Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಯಾವುದೇ ಅಪರಾಧ ಕೃತ್ಯಗಳು ಜರುಗಿದರೂ ೨೪ ಗಂಟೆಗಳ ಅವಧಿಯಲ್ಲಿ ಅಪಾರಾಧಿಗಳನ್ನು ಪತ್ತೆ ಹಚ್ಚುವ ಈ ತಾಂತ್ರಿಕ ಯುಗದಲ್ಲಿ ತಿಂಗಳುಗಳೇ ಗತಿಸಿದರೂ ಯಾವೊಬ್ಬ ಅಪರಾಧಿಯನ್ನು ತಂದು ಕಟಕಟೆಯಲ್ಲಿ ನಿಲ್ಲಿಸದಿರುವುದು ಪೊಲೀಸರ ಕಾರ್ಯದಕ್ಷತೆಯ ಮೇಲೆ ಸಂಶಯ ವ್ಯಕ್ತವಾಗುತ್ತದೆ ಎಂದು ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಆಕ್ರೋಶ ವ್ಯಕ್ತಪಡಿಸಿದರು.ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ಬನ್ನೆಟ್ಟಿ ಗ್ರಾಮದಲ್ಲಿ ಮಹಾದೇವಪ್ಪ ಪೂಜಾರಿ ಎಂಬ ದಲಿತ ವ್ಯಕ್ತಿಯ ಕೊಲೆಯಾಗಿ ನಾಲ್ಕು ತಿಂಗಳಾಗುತ್ತಾ ಬಂದರೂ ಕೊಲೆಗಾರರನ್ನು ಬಂದಿಸದೇ ಇರುವುದು ಪೊಲೀಸ್ ಇಲಾಖೆಯ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ. ಇಲಾಖೆ ಈ ರೀತಿ ನಿರ್ಲಿಪ್ತತೆ ತೋರುತ್ತಿರುವುದು ಯಾವ ಕಾರಣಕ್ಕೆ? ಇಲ್ಲಿ ಕೊಲೆಗಾರನ ರಕ್ಷಣೆ ಮಾಡಲಾಗುತ್ತಿದೆಯೇ ಅಥವಾ ಯಾವುದೋ ಆಮಿಷಕ್ಕೊಳಗಾಗಿ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದಯೇ ಎಂಬುದು ಮೊದಲು ದೃಢವಾಗಬೇಕು. ತನಿಖೆಯಲ್ಲಿನ ಈ ಎಲ್ಲ ವೈಫಲ್ಯಗಳನ್ನು ಖಂಡಿಸಿ ಬರುವ ಸೆ.೧೯ರಂದು ಬನ್ನೆಟ್ಟಿ ಗ್ರಾಮದಿಂದ ಕಾಲ್ನಡಿಗೆಯ ಜಾಥಾ ಪ್ರಾರಂಭಿಸಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಸೆ.೧೬ರಂದು ಬೆಳಿಗ್ಗೆ ೧೦ಗಂಟೆಗೆ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಉಚಿತ ಪುಸ್ತಕ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯ ಎಸ್.ಎಮ್.ಪೂಜಾರಿ ತಿಳಸಿದ್ದಾರೆ.ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಚೇರಮನ್ನರು ಹಾಗೂ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ನೆರವೇರಿಸಲಿದ್ದಾರೆ. ಸಾನಿಧ್ಯವನ್ನು ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ವಹಿಸುವರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್.