ಬಡದಾಳದ ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಶರಣರ ಸಂದೇಶಗಳನ್ನು ಆಲಿಸುವುದು ಪುಣ್ಯದ ಕೆಲಸ. ಪ್ರತಿಯೊಬ್ಬರೂ ತಮ್ಮ ಮಾತು ಹಿತವಾಗಿರುವಂತೆ ನೋಡಿಕೊಳ್ಳಬೇಕು. ಶರಣರ ತತ್ವ, ಆದರ್ಶ ಹಾಗೂ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಬಡದಾಳದ ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.
ಅವರು ತಾಲೂಕಿನ ಸುಕ್ಷೇತ್ರ ದೇವರನಾವದಗಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀ ಸೋಮೇಶ್ವರ ಜಾತ್ರಾ ಮಹೋತ್ಸವ ಹಾಗೂ ನೂತನ ಕಳಸಾರೋಹಣ ಅಜಾತ ಶ್ರೀ ನಾಗಲಿಂಗರ ಪುರಾಣ ಮಂಗಲೋತ್ಸವದ ಧರ್ಮ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಾರ್ವಜನಿಕರು ಪರಸ್ಪರ ಸಂವಹನ ನಡೆಸುವ ಸಂದರ್ಭದಲ್ಲಿ ಹಿತವಾದ ಹಾಗೂ ಸೌಮ್ಯವಾದ ಮಾತುಗಳನ್ನು ಬಳಸಬೇಕು. ಶರಣರ ವಿಚಾರಧಾರೆ, ಉತ್ತಮ ನಡವಳಿಕೆ ಮತ್ತು ಸೌಹಾರ್ದಯುತ ಜೀವನ ನಡೆಸಬೇಕು ಎಂದು ಹೇಳಿದರು.
ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾರ್ಯರು, ನಿವೃತ್ತ ಶಿಕ್ಷಕ ಅಶೋಕ ಬಡಿಗೇರ, ಶಿಕ್ಷಕ ನಿಂಗಣ್ಣ ಬಿರಾದಾರ, ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕ ಯರಗಲ, ಅಶೋಕ ಜಾಧವ, ಜಗದೀಶ ಗುಗ್ಗರಿ, ನಿಂಗಣ್ಣ ಸಣ್ಣಕ್ಕಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕ ಅಶೋಕ ಮನಗೂಳಿ
ಮಂಗಲ ಕಾರ್ಯಾಲಯದ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹25 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು.
ಮಾಜಿ ಶಾಸಕ ರಮೇಶ ಭೂಸನೂರ ಸಂಸದರ ಕಡೆಯಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಪೂಜ್ಯರ ಸಾರೋಟ ಮೆರವಣಿಗೆ, ಪುರವಂತರು, ಬಾಜಾ ಬಜಂತ್ರಿ, ದೇವರ ಪಲ್ಲಕ್ಕಿ ಮೆರವಣಿಗೆ ಮಾಡಿದರು.
ಶಿಕ್ಷಕ ಚನ್ನು ನಾರಾಯಣಪುರ ನೀರೂಪಿಸಿದರು, ಮುತ್ತು ಗುಗ್ಗರಿ ವಂದಿಸಿದರು.
ವಿಶೇಷ ಸನ್ಮಾನಿತರಾದ ಮಡಿವಾಳ ಗೋಗಿ, ಸತೀಶ ಕೋರಿ, ಡಾ.ಮಹಾಂತೇಶ ಹೀರೆಗೌಡರ, ಶ್ರೀಶೈಲ ಮಠಪತಿ, ರುದ್ರಗೌಡ ಜನಿವಾರ, ಪ್ರಕಾಶ ಗುಗ್ಗರಿ, ಮಡಿವಾಳ ಕುಮಸಿ, ಶಂಕರ ಗುಗ್ಗರಿ, ನಿಂಗಣ್ಣ ಸಿಂದಗಿ, ಬಸವರಾಜ ಬಮ್ಮನಜೋಗಿ, ಗುರುಸಿದ್ಧ ಬಡಿಗೇರ, ಶರಣು, ರಮೇಶ, ಶಿವು ಬಮ್ಮನಜೋಗಿ, ಮಾಂತಯ್ಯ ಮಠಪತಿ, ಮಲಕಣ್ಣ ಕುಮಸಿ ಸೇರಿದಂತೆ ಅಪಾರ ಭಕ್ತ ಬಳಗ ಇದ್ದರು.

