Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಚಡಚಣ: ಮಹಾತ್ಮಾ ಗಾಂಧೀಜಿ ಮತ್ತು ಲಾಲಬಹಾದ್ದೂರ ಶಾಸ್ತ್ರಿ ಅವರ ಆದರ್ಶಗಳು ಭಾರತೀಯರ ನೈತಿಕ, ಸಾಮಾಜಿಕ ಮತ್ತು ರಾಜಕೀಯ ನಾಯಕತ್ವಕ್ಕೆ ಸ್ಪೂರ್ತಿಯಾಗಿವೆ. ಅವರ ತತ್ವಾದರ್ಶಗಳು ವಿಶ್ವಮಾನ್ಯವಾಗಿದ್ದು, ಅವುಗಳ ಪಾಲನೆ ಇಂದಿನ ಪೀಳಿಗೆಗೆ ಪ್ರಸ್ತುತವಾಗಿವೆ ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧೀಜಿ-ಲಾಲಬಹಾದ್ದೂರ ಶಾಸ್ತ್ರೀಜಿ ಅವರ ಜಯಂತಿ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದರು.ಅಹಿಂಸೆಯ ಮೂಲಕ ಮಹಾತ್ಮಾ ಗಾಂಧೀಜಿ ಅವರು ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಶಾಂತಿಯ ದೂತ. ಗಾಂಧೀಜಿಯವರ ತತ್ವಾದರ್ಶಗಳು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ದೇಶಕ್ಕೆ ದಾರಿದೀಪವಾಗಿಬೇಕೆಂದು ಹೇಳಿದರು.ಶಿಕ್ಷಕ ಡಿ ಎಸ್ ಬಗಲಿ ಮಾತನಾಡಿ ಸತ್ಯ, ಅಹಿಂಸೆ, ಸರಳತೆ, ರಾಷ್ಟ್ರೀಯತೆ, ಸಾಮಾಜಿಕ ನ್ಯಾಯ ಮತ್ತು ಸ್ವಾವಲಂಬನೆಯಂತಹ ಆದರ್ಶಗಳು ಇಂದಿನ ಯುವ ಜನಾಂಗದ ಬದುಕನ್ನು ರೂಪಿಸುತ್ತವೆ.ಗಾಂಧೀಜಿಯವರು ಸರಳ ಜೀವನ ಮತ್ತು ಉನ್ನತ ಚಿಂತನೆಗಳನ್ನು ನಂಬಿದ್ದರು ಎಂದು ಹೇಳಿದರು.ಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಹಾದೇವ ಆದಿಗೊಂಡೆ,ಎಚ್…

Read More

ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ವಚ್ಛತೆಯು ಕೇವಲ ವೈಯಕ್ತಿಕ ಅಭ್ಯಾಸವಲ್ಲ, ಸಮಾಜದ ಉನ್ನತಿ ಮತ್ತು ಸಮೃದ್ಧಿಗೆ ಅಗತ್ಯವಾದ ಜವಾಬ್ದಾರಿ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್.ಎಸ್. ಎಸ್ ಕೋಶ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ವಿಶ್ವವಿದ್ಯಾಲಯದ ಆವರಣದಲ್ಲಿ ಮಹಾತ್ಮಾ ಗಾಂಧೀಜಿಯವರ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸ್ವಚ್ಛತೆಯು ಉತ್ತಮ ಆರೋಗ್ಯಕ್ಕೆ ಅವಶ್ಯಕವಾಗಿದ್ದು, ಇದು ರೋಗಾಣುಗಳು ಮತ್ತು ಸೋಂಕುಗಳ ಹರಡುವಿಕೆಯನ್ನು ತಡೆಯುವುದರೊಂದಿಗೆ ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಸಹಕಾರಿ ಆಗುತ್ತದೆ. ವೈಯಕ್ತಿಕ ಸ್ವಚ್ಛತೆ, ಪರಿಸರ ಸ್ವಚ್ಛತೆ ಮತ್ತು ಆಹಾರದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ವ್ಯಕ್ತಿಗೂ ಸಮಾಜಕ್ಕೂ ಸಮಾನವಾಗಿ ಪ್ರಯೋಜನಕಾರಿ ಎಂದರು.ಈ ಕಾರ್ಯಕ್ರಮದಲ್ಲಿ ಪ್ರೊ.ಪಿ.ಜಿ.ತಡಸದ, ಪ್ರೊ.ಸಕ್ಪಾಲ್ ಹೂವಣ್ಣ, ಪ್ರೊ.ಮಹೇಶ ಚಿಂತಾಮಣಿ, ಪ್ರೊ.ಅಶೋಕಕುಮಾರ ಸುರಪುರ, ಪ್ರೊ.ಜ್ಯೋತಿ ಉಪಾಧ್ಯಾಯ, ಪ್ರೊ. ಹಣಮಂತಯ್ಯ ಪೂಜಾರಿ, ಪ್ರೊ.ರಾಜು ಬಾಗಲಕೋಟ, ಪ್ರೊ. ರಾಜಕುಮಾರ ಮಾಲಿಪಾಟೀಲ,…

Read More

ಲೇಖನ- ಜಯಶ್ರೀ ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನನ್ನೊಲವೆಪ್ರೀತಿ ಯಾವಾಗ ಹೇಗೆ ಎಲ್ಲಿ ಮೊಳೆಯುಡೆಯುತ್ತದೋ ಗೊತ್ತೇ ಆಗುವುದಿಲ್ಲ. ಮಳೆಗಾಲದ ದಿನವೆಂದು ಗೊತ್ತಿದ್ದರೂ ಹೂಬಿಸಿಲಿದ್ದಿದ್ದರಿಂದ ಕೊಡೆಯನ್ನು ಬಿಟ್ಟು ಬಸ್ ಏರಿದ್ದೆ. ಕೆಳಗಿಳಿಯುವಷ್ಟರಲ್ಲಿ ಮಳೆ ಹನಿಗಳು ಟಿಪ್ ಟಿಪ್ ಎಂದು ಭೂ ರಮೆ ಕೆನ್ನೆಯನ್ನು ಚುಂಬಿಸತೊಡಗಿದ್ದವು. ಬನ್ನಿ ನನ್ನ ಕೊಡೆ ಕೆಳಗೆ ಜೋರಾಗುತ್ತಿದೆ ಮಳೆ ಎಂಬ ನಿನ್ನ ಗಂಭೀರ ದನಿಗೆ ತಲೆದೂಗಿ ಕೊಡೆಯಿಲ್ಲದ ನಾನು ತುಸು ಮುಜುಗರದಿಂದಲೇ ನಿನ್ನ ಕೊಡೆಯಲ್ಲಿ ತಲೆ ಬಾಗಿಸಿದೆ. ಇಬ್ಬರೂ ಜೊತೆಗೂಡಿ ನಡೆಯುವಾಗ ಬೆರಳುಗಳು ತಾಗಿದವು. ಕೆಲ ಹೆಜ್ಜೆಗಳಲ್ಲಿ ಪರಿಚಯವಾಯಿತು. ಆ ಪರಿಚಯ ಸ್ನೇಹವಾಗಲು, ಆ ಸ್ನೇಹ ಪ್ರೀತಿಯಾಗಿ ಬದಲಾಗಲು ಬಹಳ ಸಮಯ ಬೇಕಾಗಲಿಲ್ಲ.ಮಧ್ಯಾಹ್ನದ ಹೊತ್ತಲ್ಲಿ ಕರಿಮೋಡಗಳು ಕಟ್ಟಿ ಹಗಲಲ್ಲಿಯೇ ಕತ್ತಲಾವರಿಸಿದಂತೆ ನನ್ನ ಬಾಳ ಪುಸ್ತಕದಲ್ಲಿ ಒಂಟಿತನದ ಕರಾಳ ಛಾಯೆ ಭರ್ಜರಿಯಾಗಿ ಕೈವಾಡ ತೋರಿಸುತ್ತಿದ್ದಾಗ ಬರಗಾಲದಲ್ಲಿಯ ಅನಿರೀಕ್ಷಿತ ಮಳೆಯಂತೆ ಬಂದವನು ನೀನು. ಬಾಯಾರಿದವಳಿಗೆ ಬರೀ ನೀರು ಕೊಟ್ಟರೆ ಸಾಕಿತ್ತು. ಅಂಥದ್ದರಲ್ಲಿ ಪ್ರೀತಿಯ ಸವಿಜೇನಿನ ಮಳೆ ಸುರಿಸಿದೆ. ಪ್ರೀತಿಯಿಲ್ಲದ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲರು ಬುಧವಾರ ಪಟ್ಟಣದ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿದರು.