಕು. ಕೇವಲ ಹಕ್ಕುಗಳನ್ನು ಅನುಭವಿಸಿದರೆ ಸಾಲದು ಅದರ ಜೊತೆಯಲ್ಲಿ ಮೂಲಭೂತ ಕರ್ತವ್ಯಗಳನ್ನು ನೆರವೇರಿಸಬೇಕು. ಆಗ ಮಾತ್ರ ಸಂವಿಧಾನಕ್ಕೆ ನಾವು ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಅತಿಥಿ ಸ್ಥಾನವನ್ನು ಅಲಂಕರಿಸಿ, ಜನಸ್ನೇಹಿ ವಕೀಲ ಮಲ್ಲಿಕಾರ್ಜುನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದಿಂದ ೭೬ ನೇ ಗಣರಾಜ್ಯೋತ್ಸವವನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.ನಗರದ ಪತ್ರಿಕಾ ಭವನ ಹಾಗೂ ಹಳೆಯ ತಹಸೀಲ್ದಾರ ಕಚೆರಿ ಬಳಿಯಿರುವ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಟಿ. ಚೂರಿ ರಾಷ್ಟ್ರ ಧ್ವಜಾರೋಹಣ ನೇರವೇರಿಸಿ ಎಲ್ಲರಿಗೂ ಗಣರಾಜ್ಯೋತ್ಸವ ಶುಭಾಶಯ ಕೋರಿದರು.ಸಂಘದ ಖಜಾಂಚಿ ರಾಹುಲ ಆಪ್ಟೆ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಬಸವರಾಜ ಉಳ್ಳಾಗಡ್ಡಿ, ಸುನೀಲ ಗೋಡೆನ್ನವರ, ಗುರಪ್ಪ ಲೋಕುರಿ, ಸಲಹಾ ಸಮಿತಿ ಸದಸ್ಯರಾದ ದೇವೇಂದ್ರ ಹೆಳವರ, ಸೀತಾರಾಮ ಕುಲಕರ್ಣಿ, ಸಚೇಂದ್ರ ಲಂಬು, ಪತ್ರಕರ್ತರಾದ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಶಿವನಗೌಡ ಪಾಟೀಲ, ಮಲ್ಲಿಕಾರ್ಜುನ ಹೂಗಾರ, ಖಾಜಾ ಪಟೇಲ್, ಶರದ ಅರ್ಜುಣಗಿ, ಸರ್ವೇಶ ಕಟ್ಟಿ, ಸುನೀಲ ಭಜಂತ್ರಿ, ವಿಠ್ಠಲ ಲಂಗೋಟಿ, ನಾಗು ಚೋಳಕೆ ಮುಂತಾದವರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಗಣತಂತ್ರದ ಮೌಲ್ಯ ಎಲ್ಲರೂ ಅರಿಯಬೇಕು- ಮಲ್ಲು ದಾನಗೌಡಚಿಕ್ಕಪಡಸಲಗಿ : ನಮ್ಮೆಲ್ಲರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಬೇಕು. ಏಕತೆ,ಐಕ್ಯತೆಯುಳ್ಳ ಸಾಮರಸ್ಯದ ಭಾವ ಮೈದೇಳಬೇಕು.ಸಾರ್ವಭೌಮ ಪ್ರಬುದ್ಧಕ್ಕಾಗಿ ದೇಶಭಕ್ತಿವೆಂಬ ದಿವ್ಯತೆ ಮಂತ್ರ ಉತ್ಸಾಹದಿಂದ ಹೃದಯಾಂತರದಲ್ಲಿ ಹೊಂಕರಿಸಬೇಕು ಎಂದು ಶಾಲಾ ಆಡಳಿತ ಮಂಡಳಿ ಸದಸ್ಯ ಮಲ್ಲು ದಾನಗೌಡ ಹೇಳಿದರು.ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಜರುಗಿದ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸಂವಿಧಾನ ಜಾರಿಗೆ ಬಂದು ಇಂದಿಗೆ ಏಪ್ಪತ್ತೈದು ವಸಂತಗಳು ಸಂದಿವೆ. ಯುವಜನತೆ ಸೇರಿದಂತೆ ನಾವೆಲ್ಲರೂ ಇಂದು ಸಂವಿಧಾನದ ಆಶಯಗಳಿಗೆ ತಕ್ಕಂತೆ ಪ್ರಾಮಾಣಿಕತೆಯಿಂದ ನಡೆದುಕೊಂಡು ಸಾರ್ಥಕತೆ ಮೆರೆಯಬೇಕಾಗಿದೆ ಎಂದರು.