ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ದೇಶದ ಶ್ರೀಮಂತ ಸಂಸ್ಕೃತಿಯ ಪ್ರತೀಕವಾದ ಪ್ರಾಚೀನ ಕಾಲದ ಜಾನಪದ ಕಲೆ ಸಾಹಿತ್ಯ ಪರಂಪರೆ ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾದುದು ಎಂದು ಯುವ ನಾಯಕ ಆದಿತ್ಯ ಪೋಲೀಸ್ ಪಾಟೀಲ್ ಹೇಳಿದರು.
ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವ -2025, ಉದ್ಘಾಟಿಸಿ ಮಾತನಾಡಿದ ಅವರು ಭಾವೈಕ್ಯತೆಯ ಭಾರತದಲ್ಲಿ ಉಡುಗೆ ತೊಡುಗೆ ಆಹಾರ ಪದ್ಧತಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದ್ದು, ನಾವೆಲ್ಲರೂ ದೇಶಿಯ ಸಂಸ್ಕೃತಿಯನ್ನು ಎತ್ತಿ ಹಿಡಿಯೋಣ, ಜಾನಪದ ಉತ್ಸವ ನಿತ್ಯ ನಿರಂತರ ಮೂಡಿಬರಲಿ ಎಂದವರು, ಯುವಕ ಯುವತಿಯರು ಆಧುನಿಕ ಭರಾಟೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದವರು.
ಮುಖ್ಯ ಅತಿಥಿಗಳಾದ ಸಂಜೀವರಾವ್ ಕುಲ್ಕರ್ಣಿ ಹಾಗೂ ಸಾಹೇಬಲಾಲ್ ಆಂದೇಲಿ ಮಾತನಾಡಿ ನಶಿಸುತ್ತಿರುವ ಗ್ರಾಮೀಣ ಪ್ರದೇಶದ ಕಲೆ ಸಂಸ್ಕೃತಿ ಕಟ್ಟಿ ಕೊಡವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕಿದೆ ಎಂದರು.
ಪ್ರಾಂಶುಪಾಲ ಡಾ ನಾಗಪ್ಪ ಚಾವಲ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕಿ ನಸ್ರೀನ್ ತಾಜ್ ಪ್ರಾಸ್ತಾವಿಕ ಮಾತನಾಡಿದರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಡಾ ಯಂಕನಗೌಡ ಎಸ್ ಪಾಟೀಲ, ಡಾ ಮಲ್ಲಣ್ಣ ಬಿಳೇಬಾವಿ, ದೈಹಿಕ ನಿರ್ದೇಶಕ ಡಾ ಪ್ರಸಾದ್ ಭಂಡಾರಿ, ಎನ್ ಎಸ್ ಎಸ್ ಸಂಚಾಲಕ ಡಾ ಸಿದ್ದಲಿಂಗ ರಾಠೋಡ್, ಡಾ ಶರಣಪ್ಪ ಸಾಹುಕಾರ, ಐಕ್ಯೂಎಸ್ ಸಂಚಾಲಕಿ ಡಾ ಬಸಮ್ಮ ಎಸ್, ಆಂಗ್ಲ ಉಪನ್ಯಾಸಕಿ ಸುಮಾ ಎಚ್ಚ್, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೀರೇಶ ಭಜಂತ್ರಿ, ಕಾರ್ಯದರ್ಶಿ ರೇವಣಸಿದ್ದಯ್ಯ ಮಠ, ಪ್ರಥಮ ದರ್ಜೆ ಸಹಾಯಕ ಸಂಗಮೇಶ ಪಟ್ಟಣಕರ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ಆವರಣದಿಂದ ಆರಂಭವಾದ ಎತ್ತಿನ ಗಾಡಿಯ ಮೆರವಣಿಗೆ ರಾಜ್ಯ ಹೆದ್ದಾರಿ ಮೂಲಕ ಸಾಗಿ ಭಾರತ ರತ್ನ ಸಂವಿಧಾನ ಶಿಲ್ಪಿಗೆ, ಜಗಜ್ಯೋತಿ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು, ಮೆರವಣಿಗೆಯುದ್ದಕ್ಕೂ ಡೊಳ್ಳು ವಾದ್ಯ ವೃಂದಗಳೊಂದಿಗೆ, ದೇಶಿಯ ಉಡುಗೆ ತೊಡುಗೆ ತೊಟ್ಟು ಉಪನ್ಯಾಸಕರು, ವಿದ್ಯಾರ್ಥಿಗಳು, ಹೆಜ್ಜೆ ಹಾಕುವ ದೃಶ್ಯ ಕಣ್ಮನ ಸೆಳೆದವು.
ಉಪನ್ಯಾಸಕರಾದ, ಡಾ ಉಪೇಂದ್ರ ನಾಯಕ್ ನಿರೂಪಿಸಿದರು, ಮಲ್ಲಿಕಾರ್ಜುನ ಮರಡ್ಡಿ ಸ್ವಾಗತಿಸಿದರು, ಡಾ ಮಂಜುನಾಥ ಚೆಟ್ಟಿ ವಂದಿಸಿದರು.

