ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉತ್ತರ ಪ್ರದೇಶದ ಗೋರಕಪುರದಲ್ಲಿ ನಡೆದ
ಅಂಡರ್-14 ಬಾಲಕಿಯರ ವಿಭಾಗದ ಕ್ರಿಕೆಟ್ ಸ್ಫರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ, ಇಂಡಿ ಡಿವೈಎಸ್ಪಿ ಸದಾಶಿವ ಕಟ್ಟಿಮನಿ ಅವರ ಸುಪುತ್ರಿ ಆರಾಧ್ಯ ಕಟ್ಟಿಮನಿ ‘ದ್ವಿತೀಯ ಸ್ಥಾನ’ದ ಗೆಲುವು ಸಾಧಿಸುವ ಮೂಲಕ ‘ನ್ಯಾಷನಲ್ ಕ್ರಿಕೆಟ್ ಸ್ಫರ್ಧೆ’ಗೆ ಆಯ್ಕೆಯಾಗಿದ್ದಾಳೆ.
ಮೂಲತಃ ಚಡಚಣ ತಾಲ್ಲೂಕಿನ ಜೀರಂಕಲಗಿ ಗ್ರಾಮದ ಬಾಲಕಿ ಆರಾಧ್ಯ ಕಟ್ಟಿಮನಿ ಉಡುಪಿಯ ಶಾರದಾ ರೆಸಿಡೆನ್ಸಿ ಸ್ಕೂಲ್ ನಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಇವಳ ರಾಷ್ಟ್ರಮಟ್ಟದ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪೋಷಕರು ಹಾಗೂ ಚಡಚಣ ತಾಲೂಕು ಶ್ರೀ ಮಹಾ ಶಿವಶರಣ ಹರಳಯ್ಯ ಸಮುದಾಯವು ಸಂತಸ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದೆ.