ಪ್ರಜಾಸತ್ತಾತ್ಮಕ ಗಣರಾಜ್ಯ ಹೊಂದಿರುವ ನಾವುಗಳು ನಮ್ಮ ಕಾಯಕ ತತ್ವಗಳು ನ್ಯಾಯ ಸಮ್ಮತವಾಗಿರಬೇಕು. ಭ್ರಾತೃತ್ವದ ಮನೋಭಾವದಿಂದ ಸಾಗಬೇಕು.ಸಕಾರಾತ್ಮಕ ಧೋರಣೆಯೊಂದಿಗೆ ಮೌಲ್ಯಯುತ ಭಾವನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದ ಅವರು, ಸರಕಾರದ ಹಲವಾರು ಸೌಲಭ್ಯಗಳನ್ನು ಇಲ್ಲಿನ ಶಾಲಾ ಮಕ್ಕಳಿಗೆ ಒದಗಿಸಿಕೊಡುವ ಪ್ರಯತ್ನ ತಾವು ಪ್ರಾಮಾಣಿಕವಾಗಿ ಮಾಡುವುದಾಗಿ ಭರವಸೆ ನೀಡಿದರು.ಸ್ಥಾನಿಕ ಶಾಲಾ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಇತ್ತೀಚೆಗೆ ವೀರಮರಣ ಹೊಂದಿದ ಪಟ್ಟಣದ ಯೋಧ ರಾಜು ಕರ್ಜಗಿ ಅವರ ಪುತ್ಥಳಿ ನಿರ್ಮಾಣಕ್ಕೆ ಗಣರಾಜ್ಯೋತ್ಸವ ದಿನದಂದು ಗಣ್ಯರು ಅಡಿಗಲ್ಲು ಸಮಾರಂಭ ನೆರವೇರಿಸಿದರು.ಧ್ವಜಾರೋಹಣ ನೆರವೇರಿಸಿದ ಮಲ್ಲಿಕಾರ್ಜುನ ಹಂಜಗಿಯವರು ಪುತ್ಥಳಿ ನಿರ್ಮಾಣಕ್ಕೆ ₹ 25 ಸಾವಿರ ದೇಣಿಗೆ ನೀಡಿದರು. ಗಂಗಪ್ಪ ಕರಜಗಿ, ರುದ್ರಯ್ಯ ಸಾಲಿಮಠ, ಪ್ರಭಾವತಿ ನಾಟಿಕಾರ, ಲಕ್ಕಪ್ಪ ಹಂಜಗಿ, ಡಾ.ವಾಗ್ಮೋರೆ, ಮಾಯಪ್ಪ ಪಡಸಗಿ, ಮುತ್ತು ಹಂಜಗಿ, ಶಾಲಾ ಮಕ್ಕಳು, ಗ್ರಾಮಸ್ಥರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭಾರತ ಸಂವಿಧಾನವು ಸರ್ವರಿಗೂ ಸಮಾನತೆಯನ್ನು ಒದಗಿಸಿದೆ. ಮತ್ತು ಮೂಲಭೂತ ಕರ್ತವ್ಯಗಳನ್ನು ನೀಡಿ ನಮ್ಮೆಲ್ಲರನ್ನು ರಕ್ಷಿಸುವ ಕಾನೂನುಗಳನ್ನು ನೀಡುವ ಜೊತೆಗೆ ನಮ್ಮ ದೇಶದ ಪ್ರಜಾಪ್ರಭುತ್ವ ಬಲಪಡಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ ಹೇಳಿದರು.ಪಟ್ಟಣದ ನಾಗೂರ ಬಡಾವಣೆಯ ಸಮರ್ಥ ವಿದ್ಯಾವಿಕಾಸ ಸಂಸ್ಥೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡ ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ನೃತ್ಯ, ಭಾಷಣ, ಛದ್ಮವೇಷ, ಆಕರ್ಷಕ ಕವಾಯತು ಜರುಗಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ, ಮುಖ್ಯಗುರುಮಾತೆ ಎಮ್.ಪಿ.ಬುಕ್ಕಾ, ಸಾವಿತ್ರಿ ಅಸ್ಕಿ, ಸತೀಶ ಕುಲಕರ್ಣಿ, ಎಸ್.ಡಿ.ನಾಯಕ, ಎಸ್.ವಿ.ಕಡಣಿ, ಎಮ್.ಎಮ್.ಜುಮನಾಳ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂಧಿಗಳು ಇದ್ದರು.ಶ್ರೀ ಪದ್ಮರಾಜ ಮಹಿಳಾ ಕಾಲೇಜು:ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಕಾಲೇಜಿನಲ್ಲಿ ೭೬ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.