ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭಾರತ ಸಂವಿಧಾನವು ಸರ್ವರಿಗೂ ಸಮಾನತೆಯನ್ನು ಒದಗಿಸಿದೆ. ಮತ್ತು ಮೂಲಭೂತ ಕರ್ತವ್ಯಗಳನ್ನು ನೀಡಿ ನಮ್ಮೆಲ್ಲರನ್ನು ರಕ್ಷಿಸುವ ಕಾನೂನುಗಳನ್ನು ನೀಡುವ ಜೊತೆಗೆ ನಮ್ಮ ದೇಶದ ಪ್ರಜಾಪ್ರಭುತ್ವ ಬಲಪಡಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ ಹೇಳಿದರು.
ಪಟ್ಟಣದ ನಾಗೂರ ಬಡಾವಣೆಯ ಸಮರ್ಥ ವಿದ್ಯಾವಿಕಾಸ ಸಂಸ್ಥೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡ ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ನೃತ್ಯ, ಭಾಷಣ, ಛದ್ಮವೇಷ, ಆಕರ್ಷಕ ಕವಾಯತು ಜರುಗಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ, ಮುಖ್ಯಗುರುಮಾತೆ ಎಮ್.ಪಿ.ಬುಕ್ಕಾ, ಸಾವಿತ್ರಿ ಅಸ್ಕಿ, ಸತೀಶ ಕುಲಕರ್ಣಿ, ಎಸ್.ಡಿ.ನಾಯಕ, ಎಸ್.ವಿ.ಕಡಣಿ, ಎಮ್.ಎಮ್.ಜುಮನಾಳ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂಧಿಗಳು ಇದ್ದರು.
ಶ್ರೀ ಪದ್ಮರಾಜ ಮಹಿಳಾ ಕಾಲೇಜು:
ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಕಾಲೇಜಿನಲ್ಲಿ ೭೬ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಇದೇ ವೇಳೆ ಪದವಿ ಪ್ರಾಚಾರ್ಯ ಎಸ್.ಎಂ ಪೂಜಾರಿ, ಪಪೂ ಕಾಲೇಜಿನ ಪ್ರಾಚಾರ್ಯ ಎಂ.ಎಸ್.ಹೈಯ್ಯಾಳಕರ, ಉಪನ್ಯಾಸಕರಾದ ಜಿ.ಎ.ನಂದಿಮಠ, ಜಿ.ಎಸ್.ಕುಲಕರ್ಣಿ, ಮಹಾಂತೇಶ ನೂಲಾನವರ, ಎಸ್.ಸಿ.ದುದ್ದಗಿ, ಎಲ್.ಎಮ್.ಮಾರ್ಸನಳ್ಳಿ, ಹೇಮಾ ಕಾಸರ, ಯು.ಸಿ.ಪೂಜೇರಿ, ಎ.ಎ.ಕೊಕನಿ, ಸತೀಶ ಕಕ್ಕಸಗೇರಿ, ಶಂಕರ ಕುಂಬಾರ, ವಿಜಯಲಕ್ಷ್ಮಿ ಭಜಂತ್ರಿ, ಡಿ.ಎಂ.ಪಾಟೀಲ ಸೇರಿದಂತೆ ಅನೇಕರಿದ್ದರು.
ಮಹಿಳಾ ವಸತಿ ನಿಲಯ:
ಪಟ್ಟಣದ ಆರ್.ಡಿ.ಪಾಟೀಲ ಕಾಲೇಜಿನ ಎದುರಗಡೆಯಿರುವ ಮಹಿಳಾ ವಸತಿ ನಿಲಯದಲ್ಲಿ ಹಮ್ಮಿಕೊಂಡ ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಶ್ರೀಗುರುಕೃಪಾ ಶಾಲೆಯ ಮುಖ್ಯಗುರುಮಾತೆ ಹೇಮಾ ಪೋದ್ದಾರ ನೆರವೇರಿಸಿದರು.
