ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಸರ್ಕಾರಿ ನೌಕರರ ಸಹಕಾರಿ (ಜಿಓಸಿಸಿ)ಬ್ಯಾಂಕಿಗೆ “ಅತ್ಯುತ್ತಮ ನಗರ ಸಹಕಾರಿ ಬ್ಯಾಂಕ್” ಎಂದು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಜಿಲ್ಲಾ ಮಧ್ಯವರ್ತಿ ಸಹಕಾರಿ (ಡಿಸಿಸಿ) ಬ್ಯಾಂಕ್ ವತಿಯಿಂದ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕಿಗೆ ೨೦೨೫-೨೬ನೇ ಸಾಲಿನ “ಅತ್ಯುತ್ತಮ ನಗರ ಸಹಕಾರಿ ಬ್ಯಾಂಕ್” ಪ್ರಶಸ್ತಿಯನ್ನು ಮಾಜಿ ಸಚಿವ ಹಾಲಿ ಶಾಸಕ ಶಿವಾನಂದ ಪಾಟೀಲ ನೀಡಿದರು.
ಬ್ಯಾಂಕಿನ ನಿರ್ದೇಶಕರಾದ ಅಲ್ಲಾಭಕ್ಷ ವಾಲಿಕಾರ ಹಾಗೂ ಪ್ರಧಾನ ವ್ಯವಸ್ಥಾಪಕ ಸಿ ಎಸ್ ಹಿರೇಮಠ ಇವರು ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿಗೆ ಭಾಜನರಾದ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅರ್ಜುನ ಲಮಾಣಿ ಮಾತನಾಡಿ, ಬ್ಯಾಂಕಿನ ಯಶಸ್ವಿಗೆ ನಿರಂತರ ಬೆಂಬಲ ನೀಡುತ್ತಿರುವ ನಮ್ಮ ಗೌರವಾನ್ವಿತ ಶೇರುದಾರರು ಹಾಗೂ ಗ್ರಾಹಕರು ದಕ್ಷ ಮಾರ್ಗದರ್ಶನ ನೀಡಿದ ಆಡಳಿತ ಮಂಡಳಿ, ಶ್ರಮವಹಿಸಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರಿಗೆ ಪ್ರಶಸ್ತಿ ಕೀರ್ತಿ ಸಲ್ಲಬೇಕು. ಶತಮಾನ ಕಂಡ ನಮ್ಮ ಬ್ಯಾಂಕಿಗೆ ಮುಂದೆಯೂ ಇದೇ ರೀತಿ ಸಹಾಯ ಸಹಕಾರ, ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಪುಷ್ಪಾ ಗಚ್ಚಿನಮಠ, ನಿರ್ದೇಶಕರಾದ ಅರವಿಂದ ಹೂಗಾರ, ಪ್ರಶಾಂತ ಚನಗೊಂಡ, ಹಣಮಂತ ಕೊಣದಿ, ಆನಂದಗೌಡ ಬಿರಾದಾರ, ಅಲ್ಲಾಬಕ್ಷ ವಾಲೀಕಾರ, ಅಶೋಕ ಚನಬಸುಗೋಳ, ಮಲಕಪ್ಪ ಟಕ್ಕಳಕಿ, ಚಂದ್ರಶೇಖರ ಜಿತ್ತಿ, ಸಯ್ಯದಜುಬೇರ್ ಕೆರೂರ, ಹಣಮಂತರಾಯ ಸಿಂದಗಿ, ಮಹೇಶ ನಾಯಿಕ, ಸರಫರಾಜ ಕಂದಗಲ್, ಗೀತಾ ಹತ್ತಿ, ಪ್ರಧಾನ ವ್ಯವಸ್ಥಾಪಕ ಸಿ ಎಸ್ ಹಿರೇಮಠ, ಶಶಿ ಸಾತಲಗಾಂವ ಸೇರಿದಂತೆ ಬ್ಯಾಂಕಿನ ಸಿಬ್ಬಂಧಿ ಉಪಸ್ಥಿತರಿದ್ದರು.

