ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾನಗರ ಪಾಲಿಕೆಯ ಕಚೇರಿ-೧, ವಲಯ ಕಚೇರಿ-೨ ಮತ್ತು ವಲಯ ಕಚೇರಿ-೩ರ ವ್ಯಾಪ್ತಿಯಲ್ಲಿ ಬರುವ ವಾರ್ಡಳನ್ನು ಬಯಲು ಶೌಚಮುಕ್ತಗೊಳಿಸುವ ಗುರಿಯನ್ನು ಹೊಂದಿ, ವಿವಿಧ ವಾರ್ಡಗಳಲ್ಲಿ ಶೌಚಾಲಯರಹಿತ ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಅದ್ಯಾಗ್ಯೂ, ಪಾಲಿಕೆಯ ವ್ಯಾಪ್ತಿಯಲ್ಲಿ ಬಯಲು ಪ್ರದೇಶದಲ್ಲಿ ಕಸ ಎಸೆಯುವುದು, ಉಗುಳುವುದು, ಸ್ನಾನ ಮಾಡುವುದು, ಮೂತ್ರವಿಸರ್ಜನೆ ಮತ್ತು ಬಯಲು ಮಲವಿಸರ್ಜನೆ ಮಾಡಿ ಸಾರ್ವಜನಿಕ ಉಪದ್ರವನ್ನು ಉಂಟು ಮಾಡುವುದು ಕಂಡು ಬಂದಲ್ಲಿ ಮೊದಲನೆಯ ಅಪರಾಧಕ್ಕೆ ೨೦೦ ರೂ. ಹಾಗೂ ಎರಡನೆಯ ಅಪರಾಧಕ್ಕೆ ೩೦೦ ರೂ.ಗಳ ದಂಡ ವಿಧಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

