ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದಿಂದ ೭೬ ನೇ ಗಣರಾಜ್ಯೋತ್ಸವವನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.
ನಗರದ ಪತ್ರಿಕಾ ಭವನ ಹಾಗೂ ಹಳೆಯ ತಹಸೀಲ್ದಾರ ಕಚೆರಿ ಬಳಿಯಿರುವ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಟಿ. ಚೂರಿ ರಾಷ್ಟ್ರ ಧ್ವಜಾರೋಹಣ ನೇರವೇರಿಸಿ ಎಲ್ಲರಿಗೂ ಗಣರಾಜ್ಯೋತ್ಸವ ಶುಭಾಶಯ ಕೋರಿದರು.
ಸಂಘದ ಖಜಾಂಚಿ ರಾಹುಲ ಆಪ್ಟೆ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಬಸವರಾಜ ಉಳ್ಳಾಗಡ್ಡಿ, ಸುನೀಲ ಗೋಡೆನ್ನವರ, ಗುರಪ್ಪ ಲೋಕುರಿ, ಸಲಹಾ ಸಮಿತಿ ಸದಸ್ಯರಾದ ದೇವೇಂದ್ರ ಹೆಳವರ, ಸೀತಾರಾಮ ಕುಲಕರ್ಣಿ, ಸಚೇಂದ್ರ ಲಂಬು, ಪತ್ರಕರ್ತರಾದ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಶಿವನಗೌಡ ಪಾಟೀಲ, ಮಲ್ಲಿಕಾರ್ಜುನ ಹೂಗಾರ, ಖಾಜಾ ಪಟೇಲ್, ಶರದ ಅರ್ಜುಣಗಿ, ಸರ್ವೇಶ ಕಟ್ಟಿ, ಸುನೀಲ ಭಜಂತ್ರಿ, ವಿಠ್ಠಲ ಲಂಗೋಟಿ, ನಾಗು ಚೋಳಕೆ ಮುಂತಾದವರು ಉಪಸ್ಥಿತರಿದ್ದರು.