ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಹಳೆಯ ಕಟ್ಟಡಗಳ ನವೀಕರಣ ೧,೨& ೩ ಬಿಎಚ್‌ಕೆ ವಸತಿ ಗೃಹಗಳು, ಸೇರಿದಂತೆ ಭವ್ಯವಾದ ಮತ್ತು ಸುಸಜ್ಜಿತವಾದ ತರಬೇತಿ ಕಟ್ಟಡ ಕಾಮಗಾರಿಗೆ ಸೋಮವಾರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಭೂಮಿ ಪೂಜೆ ಹಾಗೂ ಅಡಿಗಲ್ಲು ಸ್ಥಾಪನೆ ನೆರವೇರಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ರಮೇಶ ದೇಸಾಯಿ, ಉಪ ಪ್ರಾಚಾರ್ಯ ಶ್ರೀಮತಿ ಎಸ್.ಜಿ.ಮಲ್ಲಾಡಕರ, ಆರೋಗ್ಯ ಮತ್ತು ಕುಟುಂ ಕಲ್ಯಾಣ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮನೋಹರ ಕಟ್ಟಿಮನಿ, ಸಂಸ್ಥೆಯ ತರಬೇತಿ ಅಧಿಕಾರಿಗಳಾದ ಧನರಾಜ ಅಳ್ಳಿಕಟ್ಟಿ, ರವಿ ಖೇಡಗಿ, ಗುತ್ತಿಗೆದಾರರಾದ ಶಂಕರಗೌಡ ಹೊಸಮನಿ ಉಪಸ್ಥಿತರಿದ್ದರು. ಶ್ರೀಮತಿ ರೇಶ್ಮಾ ಪಿಸೆ ವಂದಿಸಿದರು. ಸಿ.ಎಸ್.ಹಿರೇಮಠ ನಿರೂಪಿಸಿದರು.

