Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 30 , 2026

ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ದುಷ್ಕರ್ಮಿಗಳ ನಡೆಗೆ ಖಂಡನೆ

ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವುದು ಆತಂಕಕಾರಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹಾಡಿಗಳಲ್ಲಿ ಕಬ್ಬಿಣದ ಕಡಲೆಯಾದ ಎಸ್ಐಆರ್ ಪ್ರಕ್ರಿಯೆ
(ರಾಜ್ಯ ) ಜಿಲ್ಲೆ

ಹಾಡಿಗಳಲ್ಲಿ ಕಬ್ಬಿಣದ ಕಡಲೆಯಾದ ಎಸ್ಐಆರ್ ಪ್ರಕ್ರಿಯೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಜೀವನೋಪಾಯಕ್ಕಾಗಿ ವಲಸೆ, ಮನೆಗಳಿಗೆ ಬೀಗ, ದಾಖಲಾತಿ ಇಲ್ಲದೆ ತ್ರಿಶಂಕುಸ್ಥಿತಿಯಲ್ಲಿ ಆದಿವಾಸಿಗಳು

ಉದಯರಶ್ಮಿ ದಿನಪತ್ರಿಕೆ

ವರದಿ: ಶ್ರೀಕಂಠ ಈಶ್ವರ್
ಎಚ್.ಡಿ.ಕೋಟೆ: ಹಳ್ಳಿಗಳಿಂದ ಆವೃತವಾಗಿರುವ ಹೆಚ್ ಡಿ ಕೋಟೆ ತಾಲೂಕಿನಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕಬ್ಬಿಣದ ಕಡಲೆಯಾಗಿದೆ. ಅದರಲ್ಲೂ ಆದಿವಾಸಿಗಳು ವಾಸಿಸುತ್ತಿರುವ ಹಾಡಿಗಳಲ್ಲಿ ಬಿಎಲ್ ಒ ಗಳ ಪರಿಸ್ಥಿತಿ ಹೇಳತೀರದಾಗಿದೆ. ಹಾಡಿಗಳಿಗೆ ಹೋದ್ರೆ ಜನ ಇರೋದಿಲ್ಲ, ಮನೆಗಳಿಗೆ ಬೀಗ ಹಾಕಿಕೊಂಡು ಕೊಡಗಿನ ಎಸ್ಟೇಟ್ ಗಳಿಗೆ ವಲಸೆ ಹೋಗಿರುತ್ತಾರೆ. ಇದರಿಂದ ವಿಶೇಷ ತೀವ್ರ ಪರಿಷ್ಕರಣೆ ಮ್ಯಾಪಿಂಗ್ ಪ್ರಕ್ರಿಯೆ ಮಾಡುವುದೇ ಬಿಎಲ್ ಒ ಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇದರ ಜೊತೆಗೆ ಚುನಾವಣಾ ಆಯೋಗ ವಾಸಸ್ಥಳ ದೃಢೀಕರಣ, ಜನ್ಮ ಪ್ರಮಾಣಪತ್ರ ಹಾಗೂ ಆಸ್ತಿ ಹಕ್ಕುಪತ್ರಗಳಂತಹ ಕಠಿಣ ದಾಖಲೆಗಳನ್ನು ಕೇಳುತ್ತಿದ್ದು, ಪುನರ್ವಸತಿ ಕಲ್ಪಿಸದ ಹಿನ್ನೆಲೆ, ತಲೆಮಾರುಗಳ ದಾಖಲೆ ತರುವುದಾದರೂ ಎಲ್ಲಿಂದ ಎಂಬ ಚಿಂತೆ ಆದಿವಾಸಿ ಕುಟುಂಬಗಳಿಗೆ ಕಾಡುತ್ತಿದೆ.