ಎಂ.ಪೂಜಾರಿ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮವಿವಿ ಕುಲಸಚಿವರಾದ ಶಂಕರಗೌಡ ಎಸ್.ಸೋಮನಾಳ ಆಗಮಿಸಲಿದ್ದಾರೆ. ಅತಿಥಿಗಳಾಗಿ ಸಂಸ್ಥೆಯ ಸಹ ಕಾರ್ಯದರ್ಶಿ ಅಶೋಕ ವಾರದ, ಉಪಸ್ಥಿತಿಯನ್ನು ನಿವೃತ್ತ ದೈಹಿಕ ಉಪನ್ಯಾಸಕ, ಸಾಹಿತಿ ಎಂಜೆಎಫ್ ಲಾಯನ್ ಕೆ.ಹೆಚ್.ಸೋಮಾಪೂರ ವಹಿಸುವರು. ವಿದ್ಯಾರ್ಥಿ ಒಕ್ಕೂಟ ಕಾರ್ಯಾಧ್ಯಕ್ಷೆ ಜಿ.ವಿ.ಪಾಟೀಲ, ಪ್ರಧಾನ ಕಾರ್ಯದರ್ಶಿ ಸಂಗಮ್ಮ ಪೂಜಾರಿ ವೇದಿಕೆಯ ಮೇಲೆ ಇರಲಿದ್ದಾರೆ ಎಂದು ಪತ್ರಿಕಾ ವಿಭಾಗದ ಕಾರ್ಯಾಧ್ಯಕ್ಷ ಮಹಾಂತೇಶ ನೂಲಾನವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಳೆ ನೀರಿನಿಂದ ಮನೆ ಪೂರ್ಣ ಆವೃತ್ತವಾಗಿ ಮಾರಾಟಕ್ಕೆ ತಯಾರಿಸಿದ್ದ ಸಿಹಿತಿಂಡಿ ಸಹಿತ ಐವತ್ತು ಸಾವಿರ ಮೌಲ್ಯದ ಇಲೆಕ್ಟ್ರಾನಿಕ್ಸ್ ವಸ್ತುಗಳು ಹಾಳಾದ ಘಟನೆ ಪಟ್ಟಣದಲ್ಲಿ ಭಾನುವಾರ ಜರುಗಿದೆ.ಪಟ್ಟಣದಲ್ಲಿ ಭಾನುವಾರ ರಾತ್ರಿ ಸುರಿದ ಸತತ ಮಳೆಯಿಂದ ಸದಯ್ಯನಮಠ ಸುತ್ತಮುತ್ತಲಿನ ಆನಂದ, ಮಲ್ಲಯ್ಯ, ಶಿವಯ್ಯ ಹಾಗೂ ಶ್ರೀಶೈಲ ಸ್ಥಾವರಮಠ ಎಂಬುವವರ ಮನೆಗಳಿಗೆ ಮಳೆ ನೀರು ಪ್ರವೇಶಿಸಿ ಅವಾಂತರ ಮಾಡಿದೆ. ಮಳೆ ನೀರು ಮನೆಯುದ್ದಕ್ಕೂ ತುಂಬಿದ ಪರಿಣಾಮ ಮಕ್ಕಳು ಸಹಿತ ಕುಟುಂಬದವರೆಲ್ಲ ನಿದ್ರಿಸಲು ಆಗದೇ ಅಸಹಾಯಕರಾಗಿ ಒಂದೆಡೆ ಕುಳಿತರು. ಜೊತೆಗೆ ಸೋಮವಾರ ಸಂತೆಯ ಮಾರಾಟಕ್ಕೆ ಸಿದ್ಧಪಡಿಸಿದ್ದ ಶೇವು, ಬೂಂದೆ ಲಾಡು, ಜಿಲೇಬಿಯಂತಹ ಸಾವಿರಾರು ರೂ.ಗಳ ಮೌಲ್ಯದ ತಿನಿಸುಗಳು ಸಂಪೂರ್ಣವಾಗಿ ಹಾಳಾಗಿವೆ. ಆನಂದ ಸದಯ್ಯನಮಠ ಅವರ ಮನೆಯಲ್ಲಿ ಸುಮಾರು ಒಂದು ಅಡಿಯಷ್ಟು ನೀರು ರಾತ್ರಿ ಇಡೀ ಇದ್ದ ಕಾರಣ ಪ್ರೀಜ್, ಕೂಲರ್ ಸಹಿತ ಹಲವು ಇಲೆಕ್ಟ್ರಾನಿಕ್ಸ್ ವಸ್ತುಗಳು ಹಾನಿಗೊಳಗಾಗಿವೆ.