Author: editor.udayarashmi@gmail.com

ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ದಿ-ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಸಚಿವ ಡಾ.ಎಂ.ಬಿ.ಪಾಟೀಲ ಭೂಮಿ ಪೂಜೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕುಡಿಯುವ ನೀರು, ಶಿಕ್ಷಣ, ಯುವಕರಿಗೆ ಉದ್ಯೋಗ, ರಸ್ತೆ ಅಭಿವೃದ್ದಿ, ನೀರಾವರಿ, ವಿದ್ಯುತ್ ಸೇರಿದಂತೆ ಎಲ್ಲ ಮೂಲಭೂತ ಅವಶ್ಯಕತೆಗಳಿಗೆ ಆದ್ಯತೆ ನೀಡಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡು ಜನರ ಆಶೋತ್ತರಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿದ ತೃಪ್ತಿ ನನಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.ಮದಗುಣಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಹಮ್ಮಿಕೊಂಡ ೦ ರಿಂದ ೫ ಕಿ.ಮೀ. ವರೆಗಿನ ೪ಕೋಟಿ ರೂ. ವೆಚ್ಚದ ಬಬಲೇಶ್ವರ ಮತಕ್ಷೇತ್ರದ ಶೇಗುಣಸಿ, ಮದಗುಣಕಿ, ಕೊಡಬಾಗಿ, ತಾಜಪುರ ಹಾಗೂ ಮಂಗಳೂರು ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ದಿಪಡಿಸುವ ಕಾಮಗಾರಿಗೆ ಭೂಮಿ ಪೂಜೆ ಹಾಗೂ ೨೦೨೪-೨೫ನೇ ಸಾಲಿನ ಕೆಎಸ್‌ಐಐಸಿ ಸಿ.ಆರ್.ಅನುದಾನದಲ್ಲಿ ಮದಗುಣಕಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ೫…

Read More

ಡಿಕೆಶಿ ವಜಾಗೊಳಿಸಿ ಅಥವಾ ಸಂವಿಧಾನ ಬದಲಾಯಿಸುವ ಯೋಜನೆ ಬಹಿರಂಗಪಡಿಸಿ | ಸದನದಲ್ಲಿ ಸಚಿವ ರಿಜಿಜು ತಪರಾಕಿ ನವದೆಹಲಿ: ಕರ್ನಾಟಕದಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ನೀಡಲು ಸಂವಿಧಾನ ಬದಲಾಯಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿರುವುದಾಗಿ ಆಡಳಿತಾರೂಢ ಬಿಜೆಪಿ ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾಪಿಸಿದ್ದರಿಂದ ಗದ್ದಲ, ಕೋಲಾಹಲ ಉಂಟಾಯಿತು. ಲೋಕಸಭೆಯನ್ನು ಪದೇ ಪದೇ ಮುಂದೂಡಲಾಯಿತು.ಬೆಳಗ್ಗೆ 11 ಗಂಟೆಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಕರ್ನಾಟಕದಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ವಿಷಯವನ್ನು ಪ್ರಸ್ತಾಪಿಸಿದರು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ಒದಗಿಸಲು ಅನುಕೂಲವಾಗುವಂತೆ ಸಂವಿಧಾನವನ್ನು ಬದಲಾಯಿಸುವುದಾಗಿ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು ನೀಡಿರುವ ಹೇಳಿಕೆಯನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.ಆ ವ್ಯಕ್ತಿಯನ್ನು ವಜಾಗೊಳಿಸುವ ಬಗ್ಗೆ ಕಾಂಗ್ರೆಸ್ ಸ್ಪಷ್ಪಪಡಿಸಬೇಕು ಎಂದು ಒತ್ತಾಯಿಸಿದ ರಿಜಿಜು, ಮುಸ್ಲಿಮರಿಗೆ ಮೀಸಲಾತಿ ನೀಡುವುದಾಗಿ ಹೇಳುವ ನೀವು, ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಮತ್ತು ಸಂವಿಧಾನದ ಪ್ರತಿಯನ್ನು ಜೀಬಿನಲ್ಲಿಟ್ಟುಕೊಂಡು…

