ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶ್ರೀ ಅಭಿನವ ವಿದ್ಯಾ ಸಂಸ್ಥೆಯಲ್ಲಿ ಸೆ.೧೪ ರಂದು ಪ್ರಥಮ ರಾಜ್ಯ ಮಟ್ಟದ ಸೂರ್ಯ ನಮಸ್ಕಾರ ಕ್ರೀಡಾಕೂಟ ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟನೆ ಕಾರ್ಯಕ್ರಮ ಜರುಗಿತು.
ಉದ್ಘಾಟಕರಾಗಿ ಕೆ ಜಿ, ಎಸ್ ಎಸ್ ಸಂಸ್ಥೆ, ಮಾನಸ ಗಂಗೋತ್ರಿ ವಸತಿ ಶಾಲೆ ತಿಡಗುಂದಿಯ ಸಂಸ್ಥಾಪಕ, ಅಧ್ಯಕ್ಷ ಬಸನಗೌಡ ಬಿ ಹರನಾಳ, ಅಧ್ಯಕ್ಷರಾಗಿ ಮೋಹನ ದಳವಾಯಿ, ಅಧ್ಯಕ್ಷರು ಶ್ರೀ ಅಭಿನವ ವಿದ್ಯಾ ಸಂಸ್ಥೆ, ವಿಜಯಪುರ, ಮುಖ್ಯ ಅತಿಥಿಯಾಗಿ ತಮ್ಮಾರಾಯ ಪೋದ್ದಾರ, ಅಮೃತ ಕೌಲಗಿ, ಹಾಗು ಅಖಿಲ ಕರ್ನಾಟಕ ಸೂರ್ಯನಮಸ್ಕಾರ ಸಂಸ್ಥೆಯ, ಸಂಸ್ಥಾಪಕ ಪ್ರದಾನ ಕಾರ್ಯದರ್ಶಿ ಬಸವರಾಜ ನಂ ಬಾಗೇವಾಡಿ, ನಿರೂಪಕರಗಿ ಜ್ಯೋತಿ ನಿ ಪುಜಾರಿ, ಸಂಜೆಯಸ್ವಾಮಿ ತೋನಶ್ಯಾಳಮಠ ಉಪಸ್ಥಿತರಿದ್ದರು.