ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎನ್‌ಎಚ್‌ಎಂ ಕಟ್ಟಡದಲ್ಲಿ ಪ್ರತಿ ಶನಿವಾರ ಇ-ಟ್ರೇಡಿಂಗ್ ಮೂಲಕ ಒಣ ದ್ರಾಕ್ಷಿ ಉತ್ಪನ್ನಗಳ ಹಾಗೂ ಪ್ರತಿ ಮಂಗಳವಾರ ಮತ್ತು ಶುಕ್ರವಾರ ದಿನಗಳಂದು ಒಣ ಮೆಣಸಿನಕಾಯಿ ವ್ಯಾಪಾರ ವಹಿವಾಟ ಆರಂಭಿಸಲಾಗಿದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಪ್ರಸ್ತುತ ದ್ರಾಕ್ಷಿ ಸುಗ್ಗಿಕಾಲ ಇರುವುದರಿಂದ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಯುವ ಒಣ ದ್ರಾಕ್ಷಿ ಉತ್ಪನ್ನದ ವ್ಯಾಪಾರ ವಹಿವಾಟಿಗಾಗಿ ಹಾಗೂ ಒಣ ದ್ರಾಕ್ಷಿ ಉತ್ಪನ್ನಕ್ಕೆ ಸ್ಪರ್ಧಾತ್ಮಕ ಬೆಲೆ, ರೈತರ ಉತ್ಪನ್ನಗಳಿಗೆ ರಾಜ್ಯ, ಅಂತರಾಜ್ಯ ಖರೀದಿದಾರರು ದೊರೆಯುವ ನಿಟ್ಟಿನಲ್ಲಿ ಪ್ರತಿ ಶನಿವಾರ ಒಣ ದ್ರಾಕ್ಷಿ ಹಾಗೂ ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಒಣ ಮೆಣಸಿನಕಾಯಿ ಇ-ಟ್ರೇಡಿಂಗ್ ಮೂಲಕ ವ್ಯಾಪಾರ ವಹಿವಾಟ ಸಮಿತಿಯ ಎನ್‌ಎಚ್‌ಎಂ ಕಟ್ಟಡದಲ್ಲಿ ಆರಂಭಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