ಹಾಡಿಗಳ ಮನೆಮನೆಗೆ ತೆರಳಿ SIR ಅರ್ಜಿ ಫಾರಂ ವಿತರಿಸುವ ಜವಾಬ್ದಾರಿ ಹೊತ್ತ ಬಿಎಲ್‌ಒಗಳು ಬಹುತೇಕರ ಮನೆಗಳಲ್ಲಿ ಜನರಿಲ್ಲದೆ ಪರದಾಡುತ್ತಿದ್ದಾರೆ. ಇನ್ನು ಮತದಾರ ಪಟ್ಟಿಯಿಂದ ಬಿಟ್ಟು ಹೋಗಿರುವ ಗಿರಿಜನರು ಸ್ಥಳೀಯ ನಿವಾಸಿಗಳು ಎಂದು ಗುರುತಿಸುವ ದಾಖಲೆಗಳನ್ನು ಪಡೆಯಲಾಗದೇ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಹೆಚ್ ಡಿ ಕೋಟೆ ತಾಲೂಕಿನಲ್ಲಿ ಜೇನುಕುರುಬ, ಬೆಟ್ಟಕುರುಬ, ಸೋಲಿಗ, ಎರವ, ಪಂಜರಿ, ಪಣಿಯ, ಇರುಳಿಗರು ಸೇರಿದಂತೆ ಅನೇಕ ಆದಿವಾಸಿ ಕುಟುಂಬಗಳು ವಾಸಿಸುತ್ತಿವೆ. ಆದರೆ ಅವರಿಗೆ ಚುನಾವಣಾ ಆಯೋಗ ಕೇಳುವ ದಾಖಲಾತಿ ಒದಗಿಸಲು ಆಗುತ್ತಿಲ್ಲ. ಜೀವನೋಪಾಯಕ್ಕಾಗಿ ಕೊಡಗಿನ ಎಸ್ಟೇಟ್‌ ಸೇರಿದಂತೆ ಜಮೀನುದಾರರ ಭೂಮಿಯಲ್ಲಿ ಕೂಲಿ ಕೆಲಸ ಮಾಡುವ ನಾವು ಎಲ್ಲಿಂದ
ವಾಸಸ್ಥಳ ದೃಢೀಕರಣ ಪತ್ರ, ಜನನ ಪ್ರಮಾಣ ಪತ್ರ, ಆಸ್ತಿಯ ಹಕ್ಕುಪತ್ರ ತರುವುದು ಎಂದು ಪ್ರಶ್ನೆ ಮಾಡುತ್ತಾರೆ.
ಆದಿವಾಸಿಗಳ ಬಳಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ಇದೆ. ಆದರೆ ಇದಕ್ಕೆ ಚುನಾವಣಾ ಆಯೋಗ ಆದ್ಯತೆ ನೀಡುತ್ತಿಲ್ಲ. ಜೊತೆಗೆ ಮತಪಟ್ಟಿಯಲ್ಲಿ ಹೆಸರಿಲ್ಲದಿದ್ದಲ್ಲಿ ಸರ್ಕಾರದ ಯಾವುದೇ ಸೌಲಭ್ಯ ಸಿಗುವುದಿಲ್ಲಎಂಬ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಯಿಂದ ಎಲ್ಲಿ ಸೌಲಭ್ಯ ತಪ್ಪುವುದೋ ಎಂಬ ಆತಂಕ ಆದಿವಾಸಿಗಳಲ್ಲಿ ಶುರುವಾಗಿದೆ.