Read More

ಮುಸ್ಲಿಂ ಗುತ್ತಿಗೆ ಮೀಸಲಾತಿ, ೧೮ ಶಾಸಕರ ಅಮಾನತು ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಂ ಗುತ್ತಿಗೆ ಮೀಸಲಾತಿ ಹಾಗೂ ಅಧಿವೇಶನದಲ್ಲಿ ೧೮ ಬಿಜೆಪಿ ಶಾಸಕರ ಅಮಾನತು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ನಗರದ ಅಂಬೇಡ್ಕರ ವೃತ್ತದಿಂದ ಪ್ರತಿಭಟನೆ ಆರಂಭಿಸಿದ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ವರೆಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಂಮರಿಗೆ ಮೀಸಲಾತಿ ಕಲ್ಪಿಸಿರುವುದು ಅಸಂವಿಧಾನಿಕ ನಡೆಯಾಗಿದೆ. ರಾಜ್ಯ ಸರ್ಕಾರದ ಜಾತಿ-ಜಾತಿಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.ರಾಜ್ಯ ಅಭಿವೃದ್ಧಿ ಕೆಲಸ ಮಾಡದೆ ಸಚಿವರು ಶಾಸಕರಗಳ ವಿರುದ್ಧ ಹನಿಟ್ರ್ಯಾಪ್ ಮಾಡುತ್ತಿರುವುದು ನಾಚಿಗೇಡಿತನದ ಸಂಗತಿಯಾಗಿದೆ ಎಂದು ಟೀಕಿಸಿದರು.ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ ರಚಿಸಿರುವ ಸಂವಿಧಾನದ ಶೆಡ್ಯೂಲ್‌ನಲ್ಲಿ ಇಲ್ಲದ ಜನರಿಗೆ ಮೀಸಲಾತಿ…

