Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎನ್‌ಎಚ್‌ಎಂ ಕಟ್ಟಡದಲ್ಲಿ ಪ್ರತಿ ಶನಿವಾರ ಇ-ಟ್ರೇಡಿಂಗ್ ಮೂಲಕ ಒಣ ದ್ರಾಕ್ಷಿ ಉತ್ಪನ್ನಗಳ ಹಾಗೂ ಪ್ರತಿ ಮಂಗಳವಾರ ಮತ್ತು ಶುಕ್ರವಾರ ದಿನಗಳಂದು ಒಣ ಮೆಣಸಿನಕಾಯಿ ವ್ಯಾಪಾರ ವಹಿವಾಟ ಆರಂಭಿಸಲಾಗಿದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ತಿಳಿಸಿದ್ದಾರೆ.ಪ್ರಸ್ತುತ ದ್ರಾಕ್ಷಿ ಸುಗ್ಗಿಕಾಲ ಇರುವುದರಿಂದ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಯುವ ಒಣ ದ್ರಾಕ್ಷಿ ಉತ್ಪನ್ನದ ವ್ಯಾಪಾರ ವಹಿವಾಟಿಗಾಗಿ ಹಾಗೂ ಒಣ ದ್ರಾಕ್ಷಿ ಉತ್ಪನ್ನಕ್ಕೆ ಸ್ಪರ್ಧಾತ್ಮಕ ಬೆಲೆ, ರೈತರ ಉತ್ಪನ್ನಗಳಿಗೆ ರಾಜ್ಯ, ಅಂತರಾಜ್ಯ ಖರೀದಿದಾರರು ದೊರೆಯುವ ನಿಟ್ಟಿನಲ್ಲಿ ಪ್ರತಿ ಶನಿವಾರ ಒಣ ದ್ರಾಕ್ಷಿ ಹಾಗೂ ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಒಣ ಮೆಣಸಿನಕಾಯಿ ಇ-ಟ್ರೇಡಿಂಗ್ ಮೂಲಕ ವ್ಯಾಪಾರ ವಹಿವಾಟ ಸಮಿತಿಯ ಎನ್‌ಎಚ್‌ಎಂ ಕಟ್ಟಡದಲ್ಲಿ ಆರಂಭಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಹಳೆಯ ಕಟ್ಟಡಗಳ ನವೀಕರಣ ೧,೨& ೩ ಬಿಎಚ್‌ಕೆ ವಸತಿ ಗೃಹಗಳು, ಸೇರಿದಂತೆ ಭವ್ಯವಾದ ಮತ್ತು ಸುಸಜ್ಜಿತವಾದ ತರಬೇತಿ ಕಟ್ಟಡ ಕಾಮಗಾರಿಗೆ ಸೋಮವಾರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಭೂಮಿ ಪೂಜೆ ಹಾಗೂ ಅಡಿಗಲ್ಲು ಸ್ಥಾಪನೆ ನೆರವೇರಿಸಿದರು.ಸಮಾರಂಭದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ರಮೇಶ ದೇಸಾಯಿ, ಉಪ ಪ್ರಾಚಾರ್ಯ ಶ್ರೀಮತಿ ಎಸ್.ಜಿ.ಮಲ್ಲಾಡಕರ, ಆರೋಗ್ಯ ಮತ್ತು ಕುಟುಂ ಕಲ್ಯಾಣ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮನೋಹರ ಕಟ್ಟಿಮನಿ, ಸಂಸ್ಥೆಯ ತರಬೇತಿ ಅಧಿಕಾರಿಗಳಾದ ಧನರಾಜ ಅಳ್ಳಿಕಟ್ಟಿ, ರವಿ ಖೇಡಗಿ, ಗುತ್ತಿಗೆದಾರರಾದ ಶಂಕರಗೌಡ ಹೊಸಮನಿ ಉಪಸ್ಥಿತರಿದ್ದರು. ಶ್ರೀಮತಿ ರೇಶ್ಮಾ ಪಿಸೆ ವಂದಿಸಿದರು. ಸಿ.ಎಸ್.