Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಮಹಾತ್ಮ ಗಾಂಧೀಜಿಯವರು ಜೀವನವಡೀ ದೇಶದ ಏಳಿಗೆಗಾಗಿ ದುಡಿದ ಮಹಾನ್ ತತ್ವಜ್ಞಾನಿಯಾಗಿದ್ದಾರೆ ಯುವ ಜನಾಂಗ ಗಾಂಧೀಜಿಯವರ ವಿಚಾರಗಳು ಪಾಲನೆ ಮಾಡಬೇಕು ಎಂದು ಭಾರತ ಚುನಾವಣಾ ಆಯೋಗದ ರಾಷ್ಟ್ರೀಯ ಮಟ್ಟದ ಚುನಾವಣಾ ತರಬೇತಿದಾರ ಡಾ.ಶಶಿಶೇಖರ ರೆಡ್ಡಿ ಕರೆ ನೀಡಿದರು.ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ನಡೆದ ಗಾಂಧಿ ಭಾರತ ನಾವು ಮನುಜರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡುತ್ತಾ ದೇಶದ ಕುರಿತಾಗಿ ಗಾಂಧೀಜಿಯವರಲ್ಲಿರುವ ಅಪಾರ ಕಾಳಜಿಯಿಂದಾಗಿ ಭಾರತವನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಗಾಂಧೀಜಿಯವರ ಅಲೋಚನೆಗಳು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.ಪ್ರಾಚಾರ್ಯ ಡಾ.ಸತೋಷ ಹುಗ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯೇದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರುವುದರಿಂದ ಆತ್ಮಸ್ಥರ್ಯ ಹೆಚ್ಚಿಸುತ್ತದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದರು.ಸಿಬ್ಬಂದಿ ಕಾರ್ಯದರ್ಶಿ ಡಾ.ಸೂರ್ಯಕಾಂತ ಉಮ್ಮಾಪುರೆ ಮಾತನಾಡಿ ಗಾಂಧಿ ಭಾರತ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ನಾಗರಾಜ ಅಮರಗೊಂಡ ವಿಜಯಪುರ ಜಿಲ್ಲಾ ಸಹಕಾರಿ ಯೂನಿಯನ್ ನಿಯಮಿತ ( ಒಕ್ಕೂಟದ) ಆಡಳಿತ ಮಂಡಳಿ ನಿರ್ದೇಶಕರಾಗಿ ಅವಿರೋಧ ಆಯ್ಕೆ. ಆಲಮೇಲ ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿರ್ದೇಶಕ ನಾಗರಾಜ ಅಮರಗೊಂಡ ಅವರು ವಿಜಯಪುರ ಜಿಲ್ಲಾ ಸಹಕಾರಿ ಯೂನಿಯನ್ ನಿಯಮಿತ( ಒಕ್ಕೂಟದ) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಯೂನಿಯನ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎನ್.ಪಾರಗೊಂಡ ತಿಳಿಸಿದರು. ಆಲಮೇಲ ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಪ್ರಾರಂಭಗೊಂಡು118 ವರ್ಷಗಳ ಹಳೆಯ ಸಂಘವಿದು. ಇದರ ನಂತರ ಪ್ರಾರಂಭಗೊಂಡ 88 ವರ್ಷದ ವಿಜಯಪುರ ಜಿಲ್ಲಾ ಸಹಕಾರಿ ಯೂನಿಯನ್ ನಿಯಮಿತ (ಒಕ್ಕೂಟದ) ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಆಲಮೇಲದ ನಾಗರಾಜ ಅಮರಗೊಂಡ ಮೊದಲಿಗರು.