Read More

ರಾಣಿ ಚನ್ನಮ್ಮ ವಿವಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ವಿದ್ಯಾರ್ಥಿನಿಯರ ಸಾಧನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಳೆದ ೨೦೨೩-೨೪ ನೇ ಸಾಲಿನ ನವೆಂಬರ್ ತಿಂಗಳಲ್ಲಿ ಜರುಗಿದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಬಿ.ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯಕ್ಕೆ ಪ್ರಥಮ ಮತ್ತು ದ್ವಿತೀಯ ರ್ಯಾಂಕ ಪಡೆಯುವುದರ ಮೂಲಕ ಉನ್ನತ ಸಾಧನೆ ತೋರಿದ್ದಾರೆ.ವಿದ್ಯಾರ್ಥಿನಿಯರಾದ ಕು.ಅನುಷಾ ಕುಲಕರ್ಣಿ ಎಂ.ಎಸ್ಸಿ (ಕಂಪ್ಯೂಟರ್ ಸೈನ್ಸ್ ) ನಲ್ಲಿ ಶೇ ೮೧.೨೫% ಫಲಿತಾಂಶದೊಂದಿಗೆ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕ ಪಡೆದುಕೊಂಡಿದ್ದಾಳೆ, ಅಲ್ಲದೆ ಕು.ಐಶ್ವರ್ಯ ಆಸಂಗಿ ಎಂಎಸ್ಸಿ (ರಸಾಯನಶಾಸ್ತ್ರ) ವಿಭಾಗದಲ್ಲಿ ಶೇ ೮೧.೩೩% ಫಲಿತಾಂಶದೊಂದಿಗೆ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ ಹಾಗೂ ಚಿನ್ನದ ಪದಕ ಪಡೆದುಕೊಂಡಿದ್ದಾಳೆ ಅದೇ ರೀತಿಯಾಗಿ ಎಂ ಎ (ಇಂಗ್ಲಿಷ್) ವಿಭಾಗದಲ್ಲಿ ಕು. ಮೇಘಾ ಪವಾರ್ ಶೇ ೭೦.೩೮% ಫಲಿತಾಂಶದೊಂದಿಗೆ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರ್ಯಾಂಕ್ ಪಡೆದುಕೊಂಡು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕೋಶ, ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ಭಾರತ ಸರಕಾರ ಹಾಗೂ ನೆಹರು ಯುವ ಕೇಂದ್ರ ವಿಜಯಪುರ ಇವರ ಸಹಯೋಗದಲ್ಲಿ ದಿ. ೧೯ ಮತ್ತು ೨೦ ರಂದು ಆಯೋಜಿಸಿದ್ದ ‘ವಿಕಸಿತ್ ಭಾರತ ಯುಥ್ ಪಾರ್ಲಿಮೇಂಟ್ ಮಾರ್ಚ ೨೦೨೫’ ಸ್ಪರ್ಧೆಯಲ್ಲಿ ೧೦ ಜನ ಸ್ಪರ್ಧಾಳುಗಳು ರಾಜ್ಯ ಮಟ್ಟದ ವಿಕಸಿತ್ ಭಾರತ ಯುಥ್ ಪಾರ್ಲಿಮೆಂಟ್‌ಗೆ ಆಯ್ಕೆಯಾಗಿದ್ದಾರೆ.ಆಯ್ಕೆಯಾದ ಸ್ಪರ್ಧಾಳುಗಳಿಗೆ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ, ಕುಲಸಚಿವ ಶಂಕರಗೌಡ ಸೋಮನಾಳ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಎನ್‌ಎಸ್‌ಎಸ್ ಕೋಶದ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ ಸುರಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕೊಚ್ಚಿ ಹೋಗಿರುವ ಬೇನಾಳ ಅಬ್ಬಿಹಾಳ ರಸ್ತೆ ಸೇತುವೆ ಬಾಕ್ಸ್ ಕಲ್ವರ್ಟ್ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಆಲಮಟ್ಟಿ ಬೇನಾಳ ಆರ್.ಎಸ್.ಹಾಗೂ ಬೇನಾಳ ಎನ್.ಹೆಚ್.ಇತರ ಗ್ರಾಮಗಳಿಗೆ ಸಂಪರ್ಕ ರಸ್ತೆಯಾಗಿರುವ ಬೇನಾಳ ಅಬ್ಬಿಹಾಳ ರಸ್ತೆಗೆ ೨೦೧೨ ರಲ್ಲಿ ಕೃಷ್ಣಾ ಭಾಗ್ಯ ಜಲನಿಗಮದಿಂದ ಸುಮಾರು ೮.೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾದ ಅಗಸರ ಹಳ್ಳ ರಸ್ತೆ ಸೇತುವೆಯ ಬಾಕ್ಸ್ ಕಲ್ವರ್ಟ್ ಗಳ ರಕ್ಷಣಾ ಗೋಡೆ ಹಳ್ಳದಲ್ಲಿ ರಭಸದಿಂದ ಹರಿಯುವ ನೀರಿಗೆ ಕೊಚ್ಚಿ ಹೋಗಿದೆ . ಬೇನಾಳ ಹತ್ತಿರ ಇರುವ ಪಾರ್ವತಿ ಕಟ್ಟೆ ಹಳ್ಳಕ್ಕೆ ಆಲಮಟ್ಟಿ ಜಲಾಶಯದ ಹಿನ್ನೀರು ಸುಮಾರು ಎಂಟು ತಿಂಗಳ ಕಾಲ ಇಲ್ಲಿ ಆವರಿಸಿರುತ್ತದೆ ಹಿನ್ನೀರಿನ ಮಧ್ಯ ಸುಮಾರು ಎರಡುವರೆ ಕಿಲೋಮೀಟರ್ ಉದ್ದದ ಮಣ್ಣಿನ ಏರಿ ನಿರ್ಮಿಸಿ ಸೇತುವೆ ನಿರ್ಮಿಸಲಾಗಿದ್ದು ಹಳ್ಳದ ನೀರು, ಮತ್ತು ಜಲಾಶಯದ ಹಿನ್ನೀರು ಸರಾಗವಾಗಿ ಹರಿಯಲು ಮಧ್ಯದಲ್ಲಿ ಆರು ಬೃಹತ್ ಬಾಕ್ಸ್ ಕಲ್ವರ್ಟ್ ನಿರ್ಮಿಸಿ ಎರಡು ಬದಿಗೆ ಕಾಂಕ್ರೀಟ್ ರಕ್ಷಣಾ ಗೋಡೆ ಮತ್ತು ದಿಪ್ ನಿರ್ಮಿಸಲಾಗಿದೆ.ಪೆಬ್ರವರಿ ತಿಂಗಳಿನಿಂದ ಜೂನ್ ತಿಂಗಳ ಅಂತ್ಯದವರೆಗೆ…