ಹಿರೇಮಠ ನಿರೂಪಿಸಿದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆಯ ಕಚೇರಿ-೧, ವಲಯ ಕಚೇರಿ-೨ ಮತ್ತು ವಲಯ ಕಚೇರಿ-೩ರ ವ್ಯಾಪ್ತಿಯಲ್ಲಿ ಬರುವ ವಾರ್ಡಳನ್ನು ಬಯಲು ಶೌಚಮುಕ್ತಗೊಳಿಸುವ ಗುರಿಯನ್ನು ಹೊಂದಿ, ವಿವಿಧ ವಾರ್ಡಗಳಲ್ಲಿ ಶೌಚಾಲಯರಹಿತ ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.ಅದ್ಯಾಗ್ಯೂ, ಪಾಲಿಕೆಯ ವ್ಯಾಪ್ತಿಯಲ್ಲಿ ಬಯಲು ಪ್ರದೇಶದಲ್ಲಿ ಕಸ ಎಸೆಯುವುದು, ಉಗುಳುವುದು, ಸ್ನಾನ ಮಾಡುವುದು, ಮೂತ್ರವಿಸರ್ಜನೆ ಮತ್ತು ಬಯಲು ಮಲವಿಸರ್ಜನೆ ಮಾಡಿ ಸಾರ್ವಜನಿಕ ಉಪದ್ರವನ್ನು ಉಂಟು ಮಾಡುವುದು ಕಂಡು ಬಂದಲ್ಲಿ ಮೊದಲನೆಯ ಅಪರಾಧಕ್ಕೆ ೨೦೦ ರೂ. ಹಾಗೂ ಎರಡನೆಯ ಅಪರಾಧಕ್ಕೆ ೩೦೦ ರೂ.ಗಳ ದಂಡ ವಿಧಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಣೇಶ ನಗರದಲ್ಲಿ ಎಕ್ಸಲಂಟ್ ಕೋಚಿಂಗ್ ಕ್ಲಾಸ್‌ನ ನೂತನ ಶಾಖೆ ಪ್ರಾರಂಭ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತಮವಾದ ತರಬೇತಿ ನೀಡುವ ಮೂಲಕ ಸೈನಿಕಶಾಲೆ, ನವೋದಯ, ಕಿತ್ತೂರು, ಆರ್‌ಎಂಎಸ್ ಸೇರಿದಂತೆ ಅತೀ ಹೆಚ್ಚು ಫಲಿತಾಂಶ ನೀಡುವ ಹೆಗ್ಗಳಿಕೆ ಹೊಂದಿರುವ ಎಕ್ಸಲಂಟ್ ಕೋಚಿಂಗ್ ಕ್ಲಾಸ್‌ನ ಶಾಖೆಯನ್ನು ಗಣೇಶ ನಗರದ ಭಾಗದಲ್ಲಿ ಪ್ರಾರಂಭಿಸಬೇಕು ಎಂದು ಪಾಲಕರು ಬಹುದಿನಗಳಿಂದ ಒತ್ತಾಯಿಸುತ್ತಿದ್ದರು. ಅವರ ಭಾವನೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಇಂದು ಗಣೇಶ ನಗರದಲ್ಲಿ ಎಸ್‌ಕೆ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಹೊಸ ಶಾಖೆ ಪ್ರಾರಂಭಿಸುವ ಮೂಲಕ ಇನ್ನೂ ಹೆಚ್ಚಿನ ಮಕ್ಕಳಿಗೆ ತರಬೇತಿ ನೀಡುವ ಕಾರ್ಯಕ್ಕೆ ಅಣಿಯಾಗುತ್ತಿದ್ದೇವೆ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಹೇಳಿದರು.ನಗರದ ಎಸ್‌ಕೆ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು; ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಕ್ಕಳನ್ನು ಅದೇ ವೇಗಕ್ಕೆ ಅನುಗುಣವಾಗಿ ಸಿದ್ಧಗೊಳಿಸಲು ಅತ್ಯುತ್ತಮವಾದ ತರಬೇತಿಯ ಅಗತ್ಯವಿದೆ ಎನ್ನುವುದನ್ನು ಮನಗಂಡ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯು ಬದಲಾಗುತ್ತಿರುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾನವ ಜನ್ಮ ಶ್ರೇಷ್ಠವಾದುದು. ಅದರ ಸದ್ಬಳಕೆ ಅಗಬೇಕು. ಸತ್ಕರ್ಮ, ಸತ್ಸಂಗ, ಸದಾಚಾರ ಪಾಲಿಸಿದರೆ ಬದುಕು ಬಂಗಾರವಾಗುತ್ತದೆ ಎಂದು ನಾಗಠಾಣ ಶಾಸಕ ವಿಠಲ ಕಟಕದೊಂಡ ಹೇಳಿದರು.