ಇಂದು (ಅಕ್ಟೋಬರ-೭, ಮಂಗಳವಾರ) ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಮಹರ್ಷಿ ವಾಲ್ಮೀಕಿ ಅವರು ಹೃದಯ ಶುದ್ಧತೆಯೇ ನಿಜವಾದ ಸೌಂದರ್ಯ ಎಂದು ಹೇಳಿದ್ದಾರೆ. ವ್ಯಕ್ತಿಯು ಬಾಹಿರಂಗವಾಗಿ ಶುದ್ದಾವಾದರೆ ಸಾಲದು. ಆತನು ಅಂತರಂಗ ಮತ್ತು ಭಾವದಲ್ಲಿಯೂ ಹೃದಯವಂತಿಕೆಯಿದ್ದರೆ ಅದೇ ಅವನಿಗೆ ನಿಜವಾದ ಸೌಂದರ್ಯವೆಂದು ಹೇಳಿದ್ದಾರೆ. ಸಂಸ್ಕೃತದಲ್ಲಿ ರಾಮಯಣ ಮಹಾಕಾವ್ಯವನ್ನು ರಚಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅದಕ್ಕಾಗಿ ಅವರನ್ನು ಆದಿಕವಿ ಎಂತಲೂ ಕರೆಯುತ್ತಾರೆ. ಮಹರ್ಷಿ ವಾಲ್ಮೀಕಿಯವರು ಪವಿತ್ರ ಮತ್ತು ಸಾಹಿತ್ಯ ಮಾಲೆಯಲ್ಲಿ ಸರ್ವಶ್ರೇಷ್ಠ ಸ್ಥಾನ ಪಡೆದ ಮಹಾಕಾವ್ಯ ರಾಮಾಯಣ ವನ್ನು ಸಂಸ್ಕೃತದಲ್ಲಿ ರಚಿಸುವದರ ಮೂಲಕ ನ್ಯಾಯ-ನೀತಿ ಮತ್ತು ಧರ್ಮ ನಿರಪೇಕ್ಷತೆಗಳ ಬಗ್ಗೆ ಹಾಗೂ ಯುಗ ಯುಗಗಳ ಇತಿಹಾಸ ಮತ್ತು ರಾಮರಾಜ್ಯವನ್ನು ಸುಂದರವಾಗಿ ವರ್ಣಿಸಿದ್ದಾರೆ. ವಾಲ್ಮೀಕಿ ಮಹಕಾವ್ಯವು ಮಾನವ ಕುಲಕ್ಕೆ ಆದರ್ಶಗಳನ್ನು ನೀಡುವ ಮೂಲಕ ಜ್ಞಾನದ ಕೊಡುಗೆಯನ್ನು ನೀಡಿದೆ. ಈ ವರ್ಷ ಅಕ್ಟೋಬರ ೭ ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ವಾಲ್ಮೀಕಿ ಜಯಂತಿ…
ಜಾತಿ ಸಮೀಕ್ಷೆ ಗಡುವು ವಿಸ್ತರಿಸುವ ಬಗ್ಗೆ ಮಂಗಳವಾರ ಸಂಜೆಯೊಳಗೆ ನಿರ್ಧಾರ | ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಪ್ಪಳ: ತಮ್ಮ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(“ಜಾತಿ ಗಣತಿ” ಎಂದೇ ವ್ಯಾಪಕವಾಗಿ ಕರೆಯಲಾಗುತ್ತಿದೆ)ಯನ್ನು ಬಲವಾಗಿ ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಮಾನತೆ, ಸಮ ಸಮಾಜ ಮತ್ತು ಬದಲಾವಣೆ ಬೇಡ ಎನ್ನುವವರು ಅದನ್ನು ವಿರೋಧಿಸುತ್ತಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ.ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಾತಿ ಸಮೀಕ್ಷೆಯ ಗಡುವು ವಿಸ್ತರಿಸುವ ಬಗ್ಗೆ ಮಂಗಳವಾರ ಸಂಜೆಯೊಳಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.ಕೊಪ್ಪಳ ಜಿಲ್ಲೆಯಲ್ಲಿ ಶೇ. 97ರಷ್ಟು ಸಮೀಕ್ಷೆ ಮುಗಿದಿದೆ. ಸಮೀಕ್ಷೆ ನಾಳೆ ಮುಗಿಯಬಹುದೆಂಬ ವಿಶ್ವಾಸ ಇದೆ. ನಾಳೆ ಸಾಯಂಕಾಲದವರೆಗೂ ಸಮಯವಿದೆ. ಇವತ್ತು ಮತ್ತು ನಾಳೆ ಎರಡು ದಿನಗಳಲ್ಲಿ ಸಮೀಕ್ಷೆ ಮುಗಿಯಬಹುದು” ಎಂದು ಸಿಎಂ ಹೇಳಿದರು.