ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾಧನೆಗೈಯ್ಯುವವರಿಗೆ ಬಡತನ ಎಂದೂ ಅಡ್ಡಿ ಬರುವುದಿಲ್ಲ ಮತ್ತು ಸತತ ಪ್ರಯತ್ನ, ಕಠಿಣ ಪರಿಶ್ರಮ ಮತ್ತು ದಿಟ್ಟ ಛಲವೊಂದಿದ್ದರೆ ಎಂತಹ ಸಾಧನೆಯನ್ನು ಮಾಡಬಹುದೆಂಬುದು ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಿ.ಕಾಂ ಪದವಿ ಪರೀಕ್ಷೆಯಲ್ಲಿ ಪಡೆದ ಫಲಿತಾಂಶದಿಂದ ಸಾಬೀತಾಗಿದೆ. ಈ ನಿಟ್ಟಿನಲ್ಲಿ ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಗೀತಾ ಮಿಸ್ಕಿನ್ (ಆಂಗ್ಲ ಮಾಧ್ಯಮ) ಇವಳು ಶೇ ೯೫.೪% ಅಂಕ ಪಡೆದು ಪ್ರಥಮ ಕಾಲೇಜಿಗೆ ಸ್ಥಾನ, ಅಶ್ವೀನಿ ಕುಂಬಾರ ಇವಳು ಶೇ. ೯೪.೮% ಅಂಕ ಗಳಿಸಿ ದ್ವೀತಿಯ ಸ್ಥಾನ ಹಾಗೂ ಶಂಕ್ರಮ್ಮ ನಾಗಠಾಣ ಇವಳು ಶೇ. ೮೭.೨೮%% ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ವಿಜಯಪುರ ನಗರ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಬಸನಗೌಡ. ಆರ್. ಪಾಟೀಲ (ಯತ್ನಾಳ) ಇವರು, ಕಾಲೇಜಿನ ಸಿ.ಡಿ.ಸಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಐ.ಹಂಜಗಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್.ಖೊದ್ನಾಪೂರ, ಎಂ.ಕಾಂ ವಿಭಾಗದ ಸಂಚಾಲಕ ಡಾ. ಸಂತೋಷ ಕಬಾಡೆ ಹಾಗೂ ಪ್ರಾಧ್ಯಾಪಕರಾದ ಡಾ. ಐ.ಎಸ್.ಶಿವಶರಣರ, ಡಾ. ಸಂತೋಷ ಕಬಾಡೆ, ಪ್ರೊ. ಆರ್.ಐ.ಜೋಗೂರ, ಪ್ರೊ. ವ್ಹಿ.ಆರ್. ಕಬಾಡೆ, ಡಾ. ಮಮತಾ ಬನ್ನೂರ ಹಾಗೂ ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
“ನಮ್ಮ ಕಾಲೇಜು ಯಾವ ಖಾಸಗಿ ಕಾಲೇಜುಗಳಿಗಿಂತ ಕಮ್ಮಿಯಿಲ್ಲ. ವಿದ್ಯಾರ್ಥಿ ಕೇಂದ್ರಿತ ಬೋಧನೆ-ಕಲಿಕೆ, ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಶೈಕ್ಷಣಿಕ ಪರಿಸರವನ್ನು ಹೊಂದಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುವಲ್ಲಿ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು ಶ್ರಮಿಸುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆ ಇದಾಗಿದೆ. ಪ್ರಸ್ತುತ ನಾನು ಬಿ.ಕಾಂ ಜೊತೆಗೆ ಸಿ.ಎ. ಫೌಂಡೇಷನ್ ವೃತ್ತಿಪರ ಕೋರ್ಸ ಮಾಡುತ್ತಿದ್ದು, ನನ್ನಂತಹ ಅದೇಷ್ಟೋ ವಿದ್ಯಾರ್ಥಿಗಳಿಗೆ ಈ ಕಾಲೇಜು ಜ್ಞಾನ ದೇಗುಲವಾಗಿದೆ.”
– ಗೀತಾ ಮಿಸ್ಕಿನ್
ವಿದ್ಯಾರ್ಥಿನಿಯ ಅಭಿಪ್ರಾಯ