ಸೋಮವಾರದಂದು ತಾಲೂಕಿನ ನಾಗಠಾಣ ಗ್ರಾಮದ ಹಿರೇಮಠದಲ್ಲಿ ಉದಯಲಿಂಗೇಶ್ವರ ಶಿವಯೋಗಿಗಳ ರಜತ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಸನಾತನ ಸಂಸ್ಕೃತಿ, ಧಾರ್ಮಿಕತೆ ಮತ್ತು ಆಧ್ಯಾತ್ಮಿಕ ಚಿಂತನೆಯಿಂದ ಮಾನವ ಜನ್ಮ ಸಾರ್ಥಕಗೊಳ್ಳುತ್ತದೆ’ ಎಂದು ಹೇಳಿದರು.ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಜನ್ಮ ನೀಡಿದ ತಾಯಿ ಸೇರಿದಂತೆ ಮನೆಯ ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು. ಇದರಿಂದ ತನ್ನ ಮನೆ ದೇಗುಲವಾಗುತ್ತದೆ ಎಂದು ಹೇಳಿದರು.ನೇತೃತ್ವ ವಹಿಸಿದ್ದ ಸಿಂದಗಿಯ ಷ ಬ್ರ ಪ್ರಭುಸಾರಂಗ ದೇವ ಶಿವಾಚಾರ್ಯರು ಮಾತನಾಡಿ,ಪ್ರತಿದಿನ ಗುಡಿಗೆ ಬಂದು ದೇವರ ಆಶೀರ್ವಾದ ಪಡೆದುಕೊಳ್ಳಬೇಕು. ಇದರಿಂದ ಮನಸ್ಸಿನಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ’ ಎಂದರು.ನಾಗಠಾಣದ ಷ ಬ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಹಾವಿನಾಳದ ಷ ಬ್ರ ವಿಜಯ ಮಹಾಂತೇಶ ಶಿವಾಚಾರ್ಯರು, ಮನಗೂಳಿಯ ಷ ಬ್ರ ಅಭಿನವ…
ವಿಜಯಪುರ ಪೊಲೀಸರಿಂದ ರೂ.79,80,000/- ಮೌಲ್ಯದ 228 ಕೆ.ಜಿ ಹಸಿ ಗಾಂಜಾ ಗಿಡಗಳ ಜಪ್ತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿದ್ದ ಈರ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಈ ಕುರಿತು ಸೋಮವಾರ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ನಿಂಬರಗಿ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.ಫೆ.22 ರಂದು ಲಕ್ಷ್ಮಣ ನಿಂಬರಗಿ, ಪೊಲೀಸ್ ಅಧೀಕ್ಷಕರು, ವಿಜಯಪುರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ, ಶಂಕರ ಮಾರಿಹಾಳ ಮತ್ತು ರಾಮನಗೌಡ ಹಟ್ಟಿ ರವರ ಮಾರ್ಗದರ್ಶನದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಡಿಎಸ್‌ಪಿ ಸುನೀಲ.ಆರ್.