ಜಾತಿ ಗಣತಿ ಮೇಲ್ವರ್ಗದವರನ್ನು ನಿಗ್ರಹಿಸುವ ಗುರಿ ಹೊಂದಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, “ಯಾರನ್ನೂ ನಿಗ್ರಹಿಸುವ ಪ್ರಶ್ನೆಯೇ ಇಲ್ಲ. ಸಮಾನತೆ ವಿರೋಧಿಸುವವರು ಇಂತಹ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಮಾಜದಲ್ಲಿ ಬದಲಾವಣೆಯನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಹುಡ್ಕೋ ಕಾಲನಿ ಹತ್ತಿರ ಹಾಗೂ ರಾಘವೇಂದ್ರ ಕಾಲೋನಿ ಹತ್ತಿರದಲ್ಲಿ ಗೃಹ ಬಳಕೆ ಸಿಲಿಂಡರ್‌ಗಳನ್ನು ಬಳಸಿ ಅಕ್ರಮವಾಗಿ ಆಟೋಗಳಿಗೆ ತುಂಬಿಸುತ್ತಿದ್ದ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ನಾಲ್ಕು ಗೃಹ ಬಳಕೆ ಸಿಲಿಂಡರ್ ಹಾಗೂ ತೂಕ ಮಾಡುವ ಯಂತ್ರವನ್ನು ವಶಕ್ಕೆ ಪಡೆದು, ಜಲನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೂಕದ್ದಮೆ ದಾಖಲಿಸಿದ್ದಾರೆ.ದಾಳಿಯಲ್ಲಿ ಆಹಾರ ಇಲಾಖೆ ನಿರೀಕ್ಷಕರಾದ ವಿಜಯಕುಮಾರ ಗುಮಶೆಟ್ಟಿ, ಜಲನಗರ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್ ಮಹೇಶ ಸಂಖ, ಪೋಲಿಸ ಸಿಬ್ಬಂದಿಗಳಾದ ವಿ.ಎಂ.ಪವಾರ, ಪಿ.ಆರ್.ರಾಠೋಡ, ಎಸ್.ವಾಯ್.ನಾಟಿಕಾರ, ಎಚ್.ಎನ್.ಪೂಜಾರಿ, ಎನ್.ಬಿ.ಚವ್ಹಾಣ, ಸಚೀನಕುಮಾರ ನಂದೇಶ ಹಾಗೂ ಎಂ.ಆರ್.ಸಿಂಧೆ ಅವರು ಭಾಗವಹಿಸಿದ್ದರು ಎಂದು ಆಹಾರ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೧೦೦ ಎಂಬಿಬಿಎಸ್ ಸೇರಿದಂತೆ ೧೮೨ ಮೆಡಿಕಲ್ ಸೀಟುಗಳನ್ನು ಪಡೆದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫ನೇ ಸಾಲಿನ ವೈದ್ಯಕೀಯ ಸೀಟು ಹಂಚಿಕೆ ಪ್ರಕ್ರೀಯೆ ಪೂರ್ಣಗೊಂಡಿದ್ದು ನೀರಿಕ್ಷೆಯಂತೆ ವಿಜಯಪುರದ ಪ್ರತಿಷ್ಠಿತ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯೂ ಕಳೆದ ಬಾರಿಗಿಂತಲೂ ಹೆಚ್ಚಿನ ಸೀಟುಗಳನ್ನು ಪಡೆಯುವ ಮೂಲಕ ಸಾಧನೆಯ ಹಾದಿಯಲ್ಲಿನ ತನ್ನ ಹೆಜ್ಜೆ ಗುರುತುಗಳನ್ನು ಹಾಗೆ ಉಳಿಸಿಕೊಂಡು ಸಾಗಿದೆ.ಕಳೆದ ಬಾರಿಗಿಂತ ಈ ಬಾರಿಯ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕಠೀಣವಾಗಿತ್ತು ಎಂಬುದು ವಿದ್ಯಾರ್ಥಿಗಳ ಅಭಿಮತವಾಗಿತ್ತು. ಅಂತಹ ಕಷ್ಟಕರವಾಗಿರುವ ಪರೀಕ್ಷೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಎಕ್ಸಲಂಟ್ ವಿದ್ಯಾರ್ಥಿಗಳು ೧೦೦ ಎಂಬಿಬಿಎಸ್ ಸೇರಿದಂತೆ ಒಟ್ಟು ೧೮೨ ಸೀಟುಗಳನ್ನು ಪಡೆದುಕೊಳ್ಳುವ ಮೂಲಕ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಸರ್ಕಾರಿ ಕೋಟಾದಡಿಯಲ್ಲಿ ೧೦೦ ಎಂಬಿಬಿಎಸ್ ಸೀಟುಗಳನ್ನು ಪಡೆದರೆ ೧೦ ಬಿಡಿಎಸ್ ಹಾಗೂ ೭೨ ಬಿಎಎಂಎಸ್ ಹಾಗೂ ಬಿಹೆಚ್‌ಎಂಎಸ್ ಸೀಟುಗಳನ್ನು ಪಡೆಯುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ವೈದ್ಯರಾಗಬೇಕೆನ್ನುವ ತಮ್ಮ ಕನಸನ್ನು ಈಡೇರಿಸಿಕೊಳ್ಳುವುದರೊಂದಿಗೆ ಮಹಾವಿದ್ಯಾಲಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.ಈ ಕುರಿತು ಮಾಹಿತಿಯನ್ನು ಹಂಚಿಕೊಂಡು…
