ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಾತೃಸ್ವರೂಪಿ ಮಹಿಳೆ ಇಂದು ಸಮಾಜದ ಎಲ್ಲ ರಂಗಗಳಲ್ಲೂ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ ಎಂದು ಶ್ರೀಮಹಾಂತೇಶ್ವರ ಸಂಸ್ಥಾನ ಹಿರೇಮಠದ ಬಸವಲಿಂಗ ಶ್ರೀ ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಭಾನುವಾರ ಶ್ರಾವಣಮಾಸ, ಗುರುಚನ್ನಬಸವಶ್ರೀಗಳ ೩೮ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜರುಗಿದ ಶ್ರೀಶರಣಬಸವೇಶ್ವರರ ಮಹಾಪುರಾಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಮಹಿಳೆ ಮಾತೆ, ಮಡದಿ, ಸಹೋದರಿಯ ರೂಪದಲ್ಲಿ ಜೀವನದ ಪ್ರತಿಕ್ಷಣ ಮಾನವನ ಉಸಿರಾಗಿದ್ದಾಳೆ. ಅಂತೆಯೇ ಇಂದು ಮಹಿಳಾ ಪ್ರತಿನಿಧಿಗಳ ಸನ್ಮಾನ ಎಂದರು.
ದೇವರಹಿಪ್ಪರಗಿ ಜಡಿಮಠದ ಜಡಿಸಿದ್ಧೇಶ್ವರಶ್ರೀ, ಸ್ಥಳೀಯ ಚೌಕಿಮಠದ ಅಭಿನವ ಮುರುಗೇಂದ್ರ ಶ್ರೀ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರವಚನಕಾರ ಮಡಿವಾಳಯ್ಯಶಾಸ್ತ್ರೀ ಗದ್ದಗಿಮಠ (ಜೇರಟಗಿ), ಗಾಯಕ ಯಶವಂತ ಬಡಿಗೇರ, ತಬಲಾವಾದಕ ರಾಜಶೇಖರ ಕಟ್ಟಿಸಂಗಾವಿ ಸಂಗೀತ ಸೇವೆ ನೀಡಿದರು.
ಬಸವಣ್ಣ ಜಾಲವಾದಿ, ನಿಂಗಣ್ಣ ಶರಣರು, ಸಂಗಪ್ಪಗೌಡ ಬಿರಾದಾರ, ಗುಂಡಪ್ಪಗೌಡ ಬೋರಾವತ, ಬಾಪುಗೌಡ ಬಿರಾದಾರ, ಸಿದ್ದನಗೌಡ ಬಿರಾದಾರ, ಅಪ್ಪುಗೌಡ ಪೋಲಿಸ್ ಪಾಟೀಲ, ಮಾಂತಗೌಡ ಸುಂಬಡ, ರಾಜಶೇಖರ್ ಛಾಯಾಗೋಳ, ಗುರಣ್ಣ ಅಂಗಡಿ, ಸಾಹೇಬಗೌಡ ಸಂಗಣ್ಣಿ, ಭೀಮನಗೌಡ ಕುಳೇಕುಮಟಗಿ, ನಾನಾಗೌಡ ಬೋರಾವತ, ದಯಾನಂದ ಗುತ್ತರಗಿಮಠ, ಮಲ್ಲನಗೌಡ ಬಿರಾದಾರ, ಸೋಮಶೇಖರ ಹಿರೇಮಠ, ಮಲ್ಲಿಕಾರ್ಜುನ ಕಲಬುರಗಿ, ಕಾಶಿಲಿಂಗಯ್ಯ ಕುರನಳ್ಳಿಮಠ, ಗುರುಪಾದ ಹುಣಸಗಿ, ಚನ್ನಪ್ಪಗೌಡ ಬಿರಾದಾರ(ಹಂದಿಗನೂರ) ದಾಸೋಹದ ವ್ಯವಸ್ಥಾಪಕರಾದ ವಿದ್ಯಾನಂದ ಹಿರೇಮಠ, ಮಾಂತಯ್ಯ ಹಿರೇಮಠ, ಬಸಯ್ಯ ಹೊಸಮಠ, ರೇವಣಸಿದ್ದಯ್ಯ ಹಿರೇಮಠ ಮಹಿಳಾ ಸಂಘದ ಪದಾಧಿಕಾರಿಗಳಾದ ಮಹಾದೇವಿ ಸುಂಬಡ, ನಾಗಮ್ಮ ಯತ್ನಾಳ, ಬಸಮ್ಮ ಹೊಸಮಠ, ಸುನಂದಾ ಭದ್ರಗೊಂಡ, ಸಂಗೀತಾ ಹೊಸಮಠ, ರೋಹಿಣಿ ಹುಣಸಗಿ, ಗುರುಬಾಯಿ ಜಾಲವಾದಿ, ಶಾರದಾ ಹುಣಸಗಿ, ಗುರುಬಾಯಿ ಜಂಬುಗೋಳ ಇದ್ದರು.