ಇದೇ ವೇಳೆ ಪದವಿ ಪ್ರಾಚಾರ್ಯ ಎಸ್.ಎಂ ಪೂಜಾರಿ, ಪಪೂ ಕಾಲೇಜಿನ ಪ್ರಾಚಾರ್ಯ ಎಂ.ಎಸ್.ಹೈಯ್ಯಾಳಕರ, ಉಪನ್ಯಾಸಕರಾದ ಜಿ.ಎ.ನಂದಿಮಠ,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸರಕಾರದ ಅನೇಕ ಯೋಜನೆಗಳು ಕಂದಾಯ ಇಲಾಖೆ ಜನ ಸಾಮಾನ್ಯರ ಮನೆ ಬಾಗಿಲಿಗೆ ಮುಟ್ಟಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ನೆರವೇರಿಸುತ್ತಿದ್ದೇವೆ ಎಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾಡಳಿತ ಹಮ್ಮಿಕೊಂಡ ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಮಾತನಾಡಿ, ಭಾರತ ದೇಶ ಸಂವಿಧಾನವನ್ನು ಅಧೀಕೃತವಾಗಿ ಅಂಗೀಕರಿಸಿದ ದಿನವನ್ನು ನಾವೆಲ್ಲ ಅತ್ಯಂತ ಸಂಭ್ರಮದಿಂದ ಗಣರಾಜ್ಯೋತ್ಸವ ದಿನವನ್ನು ಆಚರಣೆ ಮಾಡುತ್ತಿದ್ದೇವೆ. ಸರಕಾರ ರೈತರಿಗಾಗಿ ನೀಡುವ ಶೇ.೫೦ರಷ್ಟು ಸಬ್ಸಿಡಿಯಲ್ಲಿ ೫ಜನ ರೈತರಿಗೆ ಕಬ್ಬು ಕಟಾವು ಮಾಡುವ ಯಂತ್ರಗಳನ್ನು ರೂ.೧.೪೦ಕೋಟಿ ಅನುದಾನದಲ್ಲಿ ನೀಡಲಾಗಿದೆ. ಅಲ್ಲದೇ ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಗೆ ಸೌಲಭ್ಯಗಳನ್ನು ನೀಡಲಾಗುತ್ತಿದೆ ಇದರ ಸದುಪಯೋಗವನ್ನು ತಾಲೂಕಿನ ಜನತೆ ಪಡೆದುಕೊಳ್ಳಬೇಕು ಎಂದರು.ಈ ವೇಳೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾದ್ಯಕ್ಷ ರಾಜಣ್ಣಿ ನಾರಾಯಣಕರ ಮಾತನಾಡಿ, ಪಟ್ಟಣದ ಪುರಸಭೆ ಅತೀಕ್ರಮಣ ಜಾಗೆಯನ್ನು ತೆರೆವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿದೆ ಎಂದರು.ಈ ವೇಳೆ ಕವಾಯತನಲ್ಲಿ ನಗರದ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಕವಾಯತ್ ಜರುಗಿತು. ವಿವಿಧ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.ವೇದಿಕೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದಲ್ಲಿ ಗಾಂಧಿ ವೃತ್ತ ಅತ್ಯಂತ ಚಿಕ್ಕದಾಗಿತ್ತು. ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಮನಗಂಡು ಅದನ್ನು ಅವರ ವೈಯುಕ್ತಿಕ ಹಣದಿಂದ ಅತ್ಯಂತ ಸುಂದರವಾದ ವೃತ್ತ ನಿರ್ಮಾಣ ಮಾಡಲು ಹೊರಟಿದ್ದು ಸಂತಸ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.