ಉದಯರಶ್ಮಿ ದಿನಪತ್ರಿಕೆ
ಚಡಚಣ: ಮಹಾರಾಷ್ಟçದ ಭೀಮಾನದಿಯ ತಟದಲ್ಲಿ ಈ ವರ್ಷ ವಿಪರೀತ ಮಳೆಯಿಂದಾಗಿ ಕರ್ನಾಟಕದ ಬಹುತೇಕ ಭೀಮಾನದಿಗೆ ಹೊಂದಿಕೊಂಡಿರುವ ಜಮೀನುಗಳು ಜಲಾವೃತವಾಗಿ ಮುಂಗಾರು ಬೇಳೆಹಾನಿ ಕುರಿತು
ಸೋಮವಾರ ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ ಪುನರ್ ಪರಿಶೀಲಿಸಿದರು.
ರೈತರಿಗೆ ಬೆಳೆ ಹಾನಿಯ ಪರಿಹಾರ ಸರಕಾರದಿಂದ ಕೊಡಿಸುವ ಸಲುವಾಗಿ ಈ ಮೊದಲು ಚಡಚಣ ತಹಶೀಲ್ದಾರರ ಸಿಬ್ಬಂದಿ ಕೃಷಿ ಹಾಗೂ ತೊಟಗಾರಿಕೆ ಅಧಿಕಾರಿಗಳು ಬೆಳೆ ಹಾನಿ ಕುರಿತು ಸಮಗ್ರವಾಗಿ ಪರಿಶೀಲಿಸಿ ಫಸಲು(ಬೇಳೆ)ಹಾನಿಗೊಳಗಾದ ರೈತರ ಜಮೀನಿನ ಜಿಪಿಎಸ್ ಪೋಟೊ ದೊಂದಿಗೆ ಯಾವ ಬೆಳೆ ಹಾನಿಯಾಗಿದೆ ಎಷ್ಟು ಹೆಕ್ಟೇರ್ ಹಾನಿಯಾಗಿದೆ, ರೈತನ ಹೆಸರು ಹೀಗೆ ಹಲವಾರು ವಿಷಯ ಕುರಿತು ಅಧಿಕಾರಿಗಳು ಸಮೀಕ್ಷೆ ಮಾಡಿದ್ದರು. ತಾಲೂಕಿನ ೧೩ ಗ್ರಾ.ಪಂ.ಗಳಲ್ಲಿ ಈ ಎಲ್ಲ ಸಮೀಕ್ಷೆಯ ವರದಿ ಲಗತ್ತಿಸಿ ರೈತರಿಗೆ ಒಂದು ವಾರ ಆಕ್ಷೇಪಣೆಗೆ ಅವಕಾಶ ಕಲ್ಪಿಸಿದ್ದರು. ಸೋಮವಾರ ಆಕ್ಷೇಪಣೆಯ ಅವಧಿ ಮುಗಿದಿದ್ದರಿಂದ ಎಲ್ಲ ಸಮೀಕ್ಷಾ ವರದಿಗಳು ಸರಿಯಾಗಿದೆಯೊ ಅಥವಾ ಇಲ್ಲವೋ ಎಂದು ಪುನರ್‌ಪರಿಶೀಲನೆ ಮಾಡಿ ಸರಕಾರಕ್ಕೆ ಅಂತಿಮ ವರದಿ ಸಲ್ಲಿಸಬೇಕಾಗಿರುವದರಿಂದ ಪುನರ್ ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ಚಡಚಣ ತಹಶೀಲ್ದಾರ ಸಂಜಯ ಇಂಗಳೆ, ಕೃಷಿ ಅಧಿಕಾರಿಗಳು, ತೋಟಗಾರಿಕೆ ಇಲಾಖಾ ಅಧಿಕಾರಿಗಳು ಹಾಗೂ ಚಡಚಣ ಕಂದಾಯ ನೀರಿಕ್ಷಕ ಜಿ.ಎಂ.ಬಿರಾದಾರ, ಗ್ರಾಮ ಆಡಳಿತಾಧಿಕಾರಿಗಳು ಇದ್ದರು.