ದಾಖಲೆ ಎಲ್ಲಿಂದ ತರೋಣ?

ಕೆಲವೇ ಕುಟುಂಬಗಳಿಗೆ ಮಾತ್ರ ಭೂಮಿ ಇದೆ. ಅವುಗಳ ದಾಖಲೆ ಕೂಡ ಸರಿಯಾಗಿಲ್ಲ. ಸರ್ಕಾರ ನೀಡಿರುವ ಆಸ್ತಿಯ ಪೌತಿಖಾತೆ ಆಗಿಲ್ಲ. ಎಲ್ಲ ಇಲಾಖೆಗಳು ನಮ್ಮನ್ನು ನಿರ್ಲಕ್ಷಿಸುತ್ತವೆ. ಹಲವೆಡೆ ನಮ್ಮ ಭೂಮಿ ಒತ್ತುವರಿಯಾಗಿದೆ. ಹೀಗಿರುವಾಗ ನಾವು ಯಾವ ದಾಖಲೆಗಳನ್ನು ನೀಡಬೇಕು? ಎಂದು ಆದಿವಾಸಿ ಕೃಷ್ಣ ಪ್ರಶ್ನಿಸುತ್ತಾರೆ.
ಅರಣ್ಯ ಹಕ್ಕು ಕಾಯಿದೆ 2006 ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ದಾಖಲೆ ಒದಗಿಸುವುದಾದರೂ ಹೇಗೆ? ಇವರು ಕೇಳಿರುವ ದಾಖಲೆಗಳನ್ನು ಎಲ್ಲಿಂದ ತಂದು ಕೊಡೋಣ ಎಂಬುದು ಆದಿವಾಸಿಗಳ ಅಳಲು. ಇನ್ನು ಎಲ್ಲಾ ಪಕ್ಷಗಳಿಂದಲೂ ಬಿಎಲ್ಒ ಗಳನ್ನೂ ನಿಯೋಜಿಸಲಾಗಿದೆ. ಆದರೆ ಅವರು ಕೂಡ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದಾರೆ. ಶಾಸಕ ಅನಿಲ್ ಚಿಕ್ಕಮಾದು ಎಸ್ ಐ ಆರ್ ಪ್ರಕ್ರಿಯೆ ಬಗ್ಗೆ ಹೆಚ್ಚು ತಲೆಕೆಡಿಕೊಂಡಂತೆ ಕಾಣುತ್ತಿಲ್ಲ. ಬಿಎಲ್ಒ ಗಳ ಸಭೆಗಳಿಗೆ ಹಾಜರಗ್ತಾರೋ ಹೊರತು, ಪ್ರಕ್ರಿಯೆ ಶುರುವಾದ ಮೇಲೆ ಪರಿಶೀಲಿಸುವ ಕಾರ್ಯಕ್ಕೆ ಹೋಗಿಲ್ಲ. ಇನ್ನು ಬಿಜೆಪಿ, ಜೆಡಿಎಸ್ ಹೇಳೋದೇ ಬೇಡ. ಬಿಎಲ್ಒ ಗಳು ನೋಡಿಕೊಳ್ಳುತ್ತಾರೆ ನಾವು ಏಕೆ ತಲೆಕೆಡಿಸಿಕೊಳ್ಳಬೇಕು ಎಂಬ ಉಡಾಫೆ ಮನಸ್ಥಿತಿ ಅವರದ್ದು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 30 , 2026

ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ದುಷ್ಕರ್ಮಿಗಳ ನಡೆಗೆ ಖಂಡನೆ

ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವುದು ಆತಂಕಕಾರಿ

ಇಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ ಲೋಕಾರ್ಪಣೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 30 , 2026
    In ದಿನಪತ್ರಿಕೆ
  • ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ದುಷ್ಕರ್ಮಿಗಳ ನಡೆಗೆ ಖಂಡನೆ
    In (ರಾಜ್ಯ ) ಜಿಲ್ಲೆ
  • ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವುದು ಆತಂಕಕಾರಿ
    In (ರಾಜ್ಯ ) ಜಿಲ್ಲೆ
  • ಇಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ ಲೋಕಾರ್ಪಣೆ
    In (ರಾಜ್ಯ ) ಜಿಲ್ಲೆ
  • ಪಿಓಪಿ ಗಣೇಶ ಬದಲು ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ
    In (ರಾಜ್ಯ ) ಜಿಲ್ಲೆ
  • ಪ್ರಧಾನಿ ಮೋದಿ ಸಮ್ಮುಖದಲ್ಲಿ ಶಿಫಾ ಜಮಾದಾರ ವಿಚಾರ ಮಂಡನೆ
    In (ರಾಜ್ಯ ) ಜಿಲ್ಲೆ
  • ಕ್ರೀಡೆ ನಾಯಕತ್ವ, ಆತ್ಮವಿಶ್ವಾಸ ಬೆಳೆಸುವ ಸಾಧನ :ಡಾ.ಕಾಗವಾಡೆ
    In (ರಾಜ್ಯ ) ಜಿಲ್ಲೆ
  • ಬೇಕಾಬಿಟ್ಟಿಯಾಗಿ ಬರಗಾಲ ಪರಿಸ್ಥಿತಿ ನಿಭಾಯಿಸುತ್ತಿರುವ ಸರ್ಕಾರ
    In (ರಾಜ್ಯ ) ಜಿಲ್ಲೆ
  • ತಂತ್ರಜ್ಞಾನ ಮಿತವಾಗಿ ಬಳಸಿ, ನೈಜ ಸಂಬಂಧಗಳಿಗೆ ಒತ್ತು ನೀಡಿ
    In (ರಾಜ್ಯ ) ಜಿಲ್ಲೆ
  • ಕೂಡಲೇ ಬೆಳೆ ನಷ್ಟ ಪರಿಹಾರ ಬಿಡುಗಡೆಗೆ ರೈತರ ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.