ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ನವರಾತ್ರಿ, ದಸರಾ ಹಬ್ಬದ ನಿಮಿತ್ತ ಗ್ರಾಮದಲ್ಲಿ ಕಳೆದ ಹತ್ತು ದಿನಗಳ ಕಾಲ ಸಡಗರ ಸಂಭ್ರಮ ಜರುಗಿತು, ವಿವಿಧ ಸಂಘಟನೆಗಳಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಭಾಗಗಳಲ್ಲಿಯೂ ಹಬ್ಬದ ವಾತಾವರಣ ನಿರ್ಮಾಣ ಮಾಡಿತ್ತು.
ಗ್ರಾಮದ ಗ್ರಾಮದ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ದೇವಿ ಚಾಮುಂಡೇಶ್ವರಿಯ ವಿಗ್ರಹ ಪ್ರತಿಷ್ಠಾಪಿಸಿ ಪ್ರತಿದಿನ ಒಂದೊಂದು ಸ್ಥಳಗಳಂತೆ ಪ್ರತಿದಿನವೂ ಹುಗ್ಗಿ, ಸಜ್ಜಕ, ಹೋಳಿಗೆ, ಮಾದೇಲಿಯ ಮಹಾಪ್ರಸಾದವನ್ನು ಭಕ್ತರಿಗೆ ಬಡಿಸಲಾಯಿತು.
ಮಲ್ಲಯ್ಯನ ಗುಡಿ ಗಜಾನನ ಕಮೀಟಿಯಿಂದ ಪ್ರತಿದಿನ ಸಾಯಂಕಾಲ ೬-೩೦ಘಂ.ಗೆ ಕೋಲಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಯಂಗ್ ಸ್ಟಾರ್ ಸಮೀತಿಯಿಂದ ದ್ವಿತೀಯ ಬಾರಿಗೆ ಸಂಗೀತ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಸತತ ಮಳೆಯ ಕಾರಣ ಕಾರ್ಯಕ್ರಮ ಮುಂದೂಡಲಾಯಿತು. ಕೊನೆಯ ದಿನವಾದ ಗುರುವಾರ ಬನ್ನಿ ಬಂಗಾರವನ್ನು ಪರಸ್ಪರ ಹಂಚಿ “ನಾವು ನೀವು ಬಂಗಾರದಂತೆ ಇರೋಣು” ಎಂದು ಆಲಿಂಗಣ, ಹಿರಿಯರ ಪಾದ ಸ್ಪರ್ಶಿಸಿ ನಮಸ್ಖರಿಸುವ ಮೂಲಕ ಬಾಂಧವ್ಯ ಬೆಸೆಯಲಾಯಿತು.
ಸ್ಥಳಿಯ ವಿರಕ್ತಮಠದ ಚನ್ನ ಬಸವೇಶ್ವರ ಸಭಾ ಮಂಟಪದಲ್ಲಿ ಶ್ರೀ ಪ್ರಭು ಮಹಾಸ್ವಾಮಿಗಳಿಗೆ ಗ್ರಾಮದ ಪ್ರಮುಖರು ಸೇರಿದಂತೆ ಸಾವಿರಾರು ಜನ ಭಕ್ತಾಧಿಗಳು ಬನ್ನಿ ಬಂಗಾರ ವಿನಿಮಯ ಮಾಡಿ ಶ್ರೀಗಳ ಆಶೀರ್ವಾದ ಪಡೆದರು.