ಈ ವೇಳೆ ಸಾಂತ್ವನ ಮಹಿಳಾ ಸಾಹಾಯವಾಣಿ ಕೇಂದ್ರದ ಸಮಾಜ ಕಾರ್ಯಕರ್ತೆ ರಶ್ಮಿ ನೂಲಾನವರ, ವಿದ್ಯಾ ದೇಸಾಯಿ, ವಸತಿ ನಿಲಯದ ಜಯಶ್ರೀ ಬಿರಾದಾರ ಸೇರಿದಂತೆ ವಸತಿ ನಿಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿದ್ದರು.
ಆರ್.ಡಿ.ಪಾಟೀಲ ಕಾಲೇಜು:
ಪಟ್ಟಣದ ಆರ್.ಡಿ.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೭೬ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಉಪನ್ಯಾಸಕರಾದ ಶಿವಶರಣ ಬೂದಿಹಾಳ, ಎನ್.ಬಿ.ಪೂಜಾರಿ, ಬಿ.ಬಿ.ಜಮಾದಾರ, ಎಸ್.ಎಚ್.ಜಾಧವ, ಎಸ್.ಜಿ.ಮಾರ್ಸನಳ್ಳಿ, ಎಸ್.ಸಿ.ಜೋಗೂರ, ಪ್ರಸನ್ ಜೋಗೂರ, ರಾಜೇಶ್ವರಿ ಗಾಣಗೇರ್, ವ್ಹಿ.ಕೆ.ಹಿರೇಮಠ, ಶಿವರಾಜ ಕುಂದಗೋಳ, ಸುಭಾಸ ಹೊಸಮನಿ, ವ್ಹಿ.ಪಿ.ನಂದಿಕೋಲ, ವಿಜಯಲಕ್ಷ್ಮಿ ಕನ್ನೊಳ್ಳಿ, ಗವಿಸಿದ್ದಪ್ಪ ಆನೆಗುಂದಿ, ಎಂ.ಐ.ಮುಜಾವರ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.
ವಿದ್ಯಾಚೇತನ ಶಾಲೆ:
ಪಟ್ಟಣದ ಹೂಗಾರ ಲೇಔಟ್‌ನಲ್ಲಿರುವ ವಿದ್ಯಾಚೇತನ ಶಾಲೆಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕುಸುಮಾ ಯಾಳಗಿ, ಸಕ್ಕುಬಾಯಿ ಡಾಂಗಿ, ವಿಕಾಸ ಚೌರ, ಅಕ್ಷಯ ದೀಕ್ಷಾ, ಸುಮಾ ಬಿರಾದಾರ, ರೂಪಾ, ಪ್ರಗತಿ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.
ಶ್ರೀಗುರು ಕೃಪಾ ಶಾಲೆ:
ಪಟ್ಟಣದ ಸೋಂಪುರ ರಸ್ತೆಯಲ್ಲಿರುವ ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೭೬ನೆಯ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಎಚ್.ಟಿ.ಕುಲಕರ್ಣಿ, ಶಾಲೆಯ ಆಡಳಿತಾಧಿಕಾರಿ ಎಚ್.ಜಿ.ಪೊದ್ದಾರ, ಮುಖ್ಯಗುರುಮಾತೆ ಹೇಮಾ ಪೋದ್ದಾರೆ, ಸೌಮ್ಯ ಪೋದ್ದಾರ, ಪ್ರಸನ್ನ ಕುಲಕರ್ಣಿ, ವಿಶಾಲ ಹಿರೇಮಠ, ಸವಿತಾ ಬನಗುಂಡಿ, ಪೂಜಾ ದಸ್ಮಾ, ರಾಜಶೇಖರ ಬಿರಾದಾರ, ಆಲಿಯಾ ಸಿತನೂರ, ವರ್ಷಾ ಜೋಷಿ, ರೇಣುಕಾ, ಮಯೂರಿ ಜಮಾದಾರ, ನೇತ್ರಾ ವಸ್ತçದ, ಸಹನಾ ಪರುತಿ, ಸುರೇಶ, ಅನಿತಾ, ಜ್ಯೋತಿ, ಶಿವಲೀಲಾ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.