ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಇತ್ತೀಚೆಗೆ ವೀರಮರಣ ಹೊಂದಿದ ಪಟ್ಟಣದ ಯೋಧ ರಾಜು ಕರ್ಜಗಿ ಅವರ ಪುತ್ಥಳಿ ನಿರ್ಮಾಣಕ್ಕೆ ಗಣರಾಜ್ಯೋತ್ಸವ ದಿನದಂದು ಗಣ್ಯರು ಅಡಿಗಲ್ಲು ಸಮಾರಂಭ ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿದ ಮಲ್ಲಿಕಾರ್ಜುನ ಹಂಜಗಿಯವರು ಪುತ್ಥಳಿ ನಿರ್ಮಾಣಕ್ಕೆ ₹ 25 ಸಾವಿರ ದೇಣಿಗೆ ನೀಡಿದರು. ಗಂಗಪ್ಪ ಕರಜಗಿ, ರುದ್ರಯ್ಯ ಸಾಲಿಮಠ, ಪ್ರಭಾವತಿ ನಾಟಿಕಾರ, ಲಕ್ಕಪ್ಪ ಹಂಜಗಿ, ಡಾ.ವಾಗ್ಮೋರೆ, ಮಾಯಪ್ಪ ಪಡಸಗಿ, ಮುತ್ತು ಹಂಜಗಿ, ಶಾಲಾ ಮಕ್ಕಳು, ಗ್ರಾಮಸ್ಥರು ಇದ್ದರು.