ವಿಜಯಪುರ ಪೊಲೀಸರಿಂದ ರೂ.79,80,000/- ಮೌಲ್ಯದ 228 ಕೆ.ಜಿ ಹಸಿ ಗಾಂಜಾ ಗಿಡಗಳ ಜಪ್ತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿದ್ದ ಈರ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಸೋಮವಾರ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ನಿಂಬರಗಿ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಫೆ.22 ರಂದು ಲಕ್ಷ್ಮಣ ನಿಂಬರಗಿ, ಪೊಲೀಸ್ ಅಧೀಕ್ಷಕರು, ವಿಜಯಪುರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ, ಶಂಕರ ಮಾರಿಹಾಳ ಮತ್ತು ರಾಮನಗೌಡ ಹಟ್ಟಿ ರವರ ಮಾರ್ಗದರ್ಶನದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಡಿಎಸ್‌ಪಿ ಸುನೀಲ.ಆರ್.ಕಾಂಬಳೆ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ ಅವಜಿ ಹಾಗೂ ಸಿಬ್ಬಂದಿ ಜನರು ಖಚಿತ ಮಾಹಿತಿಯನ್ನು ಆಧರಿಸಿ, ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಯತ್ನಾಳ ಗ್ರಾಮದ ರಿ.ಸ.ನಂ: 114/3 ನೇದ್ದರಲ್ಲಿನ 01-ಎಕರೆ 37-ಗುಂಟೆ ಜಮೀನಿನಲ್ಲಿ ಆರೋಪಿತರಾದ ಮಲ್ಲು ಗೋವಿಂದ ಕರ್ವೆ, 60 ವರ್ಷ, ಸಾ: ಯತ್ನಾಳ ತಾ: ತಿಕೋಟಾ ಮತ್ತು ಮನಿಗೇನಿ ಗೋವಿಂದ ಕರ್ವೆ, 63 ವರ್ಷ, ಸಾ: ಯತ್ನಾಳ ತಾ: ತಿಕೋಟಾ ಇವರು ತಮ್ಮ ಸ್ವಂತ ಲಾಭಕ್ಕಾಗಿ ತಮ್ಮ ಜಮೀನಿನ ಕಬ್ಬು ಹಾಗೂ ಮೆಕ್ಕೆಜೋಳ ಬೆಳೆಗಳ ನಡುವೆ ಅಕ್ರಮವಾಗಿ ಗಾಂಜಾ ಬೆಳೆದಿದ್ದು, ಅವರ ಮೇಲೆ ದಾಳಿ ಮಾಡಿ, ಅಂದಾಜು 79,80,000/- ರೂ. ಮೌಲ್ಯದ ಒಟ್ಟು 228 ಕೆ.ಜಿ ಹಸಿ ಗಾಂಜಾ ಗಿಡಗಳನ್ನು ಜಪ್ತ ಮಾಡಿಕೊಂಡಿರುತ್ತಾರೆ.
ಈ ಬಗ್ಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಗುನ್ನೆ ನಂ: 14/2025, ಕಲಂ: 20 (a)(b)(i)(c) ಎನ್‌ಡಿಪಿಎಸ್ ಕಾಯ್ದೆ-1985 ರ ಅಡಿ ಪ್ರಕರಣ ದಾಖಲಿಸಿ, ಆರೋಪಿತರನ್ನು ದಸ್ತಗೀರ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಎಸ್ಪಿ ಲಕ್ಷ್ಮಣ ನಿಂಬರಗಿ ಶ್ಲಾಘನೆ
ಈ ಪ್ರಕರಣದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಸುನೀಲ.ಆರ್. ಕಾಂಬಳೆ ಡಿಎಸ್ ಪಿ, ರಮೇಶ ಸಿ. ಅವಜಿ ಪಿಐ, ಮಲ್ಲಿಕಾರ್ಜುನ ತಳವಾರ ಪಿಎಸ್‌ಐ, ಬಿ.ಎಂ.ಪವಾರ ಎಎಸ್‌ಐ. ವೈ.ಎಸ್.ಜಮಖಂಡಿ ಎಎಸ್‌ಐ, ಆರ್.ಡಿ.ಅಂಜುಟಗಿ ಸಿಎಚ್‌ಸಿ-426. ಆರ್.ಬಿ.ಕೋಳಿ ಸಿಎಚ್‌ಸಿ-671, ಎಂ.ಎಂ. ಕುರುವಿನಶೆಟ್ಟಿ ಸಿಎಚ್‌ಸಿ-1247, ಎಸ್.ಜಿ.ದಾನಪ್ಪಗೋಳ, ಸಿಎಚ್‌ಸಿ-532, ಎಚ್.ಎನ್.ಬಾಗವಾನ, ಸಿಎಚ್.ಸಿ -1299, ಆರ್.ಐ.ಲೋಣಿ ಸಿಎಚ್.ಸಿ-859, ಎ.ಆರ್.ಗದ್ಯಾಳ ಸಿಪಿಸಿ-1349, ಎಸ್.ಆರ್.ಬಡಚಿ ಸಿಪಿಸಿ-961, ಡಿ.ಆರ್.ಪಾಟೀಲ್ ಸಿಪಿಸಿ-967, ವಾಣಿಶ್ರೀ ಹೂಗಾರ ಮಪಿಸಿ-1414, ಎಸ್.ಬಿ.ಮುಲ್ಲಾ ಮಪಿಸಿ-1484 ಇವರ ಕರ್ತವ್ಯವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.