ಪಟ್ಟಣದಲ್ಲಿ ಸುರಿಯುತ್ತಿರುವ ಮಳೆಯಿಂದ ತಗ್ಗಾದ ಪ್ರದೇಶ ಹಾಗೂ ರಸ್ತೆಗಳಲ್ಲಿ ನೀರು ನಿಂತು ಸಾರ್ವಜನಿಕರ ತೊಂದರೆ ಉಂಟು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಾ. ಪಂಡಿತ ಪುಟ್ಟರಾಜ ಗವಾಯಿಗಳು ಸಂಗೀತ ಲೋಕದ ದಿಗ್ಗಜರು. ಸಾವಿರಾರು ಅಂಧ ಮಕ್ಕಳ ಬಾಳಿಗೆ ನಂದಾದೀಪವಾಗಿ ಸಂಗೀತ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಗುರು ಕುಮಾರೇಶ್ವರ ಎಂಬ ಕೃಪಾ ಪೋಷಿತ ನಾಟ್ಯ ಸಂಘವನ್ನು ಕಟ್ಟಿ, ಅಂಗವಿಕಲ, ಅನಾಥ, ಬಡ ಮತ್ತು ಅಂಧ ಮಕ್ಕಳಿಗೆ ಉಚಿತ ಆಹಾರ, ಆಶ್ರಯ, ಶಿಕ್ಷಣವನ್ನು ಒದಗಿಸುವಲ್ಲಿ ಶ್ರಮಿಸಿದವರು ಎಂದು ನಿವೃತ್ತ ಸೇನಾನಿ ಭರಮಣ್ಣ ಕಡಕೋಳ ಅವರು ಅಭಿಪ್ರಾಯಪಟ್ಟರು.ಅವರು ನಗರದ ಸೇನಾ ನಗರದ ಶಿವಾಲಯ ದೇವಸ್ಥಾನದಲ್ಲಿ ಗಾನ ತರಂಗ ಸಂಗೀತ ಶಾಲೆಯ ಸಹಯೋಗದಲ್ಲಿ ಜರುಗಿದ ಪಂಡಿತ ಪುಟ್ಟರಾಜ ಗವಾಯಿಗಳ ೧೫ ನೇಯ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಗಾನ ತರಂಗ ಸಂಗೀತ ಶಾಲೆಯ ಶಿಕ್ಷಕ ಶ್ರೀಶೈಲ ಬೀಳೂರ ಮಾತನಾಡುತ್ತಾ, ಗದುಗಿನ ವೀರೇಶ್ವರ ಪುಣ್ಯಾಶ್ರಮವು ಸಂಗೀತ ಲೋಕಕ್ಕೆ ಕೊಡುಗೆ ನೀಡಿದ ನಮ್ಮ ನಾಡಿನ ಶ್ರೇಷ್ಠ ಆಶ್ರಮವಾಗಿದೆ. ಪುಟ್ಟರಾಜ ಗವಾಯಿಗಳು ವಿಕಲಚೇತನ ಮಕ್ಕಳಿಗೆ ಸ್ವತಂತ್ರವಾಗಿ ಬದುಕು ಸಾಗಿಸಲು ಆತ್ವವಿಶ್ವಾಸ ಮೂಡಿಸುತ್ತಾ, ಸಂಗೀತ ಮತ್ತು ಪ್ರವಚನದ ಕಲೆಯನ್ನು ಕಲಿಸುತ್ತಿದ್ದರು ಎಂದು ಹೇಳಿದರು.ಅಧ್ಯಕ್ಷತೆಯನ್ನು…
ಉದಯರಶ್ಮಿ ದಿನಪತ್ರಿಕೆ ವರದಿ: ಗುರು ಆರ್ ಹಿರೇಮಠಆಲಮೇಲ: ಮಳೆಗಾಲ ಪ್ರಾರಂಭವಾದ ಮೇಲೆ ಭೀಮಾ ನದಿಗೆ ಈಗಾಗಲೇ 2-3 ಬಾರಿ ಅಪಾರ ಪ್ರಮಾಣದ ನೀರು ಹರಿದು ಕಡಿಮೆಯಾಗಿದೆ ಎನ್ನುವಷ್ಟರಲ್ಲಿ ಮತ್ತೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆಮಹಾರಾಷ್ಟ್ರದ ಭೀಮಾ ನದಿ ಪಾತ್ರದ ಪ್ರದೇಶದಲ್ಲಿ ಬೀಳುತ್ತಿರುವ ಅಪಾರ ಪ್ರಮಾಣದ ಮಳೆಯಿಂದಾಗಿ ಉಜನಿ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರು ನದಿ ಪಾತ್ರಕ್ಕೆ ಹರಿದು ಬಿಡಲಾಗಿದ್ದು, ಭೀಮಾ ನದಿಯ ಉಪನದಿಯಾದ ಸೀನಾ ನದಿಯು ಕೂಡ ತುಂಬಿ ಹರಿಯುತ್ತಿದ್ದು, ಅಫ್ಜಲಪುರ ತಾಲ್ಲೂಕಿನಲ್ಲಿ ಭೀಮಾ ನದಿಗೆ ಸೇರುವ ಬೋರಿ ಹಳ್ಳಕ್ಕೂ ಕೂಡ ಅಪಾರ ಪ್ರಮಾಣದಲ್ಲಿ ನೀರು ಬಂದಿರುವುದರಿಂದ ಮಂಗಳವಾರ ಸಂಜೆ ಅಥವಾ ಬುಧವಾರ ದಿವಸ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ ಸಮೀಪ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೊನ್ನ ಬ್ಯಾರೇಜ್ ಗೆ ಒಟ್ಟು 1 ಲಕ್ಷ 50 ಸಾವಿರ ಒಳ ಹರಿವು ಹಾಗೂ ಹೊರಹರಿವಿನ ಪ್ರಮಾಣ ಇರುವ ಅಂದಾಜು ಇರುವುದರಿಂದ ಭೀಮಾ ನದಿ ಪಾತ್ರದ ವಿಜಯಪುರ ,…
ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಸಂಚಾರ ಕಮಾಂಡ್ ಕೇಂದ್ರ ಸ್ಥಾಪನೆಗೆ ಈ ದೇಣಿಗೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಸಂಚಾರ ಕಮಾಂಡ್ ಕೇಂದ್ರ ಸ್ಥಾಪಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಅಧ್ಯಕ್ಷತೆಯ ಸಿದ್ದಸಿರಿ ಸೌಹಾರ್ದ್ ಸಹಕಾರಿ ಸಂಘ ನಿಯಮಿತದಿಂದ ರೂ.25 ಲಕ್ಷ ದೇಣಿಗೆ ಚೆಕ್ ನ್ನು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರಿಗೆ ಹಸ್ತಾಂತರಿಸಲಾಯಿತು.ಕರ್ನಾಟಕ ರಾಜ್ಯ ಸೌಹಾರ್ದ್ ಸಂಯುಕ್ತ ಸಹಕಾರಿ ನಿ ಹಾಗೂ ಸಿದ್ದಸಿರಿ ಸೌಹಾರ್ದ ಸಹಕಾರಿ ನಿ. ನಿರ್ದೇಶಕರಾದ ರಾಮನಗೌಡ ಪಾಟೀಲ ಯತ್ನಾಳ ರವರು, ವಿಜಯಪುರ ನಗರವು ಬೃಹತ್ತಾಗಿ ಬೆಳೆದಿದೆ ಮತ್ತು ವರ್ಷದಿಂದ ವರ್ಷಕ್ಕೆ ಎಲ್ಲ ದಿಕ್ಕಿನಲ್ಲಿಯೂ ಬೆಳೆಯುತ್ತಿದೆ. ಅದಕ್ಕೆ ಅನುಗುಣವಾಗಿ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸಾರ್ವಜನಿಕರ ಸುರಕ್ಷತೆಯಿಂದ ಈ ಸಂಚಾರ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಲು, ಅಪಘಾತಗಳನ್ನು ತಡೆಯಲು, ಸುಧಾರಿತ ಸಂಚಾರ ಕಣ್ಗಾವಲು ವ್ಯವಸ್ಥೆಗಳು, ಪ್ರಮುಖ ವೃತ್ತಗಳ ಮೇಲ್ವಿಚಾರಣೆ, ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ಮತ್ತು…
ಉದಯರಶ್ಮಿ ದಿನಪತ್ರಿಕೆ ಚಡಚಣ: ಮಹಾರಾಷ್ಟçದ ಭೀಮಾನದಿಯ ತಟದಲ್ಲಿ ಈ ವರ್ಷ ವಿಪರೀತ ಮಳೆಯಿಂದಾಗಿ ಕರ್ನಾಟಕದ ಬಹುತೇಕ ಭೀಮಾನದಿಗೆ ಹೊಂದಿಕೊಂಡಿರುವ ಜಮೀನುಗಳು ಜಲಾವೃತವಾಗಿ ಮುಂಗಾರು ಬೇಳೆಹಾನಿ ಕುರಿತುಸೋಮವಾರ ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ ಪುನರ್ ಪರಿಶೀಲಿಸಿದರು.