Read More

ತಿಕೋಟಾ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಬಿ.ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಅಭಿಮಾನಿಗಳು, ಭಾಷಿಕರು ಸಾಗರದಾಚೆಗೆ ವಿವಿಧ ದೇಶಗಳಲ್ಲಿ ಕನ್ನಡ ಮಾತುಗಳಿಂದ ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಬಿ.ಪಾಟೀಲ ಹೇಳಿದರು.ತಿಕೋಟಾದಲ್ಲಿ ನಡೆದ ತಿಕೋಟಾ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಿ ಎಲ್ ಡಿ ಈ ಸಂಸ್ಥೆಯು ದಾಸ ಸಾಹಿತ್ಯದ ೪೦ ಕೃತಿಗಳ ರಚನೆ ಮಾಡಿದ್ದೇವೆ. ವಿಜಯಪುರ ಆದಿಲ್ ಶಾಹಿ ಆಡಳಿತದ ಉದು೯ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ ಕೀತಿ೯ ಬಿ ಎಲ್ ಡಿ ಈ ಸಂಸ್ಥೆಗೆ ಸಲ್ಲುತ್ತದೆ. ಹನ್ನೇರಡನೆಯ ಶತಮಾನದ ವಚನ ಸಾಹಿತ್ಯ ಜಗತ್ತಿಗೆ ಆಧ್ಯಾತ್ಮಿಕ ಜೀವನಕ್ಕೆ ಮೌಲ್ಯ ನೀಡಿದ್ದು ಶ್ಲಾಘನೀಯ. ಈ ಭಾಗದ ರೈತರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ನೀರು ತಂದಿರುವ ತೃಪ್ತಿ ನನಗಿದೆ ಎಂದು ಸಚಿವರು ನುಡಿದರು.ಸಮ್ಮೇಳನ ಸವಾ೯ಧ್ಯಕ್ಷರಾದ ಚನ್ನಮಲ್ಲಿಕಾಜು೯ನ ಸ್ವಾಮೀಜಿ ಮಾತನಾಡಿ, ನಮ್ಮ ಭಾಷೆ, ನಡೆ-ನುಡಿ ನಮ್ಮ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾವ್ಯ ಹುಟ್ಟುವುದು ಒಂದು ವಿಶಿಷ್ಟ ಸಂದರ್ಭದಲ್ಲಿ. ಕಾವ್ಯದಲ್ಲಿ ರಾಗ, ತಾಳ,ಲಯ, ಪ್ರಾಸಗಳು ಆ ಕವಿತೆಯ ಭಾವವನ್ನು ಹೆಚ್ಚಿಸುವಲ್ಲಿ ತನ್ನದೇಯಾದ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಭಿಪ್ರಾಯಪಟ್ಟರು. ತಿಕೋಟಾದ ವಾಡೆಯಲ್ಲಿ ನಡೆದ ತಿಕೋಟಾದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು “ವಿಜಯಪುರ ಜಿಲ್ಲೆ ಕವಿಗಳ ನಾಡು” ಎಂದ ಅವರು ಅಭಿನವ ಪಂಪ ನಾಗಚಂದ್ರನಿಂದ ಹಿಡಿದು ಕುವೆಂಪುರವರ ವರೆಗೆ ಅನೇಕ ಕವಿಗಳು ಹಾಗೂ ಕವಯತ್ರಿಯರು,ಸಾಹಿತಿಗಳು ಕನ್ನಡ ಭಾಷೆಯ,ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸುವ ಮೂಲಕ ವಿಜಯಪುರ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ ಎನ್ನುತ್ತ ಕವಿಗಳು ರಚಿಸಿದ ಕವಿತೆ ಜನಸಾಮಾನ್ಯರ, ಓದುಗರ ಹೃದಯ ಗೆಲ್ಲುವಂತಿರಬೇಕು ಎನ್ನುತ್ತ, ಹೆಚ್ಚು ಹೆಚ್ಚು ಅಧ್ಯಯನದಿಂದ ಉತ್ತಮ ಕವಿತೆಗಳು ಹೊರಹೊಮ್ಮಲು ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಗೌರವ ಅಧ್ಯಕ್ಷೆ ಭಾರತಿ ಪಾಟೀಲ ಮಾತನಾಡುತ್ತ, ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು ಸಮಾಜಮುಖಿಯಾದ, ಪ್ರೀತಿ ವಿಶ್ವಾಸದ ಕೊಂಡಿ ಬೆಸೆಯುವ ಭಾವನಾತ್ಮಕ ಸನ್ನಿವೇಶಗಳನ್ನು ತಮ್ಮ…

