ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶ್ರೀ ಪವನ ಸೌಹಾರ್ದ ಸಹಕಾರಿ ಸಂಘ ನಿ. ಇದರ ೬ನೇ ವಾರ್ಷಿಕ ಸರ್ವ ಸಾಮಾನ್ಯ ಸಭೆ ಇತ್ತೀಚೆಗೆ ನಗರದ ಶ್ರೀ ಕಾಳಿಕಾದೇವಿ ಕಲ್ಯಾಣ ಮಂಟಪದಲ್ಲಿ ಜರುಗಿತು.
ಸಭೆಯ ಉದ್ಘಾಟನೆಯನ್ನು ಶ್ರೀ ಶಾಂತೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘದ ಆಡಳಿತಾಧಿಕಾರಿ ಸುಭಾಸ ಇಂಡಿ, ಸಿ.ಎ. ಇವರು ನೆರವೇರಿಸಿ ಮಾತನಾಡುತ್ತಾ, ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಆಡಳಿತ ಮಂಡಳಿಯ ನಿರ್ದೇಶಕರುಗಳ ಹಾಗೂ ಸದಸ್ಯರ ಸಹಕಾರ ಅತಿ ಅವಶ್ಯಕ. ಕಳೆದ ೬ ವರ್ಷಗಳಿಂದ ಶ್ರೀ ಪವನ ಸೌಹಾರ್ದ ಸಹಕಾರಿ ಸಂಘವು ಅ ವರ್ಗದಲ್ಲಿದೆ ಎಂದು ಹೇಳಿದರು. ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಾನಂದ ಎಸ್. ಢವಳಗಿ ಇವರು ಸನ್ ೨೦೨೫-೨೬ನೇ ಸಾಲಿನ ವರದಿ ವಾಚನ ಮಾಡಿದರು.
ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷ ಮನೋಹರ ಎಸ್. ಹೇರಲಗಿ, ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಬಸವರಾಜ ಢವಳಗಿ, ಓಂಪ್ರಕಾಶ ಗಿರಗಾಂವಕರ, ಮಹಾದೇವ ಕೋರಿಶೆಟ್ಟಿ, ಅಮಿತ ಬೀಳಗಿ, ಅಕ್ಷಯ ಬೀಳಗಿ, ಬಸಣ್ಣಾ ಶಳ್ಳಗಿ, ಶ್ರೀಮತಿ ಶಕುಂತಲಾ ಎಸ್. ಢವಳಗಿ, ಶ್ರೀಮತಿ ರೇಖಾ ಆರ್. ಬೀಳಗಿ, ವಿಶ್ವನಾಥ ಉಮದಿ, ರಮೇಶ ಪವಾರ, ಮೋಹನ ಚಿತ್ರಗಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಹಾಯಕ ವ್ಯವಸ್ಥಾಪಕ
ಪ್ರೀತಿ ಬಿರಾದಾರ, ಸಿಬ್ಬಂದಿಗಳಾದ ಮೇಘಾ ಕುಲಕರ್ಣಿ, ರುದ್ರಪ್ಪ ಕಟಗೇರಿ, ಪ್ರಸಾದ ಹೇರಲಗಿ, ಅರವಿಂದ ರಜಪೂತ, ಶ್ರೀಶೈಲ ಕೋವಳ್ಳಿ, ರತ್ನಾಕರ ಪಾಟೀಲ ಬಸವಂತರಾಯ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಉಮೇಶ ಎಸ್. ಕೌಲಗಿ ವಂದನಾರ್ಪಣೆ ನಡೆಸಿಕೊಟ್ಟರು. ರಮೇಶ ಬೀಳಗಿ ಕಾರ್ಯಕ್ರಮ ನಿರೂಪಿಸಿದರು.