ರೈತರಿಗೆ ಬೆಳೆ ಹಾನಿಯ ಪರಿಹಾರ ಸರಕಾರದಿಂದ ಕೊಡಿಸುವ ಸಲುವಾಗಿ ಈ ಮೊದಲು ಚಡಚಣ ತಹಶೀಲ್ದಾರರ ಸಿಬ್ಬಂದಿ ಕೃಷಿ ಹಾಗೂ ತೊಟಗಾರಿಕೆ ಅಧಿಕಾರಿಗಳು ಬೆಳೆ ಹಾನಿ ಕುರಿತು ಸಮಗ್ರವಾಗಿ ಪರಿಶೀಲಿಸಿ ಫಸಲು(ಬೇಳೆ)ಹಾನಿಗೊಳಗಾದ ರೈತರ ಜಮೀನಿನ ಜಿಪಿಎಸ್ ಪೋಟೊ ದೊಂದಿಗೆ ಯಾವ ಬೆಳೆ ಹಾನಿಯಾಗಿದೆ ಎಷ್ಟು ಹೆಕ್ಟೇರ್ ಹಾನಿಯಾಗಿದೆ, ರೈತನ ಹೆಸರು ಹೀಗೆ ಹಲವಾರು ವಿಷಯ ಕುರಿತು ಅಧಿಕಾರಿಗಳು ಸಮೀಕ್ಷೆ ಮಾಡಿದ್ದರು. ತಾಲೂಕಿನ ೧೩ ಗ್ರಾ.ಪಂ.ಗಳಲ್ಲಿ ಈ ಎಲ್ಲ ಸಮೀಕ್ಷೆಯ ವರದಿ ಲಗತ್ತಿಸಿ ರೈತರಿಗೆ ಒಂದು ವಾರ ಆಕ್ಷೇಪಣೆಗೆ ಅವಕಾಶ ಕಲ್ಪಿಸಿದ್ದರು. ಸೋಮವಾರ ಆಕ್ಷೇಪಣೆಯ ಅವಧಿ ಮುಗಿದಿದ್ದರಿಂದ ಎಲ್ಲ ಸಮೀಕ್ಷಾ ವರದಿಗಳು ಸರಿಯಾಗಿದೆಯೊ ಅಥವಾ ಇಲ್ಲವೋ ಎಂದು ಪುನರ್‌ಪರಿಶೀಲನೆ ಮಾಡಿ ಸರಕಾರಕ್ಕೆ ಅಂತಿಮ ವರದಿ ಸಲ್ಲಿಸಬೇಕಾಗಿರುವದರಿಂದ ಪುನರ್ ಪರಿಶೀಲಿಸಲಾಯಿತು.ಈ ಸಂದರ್ಭದಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಶ್ರೀ ಅಭಿನವ ವಿದ್ಯಾ ಸಂಸ್ಥೆಯಲ್ಲಿ ಸೆ.೧೪ ರಂದು ಪ್ರಥಮ ರಾಜ್ಯ ಮಟ್ಟದ ಸೂರ್ಯ ನಮಸ್ಕಾರ ಕ್ರೀಡಾಕೂಟ ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟನೆ ಕಾರ್ಯಕ್ರಮ ಜರುಗಿತು.ಉದ್ಘಾಟಕರಾಗಿ ಕೆ ಜಿ, ಎಸ್ ಎಸ್ ಸಂಸ್ಥೆ, ಮಾನಸ ಗಂಗೋತ್ರಿ ವಸತಿ ಶಾಲೆ ತಿಡಗುಂದಿಯ ಸಂಸ್ಥಾಪಕ, ಅಧ್ಯಕ್ಷ ಬಸನಗೌಡ ಬಿ ಹರನಾಳ, ಅಧ್ಯಕ್ಷರಾಗಿ ಮೋಹನ ದಳವಾಯಿ, ಅಧ್ಯಕ್ಷರು ಶ್ರೀ ಅಭಿನವ ವಿದ್ಯಾ ಸಂಸ್ಥೆ, ವಿಜಯಪುರ, ಮುಖ್ಯ ಅತಿಥಿಯಾಗಿ ತಮ್ಮಾರಾಯ ಪೋದ್ದಾರ, ಅಮೃತ ಕೌಲಗಿ, ಹಾಗು ಅಖಿಲ ಕರ್ನಾಟಕ ಸೂರ್ಯನಮಸ್ಕಾರ ಸಂಸ್ಥೆಯ, ಸಂಸ್ಥಾಪಕ ಪ್ರದಾನ ಕಾರ್ಯದರ್ಶಿ ಬಸವರಾಜ ನಂ ಬಾಗೇವಾಡಿ, ನಿರೂಪಕರಗಿ ಜ್ಯೋತಿ ನಿ ಪುಜಾರಿ, ಸಂಜೆಯಸ್ವಾಮಿ ತೋನಶ್ಯಾಳಮಠ ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಜಾಪ್ರಭುತ್ವದ ಯಶಸ್ಸಿಗೆ ಮುಖ್ಯವಾಗಿ ಚುನಾವಣೆಗಳಲ್ಲಿ ಸಕಾರಾತ್ಮಕವಾಗಿ ಭಾಗವಹಿಸಬೇಕು ಹಾಗೂ ತಮ್ಮ ತಮ್ಮ ಮತಗಳನ್ನು ಹಣ ಮತ್ತು ಇತರೆ ಪ್ರಲೋಭನೆಗಳಿಗೆ ಮಾರಿಕೊಳ್ಳದೆ ವಿವೇಚನೆಯಿಂದ ಚಲಾಯಿಸಬೇಕು ಎಂದು ಕುಲಸಚಿವ ಶಂಕರಗೌಡ ಸೋಮನಾಳ ಸಲಹೆ ನೀಡಿದರು.ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಘಟಕದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಪರಿಕಲ್ಪನೆ, ಅದರ ಹುಟ್ಟು ಹಾಗೂ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅದು ಬೆಳೆದುಬಂದ ದಾರಿಗಳನ್ನು ವಿದ್ಯಾರ್ಥಿನಿಯರಿಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕದ ನಿರ್ದೇಶಕ ಪ್ರೊ.ಮಲ್ಲಿಕಾರ್ಜುನ.ಎನ್.ಎಲ್. ಅವರು, ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಯುವಜನಾಂಗಕ್ಕೆ ಸರಿಯಾದ ಮಾರ್ಗದರ್ಶನ ಅಗತ್ಯ. ಒಂದೊಮ್ಮೆ ಪ್ರಜಾಪ್ರಭುತ್ವ ಸಡಿಲಗೊಂಡರೆ ಅರಾಜಕತೆ ಉಂಟಾಗುವ ಅಪಾಯಗಳಿವೆ ಎಂದರು.ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಾಮಾನ್ಯ…
ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸಲಹೆ ಉದಯರಶ್ಮಿ ದಿನಪತ್ರಿಕೆ ಗೊಳಸಂಗಿ: ಕೆಲವೇ ಕೆಲವು ಶಿಕ್ಷಕರಿಂದಾಗಿ ಶಿಕ್ಷಣ ಕ್ಷೇತ್ರಕ್ಕೆ ಕಳಂಕ ಬರುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಕರು ಆದರ್ಶಮಯ ಜೀವನದ ಮೂಲಕ ಆದರ್ಶ ಸಮಾಜ ರೂಪಿಸುವ ಶಿಲ್ಪಿಗಳಾಗಬೇಕು ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಶಿಕ್ಷಕರಿಗೆ ಕಿವಿ ಮಾತು ಹೇಳಿದರು.ಸೋಮವಾರ ಗೊಳಸಂಗಿ ಗ್ರಾಮದ ಅಪ್ಪಣ್ಣ ದಳವಾಯಿ ಪ್ರೌಢ ಶಾಲಾ ಸಭಾಭವನದಲ್ಲಿ ಬಸವವನಬಾಗೇವಾಡಿ ತಾಲೂಕು ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೊಲ್ಹಾರ, ನಿಡಗುಂದಿ ಹಾಗೂ ಬಸವವನಬಾಗೇವಾಡಿ ತಾಲೂಕ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಸರ್ಕಾರ ತನ್ನ ಆದಾಯದಲ್ಲಿ ಅತಿಹೆಚ್ಚು ಅನುದಾನವನ್ನು ಶಿಕ್ಷಣ ಹಾಗೂ ವೈದ್ಯಕೀಯ ಇಲಾಖೆಗಳಿಗೆ ಆರ್ಥಿಕ ವೆಚ್ಚ ಮಾಡುತ್ತಿದೆ. ಹೀಗಾಗಿ ಶಿಕ್ಷಕರು ಗುಣಮಟ್ಟ ಹಾಗೂ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಸಮಾಜ ತಮ್ಮ ಮೇಲೆ…