ಸಿಂದಗಿ ಪಟ್ಟಣದ ಆಲಮೇಲ ರಸ್ತೆಯಲ್ಲಿ ನೂತನವಾಗಿ ಗಾಂಧಿ ವೃತ್ತ ನಿರ್ಮಾಣ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿಗಳಿಂದ ರಾಜ್ಯದ ಕೋಟ್ಯಾಂತರ ಜನರಿಗೆ ಅನುಕೂಲವಾಗಿದೆ. ಇವುಗಳಿಂದ ರಾಜ್ಯದ ಅಭಿವೃದ್ದಿಯಲ್ಲಿ ಯಾವುದೇ ರೀತಿಯ ಕುಂಟಿತವಾಗಿಲ್ಲ. ರಂಬಾಪುರಿ ಶ್ರೀಗಳು ರಾಜ್ಯ ಸರ್ಕಾರ ಪಂಚ ಗ್ಯಾರೆಂಟಿಗಳನ್ನು ಸರ್ಕಾರ ವಿಮರ್ಶೆ ಮಾಡಬೇಕೆಂದ ಮಾತಿಗೆ ಪರ್ತಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು ಸಿಎಂ ಸಿದ್ದರಾಮಯ್ಯ ಅವರು ೧೬ ಬಾರಿ ಬಜೆಟನ್ನು ಮಂಡಿಸಿದ್ದಾರೆ. ಅವರು ಹಣಕಾಸಿನ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಶ್ರೀಗಳ ಮಾತನ್ನು ನಾವು ಸ್ವಾಗತಿಸುತ್ತೇವೆ. ವಿಜಯಪುರ ನಗರದಲ್ಲಿ ದೊಡ್ಡದಾದ ಗಾಂಧಿ ವೃತ ನಿರ್ಮಾಣ ಮಾಡುವಲ್ಲಿ ಪಣ ತೊಟ್ಟಿದ್ದೇವು ಆದರೆ ಮೇಲಸೇತುವೆ ವಿಚಾರ ಮಧ್ಯ ಬಂದಾಗ ವೃತ್ತದ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಆಲಮಟ್ಟಿ ಜಲಾಶಯಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ರೈತರ ಜೀವನಾಡಿಯಾಗಿದೆ ಎಂದು ಕೆಬಿಜೆಎನ್ ಎಲ್ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ ಬಸವರಾಜ ಹೇಳಿದರು.ಆಲಮಟ್ಟಿಯ ಎಂಪಿಎಸ್ ಶಾಲೆಯ ಆವರಣದಲ್ಲಿ ಕೆಬಿಜೆಎನ್ ಎಲ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಯದಲ್ಲಿ ಜರುಗಿದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಆಲಮಟ್ಟಿಯ ವಿವಿಧ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಗಳ ಸೌಲಭ್ಯ ಹಾಗೂ ಆಟದ ಮೈದಾನದ ಆಧುನೀಕರಣ ಕಾಮಗಾರಿ ಶೀಘ್ರವೇ ಆರಂಭಿಸಲಾಗವುದ ಎಂದರು.ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ ಅಧ್ಯಕ್ಷತೆ ವಹಿಸಿದ್ದರು.ಕೆಬಿಜೆಎಟಿಂಲ್ ಹಿರಿಯ ಅಧಿಕಾರಿಗಳಾದ ವಿ.ಆರ್. ಹಿರೇಗೌಡರ, ಐಎಲ್. ಕಳಸಾ, ತಾರಾಸಿಂಗ್ ದೊಡಮನಿ, ರವಿ ಚಂದ್ರಗಿರಿಯವರ, ಶರಣಪ್ಪ ಚಲವಾದಿ, ಜಯಣ್ಣ, ಆರ್ ಎಫ್ ಓ ಮಹೇಶ ಪಾಟೀಲ, ಎಫ್.ಎಸ್. ಇಂಡಿಕರ, ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಜ್ಞಾನೇಶ್ವರ ತಾವಡೆ, ಪಿ.ಎ. ಹೆಮಗಿರಿಮಠ, ಜಿ.ಎಂ. ಕೊಟ್ಯಾಳ, ಎಸ್.ಐ.ಗಿಡ್ಡಪ್ಪಗೋಳ, ಬಿ.ಎಸ್. ಯರವಿನತೆಲಿಮಠ, ಜಿ.ಸಿ.ದ್ಯಾವಣ್ಣವರ, ನೌಕರರ ಸಂಘದ ಪ್ರಧಾನ…

Read More