ಕಾಂಬಳೆ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ ಅವಜಿ ಹಾಗೂ ಸಿಬ್ಬಂದಿ ಜನರು ಖಚಿತ ಮಾಹಿತಿಯನ್ನು ಆಧರಿಸಿ, ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಯತ್ನಾಳ ಗ್ರಾಮದ ರಿ.ಸ.ನಂ: 114/3 ನೇದ್ದರಲ್ಲಿನ 01-ಎಕರೆ 37-ಗುಂಟೆ ಜಮೀನಿನಲ್ಲಿ ಆರೋಪಿತರಾದ ಮಲ್ಲು ಗೋವಿಂದ ಕರ್ವೆ, 60 ವರ್ಷ, ಸಾ: ಯತ್ನಾಳ ತಾ: ತಿಕೋಟಾ ಮತ್ತು ಮನಿಗೇನಿ ಗೋವಿಂದ ಕರ್ವೆ, 63 ವರ್ಷ, ಸಾ: ಯತ್ನಾಳ ತಾ: ತಿಕೋಟಾ ಇವರು ತಮ್ಮ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಂಜಾರ ಕ್ರಾಸ್ ಹತ್ತಿರ ಫೆ.23 ರಂದುನಡೆದ ಶ್ರೀ ಸಂತ ಸೇವಾಲಾಲ್ ಮಹಾರಾಜರಜಯಂತಿ ಕಾರ್ಯಕ್ರಮದಲ್ಲಿವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ್ ರವರು ಒಳ ಮೀಸಲಾತಿಯ ವಿರೋಧವಾಗಿ ಮಾತನಾಡಿದ್ದನ್ನು ಹೊಲೆಯ ಮತ್ತು ಮಾದಿಗ ಸಮುದಾಯ ಖಂಡಿಸುತ್ತದೆ ಎಂದು ಕರ್ನಾಟಕ ಮಾದಿಗರ ಸಂಘದ ಜಿಲ್ಲಾಧ್ಯಕ್ಷ ಶ್ರೀಶೈಲ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಸೋಮವಾರ ಪ್ರಕಟನೆ ಮೂಲಕ ತಿಳಿಸಿದ ಅವರು, ಹೊಲೆಯ ಮಾದಿಗರ ಯುವಕರು, ಹಿರಿಯರು ಸೇರಿ ಭಾರತೀಯ ಜನತಾ ಪಾರ್ಟಿ ಹಾಗೂ ಶಾಸಕರಿಗಾಗಿ ಹಗಲಿರುಳು ಅನ್ನದೇ ದುಡಿದರೂ ಕೂಡ ಕಂಡು ಬಾರದೆ, ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ವೇದಿಕೆಯ ಮೇಲೆ ಮೂಲ ಪರಿಶಿಷ್ಟ ಜಾತಿಗಳಾದ ಹೊಲೆಯ ಮಾದಿಗರ ಸಮುದಾಯದವರಿಗೆ ತುಂಬಾ ನೋವು ಆಗೋ ರೀತಿಯಲ್ಲಿ ಭಾಷಣ ಮಾಡಿದ್ದಾರೆ. ಈ ಕೂಡಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳರವರು ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ನಮ್ಮ ಮಾದಿಗ ಮತ್ತು ಹೊಲೆಯ ಸಮುದಾಯದ ಕಾಲೋನಿಗಳಲ್ಲಿ ಬರೆದಿರುವ ಹಾಗೆ ಘೇರಾವ್ ಹಾಕಬೇಕಾಗುತ್ತದೆ. ಆದ್ದರಿಂದ ಶಾಸಕರು ಈ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಸುಕ್ಷೇತ್ರ ಕರಭಂಟನಾಳ ಗ್ರಾಮದ ವಿಷಮರ್ಧನ ಗುರು ಗಂಗಾಧರೇಶ್ವರ ಸ್ವಾಮೀಜಿಯವರ ಜಾತ್ರಾಮಹೋತ್ಸವ ಹಾಗೂ ಮಹಾಶಿವರಾತ್ರಿ ಮಹೋತ್ಸವ ಫೆ.೨೬ ಮತ್ತು ೨೭ ರಂದು ಸಡಗರ,ಸಂಭ್ರಮದಿಂದ ಜರುಗಲಿದೆ ಎಂದು ಕರಭಂಟನಾಳ ಹಿರೇಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.