ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಶಿಕ್ಷಣ ಸಂಸ್ಥೆಯಲ್ಲಿಯ ಹದಿನಾಲ್ಕು ವರ್ಷದ ವಿದ್ಯಾರ್ಥಿನಿಯರಿಗೆ ಸರ್ಕಾರಿ ಮಾರ್ಗಸೂಚಿಗಳ ಪ್ರಕಾರ ಎಚ್‌ವ್ಹಿಪಿ (ಹ್ಯೂಮನ್ ಪ್ಯಾಪಿ ಲೋನ್ ವೈರಸ್) ಲಸಿಕೆ ನೀಡಲಾಯಿತು.
ಇದು ಗರ್ಭಕಂಟಕದ ಕ್ಯಾನ್ಸರ್ ತಡೆಗಟ್ಟಲು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯಾಗಿದೆ. ಅದಕ್ಕಾಗಿ ೧೪ ವರ್ಷ ಮೇಲ್ಪಟ್ಟು ೧೫ ವರ್ಷದ ಒಳಗಿನ ವಿದ್ಯಾರ್ಥಿನಿಯರಿಗೆ ಹಾಕಿಸಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಮಧು ಟಕ್ಕಳಕಿ, ಪ್ರಾಥಮಿಕ ಆರೋಗ್ಯ ಸುರಕ್ಷಿತ ಅಧಿಕಾರಿ ನೂರ್ ಜಾನ್ ಬೋರಗಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವಿದ್ಯಾವತಿ ಬೂದಿಹಾಳ, ಆಶಾ ಕಾರ್ಯಕರ್ತೆಯರು, ಮತ್ತು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಬ.ಮಂಗಳೂರ, ಮುಖ್ಯಗುರುಗಳಾದ ಸಂತೋಷ ಪವಾರ, ಶಾಂತಗೌಡ ಬಿರಾದಾರ, ಚೇತನ ನಾವದಗಿ, ಮತ್ತು ವಿದ್ಯಾರ್ಥಿನಿಯರು ಇದ್ದರು.