ಪಟ್ಟಣದ ಅಗರಖೇಡ ರಸ್ತೆಯಲ್ಲಿರುವ ಶಾಂತು ಧನಶೆಟ್ಟಿ ಇವರಿಗೆ ಸೇರಿದ ಎರಡು ದೊಡ್ಡ ಗೋಡಾನುಗಳು ನೆಲ ಅಂತಸ್ತಿನಲ್ಲಿದ್ದು ಅಲ್ಲಿದ್ದ ಎಲ್ಲ ಕೃಷಿಗೆ ಉಪಯೋಗಿಸುವ ಗೊಬ್ಬರ ಇತರೆ ಔಷಧಿ ಸಾಮಾನುಗಳು ಸಂಪೂರ್ಣ ನೀರಿನಲ್ಲಿದ್ದುದು ವೀಕ್ಷಿಸಿದರು.ಆ ಪ್ರದೇಶದಲ್ಲಿ ಅಂದಾಜು ೧೦ ಕ್ಕೂ ಹೆಚ್ಚು ನೆಲ ಅಂತಸ್ತಿನ ಅಂಗಡಿಗಳಲ್ಲಿ ಮಳೆ ನೀರು ಬಂದಿದೆ. ಅದರಲ್ಲೂ ಒಂದೇ ದಿನ ಪಟ್ಟಣದಲ್ಲಿ ೫೦ ಮಿ.ಮಿ ಮಳೆಯಾಗಿದ್ದು ಅದೇ ಈ ಹಾನಿಯಾಗಿರುವದು ವೀಕ್ಷಿಸಿದರು.ಅದರಂತೆ ರೇವಪ್ಪನ ಮಡ್ಡಿಯಲ್ಲಿರುವ ನೀರು ಇಂಡಿ ಹೊರವಲಯದ ಕಲ್ಲೂರ ಪೆಟ್ರೋಲ ಪಂಪ ಹತ್ತಿರ ಇಂಡಿ ಅಗರಖೇಡ ಮೇಲೆ ಬಂದು ಹೋಗಲು ಜಾಗವಿಲ್ಲದೆ ರಸ್ತೆಯ ಮೇಲೆ ನಿಂತು ರಸ್ತೆ ಬಂದ ಆಗಿರುವದು ವೀಕ್ಷಿಸಿ ಅದನ್ನು ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆ ಶಾಸ್ವತ ಪರಿಹಾರ ಮಾಡಬೇಕೆಂದು ಎಇಇ ದಯಾನಂದ ಮಠ ಮತ್ತು ಮುಖ್ಯಾಧಿಕಾರಿ ಸಿದ್ರಾಮ ಕಟ್ಟಿಮನಿ ಇವರಿಗೆ ತಿಳಿಸಿದರು.ಅದಲ್ಲದೆ ಸರಕಾರಿ ಪ್ರೌಢಶಾಲೆಗೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತುಳಜಾಪುರದ ಅಂಬಾಭವಾನಿ ದೇವಸ್ಥಾನದಲ್ಲಿ ನಡೆಯುವ ಕೋಜಾಗಿರಿ ಹುಣ್ಣಿಮೆಯಲ್ಲಿ ಪಾಲ್ಗೊಳ್ಳಲು ಲಕ್ಷಾಂತರು ಭಕ್ತರು ಪಾದಯಾತ್ರೆ ಕೈಕೊಂಡಿದ್ದಾರೆ.ದೇವರ ಹಿಪ್ಪರಗಿ, ತಾಂಬಾ, ಸಿಂದಗಿ, ಆಲಮೇಲ ಸೇರಿದಂತೆ ಇಂಡಿ ತಾಲೂಕಿನ ಸುಮಾರು ೨೦೦ ಕ್ಕೂ ಹೆಚ್ಚು ಗ್ರಾಮಗಳ ಅಂಬಾಭವಾನಿ ಭಕ್ತರು ಪಾದಯಾತ್ರೆಯ ಮೂಲಕ ಇಂಡಿಯ ಮಾರ್ಗವಾಗಿ ಹೋಗುತ್ತಿದ್ದಾರೆ.ದಾರಿಯುದ್ದಕ್ಕು ಭಕ್ತಾದಿಗಳಿಗೆ ಉಚಿತ ಕುಡಿಯುವ ನೀರು ಚಹಾ ಮತ್ತು ಅಲ್ಪೋಪಹಾರ ವ್ಯವಸ್ಥೆ ಇದೆ.ಇಂಡಿಯಲ್ಲಿಯೇ ೧೨ ಕಡೆ ಮತ್ತು ಇಂಡಿಯಿಂದ ಧೂಳಖೇಡ ವರೆಗೆ ಅಂದಾಜು ೧೦೦ ಕ್ಕೂ ಹೆಚ್ಚು ಕಡೆ ಪ್ರಸಾದ ವ್ಯವಸ್ಥೆ ಇದೆ. ಉಪ್ಪಿಟ್ಟು ಶಿರಾ, ಪುರಿ, ಅವಲಕ್ಕಿ, ಬೋಂಡಾ ಸೇರಿದಂತೆ ಹಲವಾರು ಬಗೆಯ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ. ಅಲ್ಲಲ್ಲಿ ತಂಪಾದ ಪಾನೀಯ ಮತ್ತು ಉಚಿತ ಔಷದೋಪಚಾರ ವ್ಯವಸ್ಥೆ ಇದೆ.