ತಾಲೂಕಿನ ಕರಭಂಟನಾಳ ವಿಷಮರ್ಧನ ಗುರು ಗಂಗಾಧರೇಶ್ವರ ಹಿರೇಮಠದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ. ೨೨ ರಿಂದ ಐದು ದಿನಗಳ ಕಾಲ ಸಂಜೆ ೭ ಗಂಟೆಯಿಂದ ೯ ಗಂಟೆಯವರೆಗೆ ಒಂದೊಂದು ದಿನ ಒಬ್ಬರೊಬ್ಬರು ಶ್ರೀಗಳಿಂದ ಧರ್ಮೋಪದೇಶ, ಗಾಯಕರಿಂದ ವಚನ ಗಾಯನ ಹಮ್ಮಿಕೊಳ್ಳಲಾಗಿದೆ. ಈ ಧರ್ಮೋಪದೇಶ ಕಾರ್ಯಕ್ರಮದಲ್ಲಿ ಸಿದ್ದಲಿಂಗ ಸ್ವಾಮೀಜಿ, ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಡಾ.ವಿಶ್ವಪ್ರಭು ಶಿವಾಚಾರ್ಯ ಸ್ವಾಮೀಜಿ, ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಭಾಗವಹಿಸಲಿದ್ದಾರೆ. ವಿವಿಧ ಗಾಯಕರಿಂದ ವಚನ ಗಾಯನ ನಡೆಯಲಿದೆ ಎಂದರು.ಫೆ. ೨೬ ರಂದು ಬೆಳಗ್ಗೆ ವಿಷಮರ್ಧನ ಗುರುಗಂಗಾಧರೇಶ್ವರ ಕರ್ತೃ ಗದ್ದುಗೆಗೆ ಮಹಾಕುಂಬಾಭಿಷೇಕ ನೆರವೇರುವದು. ಸಂಜೆ ಪುರವಂತರೊಂದಿಗೆ ಅಗ್ನಿಪುಟು ನಡೆಯಲಿದೆ. ರಾತ್ರಿ ಮಹಾಶಿವರಾತ್ರಿ ಜಾಗರಣೆ, ರಾಷ್ಟ್ರೀಯ ಭಾವೈಕ್ಯತೆಯ ಸಭೆ ಬೆಂಗಳೂರಿನ ಸರ್ಪಭೂಷಣ ಶ್ರೀ, ಇಂಗಳೇಶ್ವರದ ಚನ್ನಬಸವ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ನಮ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಸಾಹಿತ್ಯಕ್ಕೆ ತನ್ನದೇಯಾದ ಸ್ಥಾನಮಾನ ಗೌರವವಿದೆ. ಉತ್ತಮ ಸಾಹಿತ್ಯ ಸಮಾಜಕ್ಕೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ ಎಂದು ವಿಜಯಪುರದ ಶರಣಬಸವೇಶ್ವರ ಸಂಸ್ಥೆಯ ಅಧ್ಯಕ್ಷೆ ಭಾಗ್ಯಶ್ರೀ ಪಾಟೀಲ ಹೇಳಿದರು.ಪಟ್ಟಣದ ಶಿವಲಿಂಗೇಶ್ವರ ವಿರಕ್ತಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಂತಾ ಬಿರಾದಾರ(ಚೌರಿ) ಅವರ ಮನದೈಸಿರಿ ಕೃತಿ ಲೋಕಾರ್ಪಣೆ ಹಾಗೂ ಸನ್ಮಾನ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತಿಗಳು ತಮ್ಮ ಮನದಾಳದಲ್ಲಿರುವ ವಿಚಾರ,ಭಾವನೆ, ಆಲೋಚನೆ ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸುತ್ತಾರೆ. ಈ ಸಾಹಿತ್ಯ ನಮ್ಮೆಲ್ಲರ ಮನದಾಳಕ್ಕೆ ತಲುಪುತ್ತದೆ. ಅನೇಕರಿಗೆ ಇದು ಜ್ಞಾನ ಒದಗಿಸುತ್ತದೆ. ಸಾಹಿತ್ಯದಿಂದ ಸಮಾಜಕ್ಕೆ ಉತ್ತಮ ಸಂದೇಶ ಸಿಗುತ್ತದೆ. ಕನ್ನಡ ನಾಡಿನಲ್ಲಿ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ ಸೇರಿದಂತೆ ಅನೇಕ ಸಾಹಿತಿಗಳು ಸಾಹಿತ್ಯವನ್ನು ನೀಡಿದ್ದಾರೆ. ಇಲ್ಲಿನ ಶಾಂತಾ ಬಿರಾದಾರ ಅವರ ಕವನ ಸಂಕಲನವನ್ನು ಸಾಹಿತ್ಯ ಲೋಕದಲ್ಲಿ ಮಿಂಚುವಂತಾಗಲಿ. ಮುಂದಿನ ದಿನಗಳಲ್ಲಿ ಇವರಿಂದ ಇನ್ನಷ್ಟು ಮೌಲಿಕ ಕೃತಿಗಳು ಹೊರಬರುವಂತಾಗಲೆಂದರು.ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಮನದೈಸಿರಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು,…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಂತೋಷ ಹಾಗೂ ಅನುಭವಯುಕ್ತ ಕಲಿಕೆಯ ವಾತಾವರಣ ನಿರ್ಮಾಣ ಹಾಗೂ ಪ್ರೇರಣೆಗೆ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ಹುಣಶ್ಯಾಳ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಎಸ್.ಗಡೇದ ಹೇಳಿದರು.ತಾಲ್ಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಶನಿವಾರ ಜರುಗಿದ ಕಲಕೇರಿ ವಲಯ ಮಟ್ಟದ ಕಲಿಕಾ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದರು. ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬವು ತರಗತಿಯ ಹೊರಗಡೆ ನಡೆಯುವುದರಿಂದ ಮಕ್ಕಳು ಅತಿ ಸಂತಸದಿAದ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಬಲವರ್ಧನೆಗೆ ಈ ಕಲಿಕಾ ಹಬ್ಬವು ಸಾಕಷ್ಟು ಪರಿಣಾಮಕಾರಿಯಾಗುವುದರ ಜೊತೆಗೆ ಇದು ಸಮುದಾಯದ ಮುಂದೆ ಜರುಗುವುದರಿಂದ ಪೋಷಕರಿಗೆ ವ್ಯವಸ್ಥೆಯ ಮೇಲೆ ನಂಬಿಕೆ ಬರುವಂತಾಗುತ್ತದೆ. ಅಲ್ಲದೇ ಶಾಲೆಗಳನ್ನು ಶೈಕ್ಷಣಿಕವಾಗಿ ಬಲವರ್ಧನೆಗೊಳಿಸಲು ಸಾಕಷ್ಟು ಸಹಾಯ ಮಾಡುತ್ತದೆ ಎಂದರು.ಕಲಕೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಶೈಲ ನಾಯ್ಕೋಡಿ ಮಾತನಾಡಿ, ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳು, ಶಿಕ್ಷಕರು, ಮಕ್ಕಳು ತಮ್ಮೊಳಗಿನ ಉತ್ತಮ ಹವ್ಯಾಸ ಹಾಗೂ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಮಾದರಿ ಪ್ರಾಥಮಿಕ…