Read More

ಉದಯರಶ್ಮಿ ದಿನಪತ್ರಿಕೆ ಕಲಕೇರಿ: ವಿಧ್ಯಾರ್ಥಿಗಳಿಗೆ ಶಿಕ್ಷಣವನ್ನು ನಿಡುವದರ ಜೊತೆಗೆ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವದು ಮುಖ್ಯವಾಗಿದೆ, ವಿಧ್ಯಾರ್ಥಿಗಳನ್ನು ಕೆವಲ ಅಂಕ ಗಳಿಕೆಗಾಗಿ ಅವರನ್ನು ತಯಾರು ಮಾಡುವ ಬದಲಾಗಿ ದೇಶದ ಸತ್ಪçಜೆಯಾಗಿ ಹೊರಹೊಮ್ಮುವಂತ ನೈತಿಕ ಶಿಕ್ಷಣದ ಅವಶ್ಯಕತೆಯಿದ್ದು ಈ ಕೆಲಸವನ್ನು ತುರಕನಗೇರಿಯ ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಈ ಭಾಗದ ಅನಾಥ ಗಾಗೂ ನಿರ್ಗತಿಕ, ಕಡುಬಡವ ಮಕ್ಕಳಿಗೆ ಉಚಿತ ಶಿಕ್ಷಣ ನಿಡುವದರ ಮೂಲಕವಾಗಿ ಮಾಡುತ್ತಿದೆ ಎಂದು ದೇವರಹಿಪ್ಪಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಅವರು ಹೆಳಿದರು.ಕಲಕೇರಿ ಸಮಿಪದ ತುರಕುನಗೇರಿ ಗ್ರಾವiದಲ್ಲಿ ಶನಿವಾರ ಸಂಜೆ ನಡೆದ ಶ್ರೀ ಸಿದ್ದಗಂಗಾ ಕಿರಿಯ ಪ್ರಾಥಮಿಕ ಶಾಲೆಯ ೭ ನೇ ವರ್ಷದ ವಾರ್ಷಿಕೋತ್ಸವ ಹಾಗೂ ತುಮಕುರಿನ ಸಿದ್ದಗಂಗಾ ಮಠದ ಲಿಂ. ಶ್ರೀ ಶಿವಕುಮಾರ ಸ್ವಾಮಿಜಿಯವರ ೧೧೮ ನೇ ಜಯಂತ್ಯೋತ್ಸವ ಹಾಗೂ ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ “ಸಿದ್ದಗಂಗಾ ಶ್ರೀ ಕಾಯಕ ರತ್ನ” ಹಾಗೂ “ಸಿದ್ದಗಂಗಾ ಶ್ರೀ ರತ್ನ” ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ಸಂಸ್ಥೆಯ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭಾರತೀಯ ಜನತಾ ಪಕ್ಷದ ವಿಜಯಪುರ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸಿಂದಗಿ ನಗರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಜಿ.ಡಿ.ಅಂಗಡಿ ಅವರಿಗೆ ಸಿಂದಗಿ ಮಂಡಲ ಕೋಶಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಸನ್ಮಾನಿಸಿ ಗೌರವಿಸಿದರು.ಈ ವೇಳೆ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಬಿ.ಎಚ್.ಬಿರಾದಾರ, ಪರಶುರಾಮ ಗೂಳ್ಳುರ, ಈರಯ್ಯ ಮುತ್ಯಾ, ಮುರುಜಾವರ ಮಠ, ಆನಂದ ಕಂಠಿಗೊಂಡ, ಯಮನೇಶ ಮಾಗಣಗೇರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

Read More