ಪ್ರಯಾಣಿಕರಿಗೆ ತೊಂದರೆಯಾಗದಂತೆ ವಿಜಯಪುರ ಸೋಲಾಪುರ ರಸ್ತೆ ಒಂದು ಬದಿಯನ್ನು ಕೇವಲ ಭಕ್ತಾಧಿಗಳಿಗೆ ಪಾದಚಾರಿಗಳಿಗೆ ವ್ಯವಸ್ಥೆ ಮಾಡಿದ್ದಾರೆ.ಈ ಮಧ್ಯೆ ಪೋಲಿಸ ವಾಹನಗಳು ಸತತ ಓಡಾಟವಿದ್ದು ಆರೋಗ್ಯ ಇಲಾಖೆಯಿಂದ ಅಂಬುಲೆನ್ಸ ವ್ಯವಸ್ಥೆ ಕೂಡ ಇದೆ.ಬಹುತೇಕ ಮುಂದಿನ ಎರಡು ದಿನಗಳ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಖಾಸಗಿ ಸಹಭಾಗಿತ್ವದಲ್ಲಿ ನಡೆಸಕೂಡದು ಎಂದು ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಂದಾಗ ಹಾಗೂ ಮಾಧ್ಯಮ ಗೋಷ್ಠಿ ಸಂದರ್ಭದಲ್ಲಿ ಹೋರಾಟಗಾರರನ್ನು ಹಗುರವಾಗಿ ಮಾತನಾಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದಾರೆ ಎಂದು ಹೋರಾಟಗಾರರು ಆಪಾದಿಸಿದ್ದಾರೆ.ಧರಣಿ ಕುಳಿತವರು ಶೇ. ೯೦ ರಷ್ಟು ನಿರಪರಾದಿಗಳು ಉಳಿದ ೧೦% ರಷ್ಟು ಯಾರದೋ ಕುಮ್ಮಕ್ಕಿನಿಂದ ಧರಣಿ ನಡೆಸುತ್ತಿದ್ದಾರೆಂದು ಸಚಿವರು ಹೇಳಿಕೆ ನೀಡಿದ್ದಾರೆ. ಧರಣಿ ಕುಳಿತವರು ಯಾವ ಕಾರಣಕ್ಕಾಗಿ ಕುಳಿತಿದ್ದಾರೆ. ಅವರ ನಿಲುವೇನು? ಯಾರಿಗಾಗಿ ಧರಣಿ ಕುಳಿತಿದ್ದಾರೆ ಮತ್ತು ಏತಕ್ಕಾಗಿ ಧರಣಿ ನಡೆಸುತ್ತಿದ್ದಾರೆ ಎಂದು ತಿಳಿದುಕೊಳ್ಳದೆ ಅಧಿಕಾರದ ದರ್ಪದಿಂದ ತಮ್ಮ ಮನಸ್ಸಿಗೆ ತೋಚಿದಂತೆ ಮಾತನಾಡಿರುವುದು ತಮ್ಮ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ. ಧರಣಿ ಕುಳಿತವರು ಯಾರು ಅಜ್ಞಾನಿಗಳಿಲ್ಲ. ಎಲ್ಲರೂ ಉನ್ನತ ಶಿಕ್ಷಣ ಅಧ್ಯಯನ ಮಾಡಿದಂತವರು ಇಲ್ಲಿ ಯಾರದೂ ಸ್ವಾರ್ಥವಿಲ್ಲ. ಮತ್ತೊಬ್ಬರಿಂದ ಪ್ರಚೋದನೆಗೆ ಒಳಗಾಗಿ ಅಥವಾ ಯಾರ ಕುಮ್ಮಕ್ಕೂ ಇದರಲ್ಲಿ ಇಲ್ಲ. ಇಂತಹದರಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯ ದಶಮಿಯ ದಿನದಂದು ವಿಶೇಷವಾಗಿ ಜನರು ಬನ್ನಿ ಮರವನ್ನು ಪೂಜಿಸಿ, ಬನ್ನಿ ಎಲೆಗಳನ್ನು ಚಿನ್ನದಂತೆ ಒಬ್ಬರಿಗೊಬ್ಬರೂ ಪರಸ್ಪರ ಹಂಚಿಕೊಂಡು ಪ್ರೀತಿ, ಸ್ನೇಹ, ಬಾಂಧವ್ಯ ಮತ್ತು ಸಹೋದರತೆಯ ಭಾವದೊಂದಿಗೆ ಕಿರಿಯರು ಹಿರಿಯರಿಗೆ ನೀಡುತ್ತಾರೆ. ಇದರಿಂದ ಸಮಾಜದಲ್ಲಿ ಬಾಂಧವ್ಯ ಮತ್ತು ಸೌಹಾರ್ಧತೆಯು ಹೆಚ್ಚಾಗುತ್ತದೆ ಎಂದು ಶಿಕ್ಷಕಿ ಮಂಜುಳಾ ಜೋಶಿ ಅಭಿಪ್ರಾಯಪಟ್ಟರು.ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ ಕಾಲನಿಯಲ್ಲಿ ಜೈ ಶ್ರೀ ಹನುಮಾನ ದೇವಸ್ಥಾನದಲ್ಲಿ ಅ.೨ ವಿಜಯ ದಶಮಿ ದಿನದಂದು ಜರುಗಿದ ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಅವರು ಮಾತನಾಡಿ, ಈ ವಿಜಯ ದಶಮಿ ಆಚರಣೆಯು ಪಾಂಡವರು ತಮ್ಮ ಶಸ್ತಾçಸ್ತçಗಳನ್ನು ಬನ್ನಿ ಮರದಲ್ಲಿ ಬಚ್ಚಿಟ್ಟು, ವಿಜಯ ದಶಮಿಯ ದಿನದಂದು ಅವುಗಳನ್ನು ತೆಗೆದುಕೊಂಡು ಯುದ್ಧದಲ್ಲಿ ಗೆದ್ದ ಕಥೆಯನ್ನು ಸ್ಮರಿಸುವ ಸುದಿನವಾಗಿದೆ. ಪ್ರೀತಿಯಿಂದ ಕೂಡಿದ ಉಡುಗೊರೆಯನ್ನು ಸಂಕೇತಿಸುವ ಹಬ್ಬವೇ ಇದಾಗಿದೆ. ನಗರ ಪ್ರದೇಶಗಳಲ್ಲಿ ನೆರೆಮನೆಯವರು ಯಾರು ಎಂಬುದೇ ಗೊತ್ತಿಲ್ಲದಿರುವ ಇಂತಹ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಸಾಮೂಹಿಕವಾಗಿ ಎಲ್ಲರೂ ಸೇರಿ ಬನ್ನಿ ವಿನಿಮಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳ ಸಹಯೋದಲ್ಲಿ ಅಕ್ಟೋಬರ್ ೦೪ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೧೦:೩೦ಕ್ಕೆ ನಡೆಯುವ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅವರು ಉದ್ಘಾಟಿಸುವರು. ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೌರವ ಉಪಸ್ಥಿತರಿರಲಿದ್ದು, ನಗರದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಕಾರ್ಯಕ್ರಮದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳಾ ಸಬಲೀಕರಣಕ್ಕೆ ಉದ್ಯಮಶೀಲತಾ ಯೋಜನೆಗಳು ನೆರವು ನೀಡುತ್ತವೆ. ಅಲ್ಲದೇ ಮಹಿಳೆಯರು ಸ್ವಯಂ ಉದ್ಯೋಗ ಕೈಕೊಳ್ಳಲು ಅವಕಾಶ ಕಲ್ಪಿಸುತ್ತವೆ ಎಂದು ಮುಕುಂದ ಝಳಕಿ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ವಿಭಾಗದ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ‘ಉದ್ಯಮಶೀಲತೆಯ ಮೂಲಕ ಮಹಿಳೆಯರ ಸಬಲೀಕರಣ ಮತ್ತು ಸ್ವಯಂ ಉದ್ಯೋಗ ಯೋಜನೆಗಳು’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರನ್ನು