ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಂಜಾರ ಕ್ರಾಸ್ ಹತ್ತಿರ ಫೆ.23 ರಂದು
ನಡೆದ ಶ್ರೀ ಸಂತ ಸೇವಾಲಾಲ್ ಮಹಾರಾಜರ
ಜಯಂತಿ ಕಾರ್ಯಕ್ರಮದಲ್ಲಿ
ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ್ ರವರು ಒಳ ಮೀಸಲಾತಿಯ ವಿರೋಧವಾಗಿ ಮಾತನಾಡಿದ್ದನ್ನು ಹೊಲೆಯ ಮತ್ತು ಮಾದಿಗ ಸಮುದಾಯ ಖಂಡಿಸುತ್ತದೆ ಎಂದು ಕರ್ನಾಟಕ ಮಾದಿಗರ ಸಂಘದ ಜಿಲ್ಲಾಧ್ಯಕ್ಷ ಶ್ರೀಶೈಲ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸೋಮವಾರ ಪ್ರಕಟನೆ ಮೂಲಕ ತಿಳಿಸಿದ ಅವರು, ಹೊಲೆಯ ಮಾದಿಗರ ಯುವಕರು, ಹಿರಿಯರು ಸೇರಿ ಭಾರತೀಯ ಜನತಾ ಪಾರ್ಟಿ ಹಾಗೂ ಶಾಸಕರಿಗಾಗಿ ಹಗಲಿರುಳು ಅನ್ನದೇ ದುಡಿದರೂ ಕೂಡ ಕಂಡು ಬಾರದೆ, ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ವೇದಿಕೆಯ ಮೇಲೆ ಮೂಲ ಪರಿಶಿಷ್ಟ ಜಾತಿಗಳಾದ ಹೊಲೆಯ ಮಾದಿಗರ ಸಮುದಾಯದವರಿಗೆ ತುಂಬಾ ನೋವು ಆಗೋ ರೀತಿಯಲ್ಲಿ ಭಾಷಣ ಮಾಡಿದ್ದಾರೆ. ಈ ಕೂಡಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳರವರು ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ನಮ್ಮ ಮಾದಿಗ ಮತ್ತು ಹೊಲೆಯ ಸಮುದಾಯದ ಕಾಲೋನಿಗಳಲ್ಲಿ ಬರೆದಿರುವ ಹಾಗೆ ಘೇರಾವ್ ಹಾಕಬೇಕಾಗುತ್ತದೆ. ಆದ್ದರಿಂದ ಶಾಸಕರು ಈ ಕೂಡಲೇ ಮೂಲ ದಲಿತ ಸಮುದಾಯಗಳಾದ ಹೊಲೆಯ ಮಾದಿಗರ ಸಮುದಾಯದವರಿಗೆ ಕ್ಷಮೆ ಕೇಳಬೇಕು ಎಂದು ಕರ್ನಾಟಕ ಮಾದಿಗರ ಸಂಘದ ಜಿಲ್ಲಾಧ್ಯಕ್ಷ ಶ್ರೀಶೈಲ ರತ್ನಾಕರ್ ಪ್ರಕಟನೆ ಮೂಲಕ ಆಗ್ರಹಿಸಿದ್ದಾರೆ

