ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿ ಜಲಾಶಯ
ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ರೈತರ ಜೀವನಾಡಿಯಾಗಿದೆ ಎಂದು ಕೆಬಿಜೆಎನ್ ಎಲ್ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ ಬಸವರಾಜ ಹೇಳಿದರು.
ಆಲಮಟ್ಟಿಯ ಎಂಪಿಎಸ್ ಶಾಲೆಯ ಆವರಣದಲ್ಲಿ ಕೆಬಿಜೆಎನ್ ಎಲ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಯದಲ್ಲಿ ಜರುಗಿದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಆಲಮಟ್ಟಿಯ ವಿವಿಧ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಗಳ ಸೌಲಭ್ಯ ಹಾಗೂ ಆಟದ ಮೈದಾನದ ಆಧುನೀಕರಣ ಕಾಮಗಾರಿ ಶೀಘ್ರವೇ ಆರಂಭಿಸಲಾಗವುದ ಎಂದರು.
ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ ಅಧ್ಯಕ್ಷತೆ ವಹಿಸಿದ್ದರು.
ಕೆಬಿಜೆಎಟಿಂಲ್ ಹಿರಿಯ ಅಧಿಕಾರಿಗಳಾದ ವಿ.ಆರ್. ಹಿರೇಗೌಡರ, ಐಎಲ್. ಕಳಸಾ, ತಾರಾಸಿಂಗ್ ದೊಡಮನಿ, ರವಿ ಚಂದ್ರಗಿರಿಯವರ, ಶರಣಪ್ಪ ಚಲವಾದಿ, ಜಯಣ್ಣ, ಆರ್ ಎಫ್ ಓ ಮಹೇಶ ಪಾಟೀಲ, ಎಫ್.ಎಸ್. ಇಂಡಿಕರ, ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಜ್ಞಾನೇಶ್ವರ ತಾವಡೆ, ಪಿ.ಎ. ಹೆಮಗಿರಿಮಠ, ಜಿ.ಎಂ. ಕೊಟ್ಯಾಳ, ಎಸ್.ಐ.ಗಿಡ್ಡಪ್ಪಗೋಳ, ಬಿ.ಎಸ್. ಯರವಿನತೆಲಿಮಠ, ಜಿ.ಸಿ.ದ್ಯಾವಣ್ಣವರ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಎಂ. ಪಾತ್ರೋಟ, ಬಿ.ಜಿ. ಬನ್ನೂರ , ನಿಸ್ಸಾರ್ ಪಿಂಜಾರ, ಮಹೇಶ ಗಾಳಪ್ಪಗೋಳ, ಗಂಗಾಧರ ಹಿರೆಮಠ ಮತ್ತಿತರರು ಇದ್ದರು.
೧೦ ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಜರುಗಿತು.
ವಿವಿಧ ಶಾಲೆಗಳ ಮಕ್ಕಳಿಂದ ಡಿಸ್ ಪ್ಲೇ ನೃತ್ಯ ಜರುಗಿದವು. ನವೋದಯ ಶಾಲೆಯ ವಿದ್ಯಾರ್ಥಿನಿಯರ ಕರಾಟೆ ಪ್ರದರ್ಶನ, ಕೋಲಾಟ ಹಾಗೂ ಎಂಎಚ್ ಎಂ ಶಾಲೆಯ ರಾಮಾಯಣ ಕುರಿತು ನೃತ್ಯ ಗಮನ ಸೆಳೆಯಿತು.