ಸಬಲೀಕರಣಗೊಳಿಸಲು ಉದ್ಯಮಶೀಲತಾ ಅಭಿವೃದ್ದಿ ಯೋಜನೆಗಳು ಸಹಾಯಕವಾಗಿವೆ. ಸರ್ಕಾರ ಹಣಕಾಸಿನ ನೆರವು, ಕೌಶಲ್ಯ ತರಬೇತಿ ಹಾಗೂ ವ್ಯವಹಾರ ಪ್ರಾರಂಭಿಸಲು ಅಗತ್ಯವಾದ ಅವಕಾಶಗಳನ್ನು ಒದಗಿಸುತ್ತದೆ. ಜೊತೆಗೆ ರೂಡಸೆಟ್ ಸಂಸ್ಥೆಯು ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ, ಸಶಕ್ತರನ್ನಾಗಿ ಮಾಡಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಡಾ. ಮಲ್ಲಿಕಾರ್ಜುನ ಹತ್ತಿ ಮಾತನಾಡಿ, ಆರ್ಥಿಕ ಸ್ವಾತಂತ್ರ‍್ಯವನ್ನು ಗುರಿಯಾಗಿಟ್ಟುಕೊಂಡು ಮಹಿಳೆಯರಿಗೆ ಸ್ವ–ಉದ್ಯೋಗಕ್ಕಾಗಿ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ನವರಾತ್ರಿ, ದಸರಾ ಹಬ್ಬದ ನಿಮಿತ್ತ ಗ್ರಾಮದಲ್ಲಿ ಕಳೆದ ಹತ್ತು ದಿನಗಳ ಕಾಲ ಸಡಗರ ಸಂಭ್ರಮ ಜರುಗಿತು, ವಿವಿಧ ಸಂಘಟನೆಗಳಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಭಾಗಗಳಲ್ಲಿಯೂ ಹಬ್ಬದ ವಾತಾವರಣ ನಿರ್ಮಾಣ ಮಾಡಿತ್ತು.ಗ್ರಾಮದ ಗ್ರಾಮದ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ದೇವಿ ಚಾಮುಂಡೇಶ್ವರಿಯ ವಿಗ್ರಹ ಪ್ರತಿಷ್ಠಾಪಿಸಿ ಪ್ರತಿದಿನ ಒಂದೊಂದು ಸ್ಥಳಗಳಂತೆ ಪ್ರತಿದಿನವೂ ಹುಗ್ಗಿ, ಸಜ್ಜಕ, ಹೋಳಿಗೆ, ಮಾದೇಲಿಯ ಮಹಾಪ್ರಸಾದವನ್ನು ಭಕ್ತರಿಗೆ ಬಡಿಸಲಾಯಿತು.ಮಲ್ಲಯ್ಯನ ಗುಡಿ ಗಜಾನನ ಕಮೀಟಿಯಿಂದ ಪ್ರತಿದಿನ ಸಾಯಂಕಾಲ ೬-೩೦ಘಂ.ಗೆ ಕೋಲಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಗ್ರಾಮದ ಯಂಗ್ ಸ್ಟಾರ್ ಸಮೀತಿಯಿಂದ ದ್ವಿತೀಯ ಬಾರಿಗೆ ಸಂಗೀತ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಸತತ ಮಳೆಯ ಕಾರಣ ಕಾರ್ಯಕ್ರಮ ಮುಂದೂಡಲಾಯಿತು. ಕೊನೆಯ ದಿನವಾದ ಗುರುವಾರ ಬನ್ನಿ ಬಂಗಾರವನ್ನು ಪರಸ್ಪರ ಹಂಚಿ “ನಾವು ನೀವು ಬಂಗಾರದಂತೆ ಇರೋಣು” ಎಂದು ಆಲಿಂಗಣ, ಹಿರಿಯರ ಪಾದ ಸ್ಪರ್ಶಿಸಿ ನಮಸ್ಖರಿಸುವ ಮೂಲಕ ಬಾಂಧವ್ಯ ಬೆಸೆಯಲಾಯಿತು.ಸ್ಥಳಿಯ ವಿರಕ್ತಮಠದ ಚನ್ನ ಬಸವೇಶ್ವರ ಸಭಾ ಮಂಟಪದಲ್ಲಿ ಶ್ರೀ ಪ್ರಭು ಮಹಾಸ್ವಾಮಿಗಳಿಗೆ ಗ್ರಾಮದ ಪ್ರಮುಖರು…

Read More