ಉದಯರಶ್ಮಿ ದಿನಪತ್ರಿಕೆ
ಇಂಡಿ: ತುಳಜಾಪುರದ ಅಂಬಾಭವಾನಿ ದೇವಸ್ಥಾನದಲ್ಲಿ ನಡೆಯುವ ಕೋಜಾಗಿರಿ ಹುಣ್ಣಿಮೆಯಲ್ಲಿ ಪಾಲ್ಗೊಳ್ಳಲು ಲಕ್ಷಾಂತರು ಭಕ್ತರು ಪಾದಯಾತ್ರೆ ಕೈಕೊಂಡಿದ್ದಾರೆ.
ದೇವರ ಹಿಪ್ಪರಗಿ, ತಾಂಬಾ, ಸಿಂದಗಿ, ಆಲಮೇಲ ಸೇರಿದಂತೆ ಇಂಡಿ ತಾಲೂಕಿನ ಸುಮಾರು ೨೦೦ ಕ್ಕೂ ಹೆಚ್ಚು ಗ್ರಾಮಗಳ ಅಂಬಾಭವಾನಿ ಭಕ್ತರು ಪಾದಯಾತ್ರೆಯ ಮೂಲಕ ಇಂಡಿಯ ಮಾರ್ಗವಾಗಿ ಹೋಗುತ್ತಿದ್ದಾರೆ.
ದಾರಿಯುದ್ದಕ್ಕು ಭಕ್ತಾದಿಗಳಿಗೆ ಉಚಿತ ಕುಡಿಯುವ ನೀರು ಚಹಾ ಮತ್ತು ಅಲ್ಪೋಪಹಾರ ವ್ಯವಸ್ಥೆ ಇದೆ.
ಇಂಡಿಯಲ್ಲಿಯೇ ೧೨ ಕಡೆ ಮತ್ತು ಇಂಡಿಯಿಂದ ಧೂಳಖೇಡ ವರೆಗೆ ಅಂದಾಜು ೧೦೦ ಕ್ಕೂ ಹೆಚ್ಚು ಕಡೆ ಪ್ರಸಾದ ವ್ಯವಸ್ಥೆ ಇದೆ. ಉಪ್ಪಿಟ್ಟು ಶಿರಾ, ಪುರಿ, ಅವಲಕ್ಕಿ, ಬೋಂಡಾ ಸೇರಿದಂತೆ ಹಲವಾರು ಬಗೆಯ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ. ಅಲ್ಲಲ್ಲಿ ತಂಪಾದ ಪಾನೀಯ ಮತ್ತು ಉಚಿತ ಔಷದೋಪಚಾರ ವ್ಯವಸ್ಥೆ ಇದೆ.
ಪ್ರಯಾಣಿಕರಿಗೆ ತೊಂದರೆಯಾಗದಂತೆ ವಿಜಯಪುರ ಸೋಲಾಪುರ ರಸ್ತೆ ಒಂದು ಬದಿಯನ್ನು ಕೇವಲ ಭಕ್ತಾಧಿಗಳಿಗೆ ಪಾದಚಾರಿಗಳಿಗೆ ವ್ಯವಸ್ಥೆ ಮಾಡಿದ್ದಾರೆ.
ಈ ಮಧ್ಯೆ ಪೋಲಿಸ ವಾಹನಗಳು ಸತತ ಓಡಾಟವಿದ್ದು ಆರೋಗ್ಯ ಇಲಾಖೆಯಿಂದ ಅಂಬುಲೆನ್ಸ ವ್ಯವಸ್ಥೆ ಕೂಡ ಇದೆ.
ಬಹುತೇಕ ಮುಂದಿನ ಎರಡು ದಿನಗಳ ವರೆಗೂ ಇಲ್ಲಿಂದ ಭಕ್ತಾದಿಗಳು ಹೋಗಲಿದ್ದು ಎರಡು ದಿನ ಅಲ್ಲಿಲ್ಲಿ ಸರಕಾರಿ ಶಾಲೆ ಮತ್ತಿತರ ಕಡೆ ಮತ್ತು ಭಕ್ತರು ಸ್ನಾನದ ವ್ಯವಸ್ಥೆ ಮಾಡಿರುತ್ತಾರೆ.