ಶಾಸಕ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ವಿಷಾದ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರವಾಹ ಪರಿಸ್ಥಿತಿಯಿಂದಾಗಿ ಈ ಭಾಗದ ಜೀವನೋಪಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಪ್ರವಾಹ ಬಂದಾಗ ಈ ಬಗ್ಗೆ ಯೋಚನೆ ಮಾಡಿದರೆ ಸಾಲದು, ತುಂಗಭದ್ರಾ ನದಿಯ ನಿರ್ವಹಣೆಯನ್ನು ಆಂಧ್ರಪ್ರದೇಶ ಹಾಗೂ ಕರ್ನಾಟಕ ಜಂಟಿಯಾಗಿ ನಿರ್ವಹಣೆ ಮಾಡುತ್ತದೆ. ಭೀಮಾ, ಸೀನಾ ನದಿ ವಿಚಾರದಲ್ಲೂ ಕರ್ನಾಟಕ ಹಾಗೂ ಮಹಾರಾಷ್ಟ್ರ ಜಂಟಿ ನಿರ್ವಹಣೆ ಅಗತ್ಯ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಪ್ರತಿಪಾದಿಸಿದರು.ಪ್ರವಾಹ ಪರಿಸ್ಥಿತಿ ವಿಷಯವಾಗಿ ಕೈಗೊಳ್ಳಬೇಕಾದ ಬಹುಮುಖ್ಯ ಅಂಶಗಳನ್ನು ಈ ಹಿಂದಿನಿಂದಲೂ ಹೇಳುತ್ತಲೇ ಬಂದಿರುವ ಇಂಡಿ ಶಾಸಕರು ಮತ್ತೊಮ್ಮೆ ಈ ವಿಷಯವನ್ನು ಪ್ರಬಲವಾಗಿ ಸರ್ಕಾರದ ಮುಂದೆ ಇರಿಸಿದರು.ಜನರ ವಿಷಯ ಬಂದಾಗ ಆಡಳಿತ ಪಕ್ಷದಲ್ಲಿಯೇ ಇದ್ದರೂ ಅದನ್ನು ಸಾತ್ವಿಕವಾಗಿ ಟೀಕಿಸುವ ಯಶವಂತರಾಯಗೌಡ ಪಾಟೀಲ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದ ಜೊತೆ ಜಂಟಿ ನಿರ್ವಹಣೆಗೆ ಅಗತ್ಯತೆಯನ್ನು ಒತ್ತಾಯಿಸಿದರು.ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೃಷ್ಣಾ, ಕಾವೇರಿ ಜತೆಗೆ ಉಪ ನದಿಗಳ ಬಗ್ಗೆ ಗಮನ ಹರಿಸಬೇಕು. ಮಹಾರಾಷ್ಟ್ರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕರಾಗಿ ಆವಿರೋಧ ಆಯ್ಕೆಯಾಗಿರುವ ಬಸವರಾಜ ಮಹಾದೇವಪ್ಪ ಕುಂಬಾರ ಇವರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಸಚಿವ ಶಿವಾನಂದ ಪಾಟೀಲ ಅವರನ್ನು ನಗರದ ತೋಟದ ಮನೆಯಲ್ಲಿ ಸನ್ಮಾನಿಸಿದರು.ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಬಿ.ಎಸ್.ಪಾಟೀಲ ಯಾಳಗಿ, ತಾಳಿಕೋಟೆ ಪಿ.ಕೆ.ಪಿ.ಎಸ್. ಅಧ್ಯಕ್ಷರಾದ ಡಿ.ವಿ.ಪಾಟೀಲ, ಎಸ್.ಬಿ.ಇಲಕಲ್, ಗೋವಿಂದಸಿಂಗ್ ಮೂಲಿಮನಿ, ಬಸನಗೌಡ ಮಾಲೀಪಾಟೀಲ, ಯಮನಪ್ಪ ಬರದೇನಾಳ, ಎಂ.ಬಿ.ಕಟ್ಟಿಮನಿ, ಸಂಗನಗೌಡ ಅಸ್ಕಿ, ರಘುವೀರಸಿಂಗ್ ಹಜೇರಿ, ಶಂಕರಗೌಡ ಪಾಟೀಲ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಗಣತಿ ಕಾರ್ಯದಲ್ಲಿ ನಿರತ ಶಿಕ್ಷಕನಿಗೆ ಜೋಡಿ ನಾಯಿಗಳು ಕಡಿದು ಆಸ್ಪತ್ರೆ ಸೇರುವಂತಾಗಿದೆ.ಶನಿವಾರ ಎಂದಿನಂತೆ ಸಾಯಂಕಾಲದ ಸಮಯದಲ್ಲಿ ದೇವರನಿಂಬರಗಿ ಗ್ರಾಮದ ಮುಲ್ಲಾ ವಸ್ತಿಗೆ ಗಣತಿ ಮಾಡಲು ಹೋಗುವ ಸಂದರ್ಭದಲ್ಲಿ ವಸತಿಯಲ್ಲಿ ಇರುವ ಎರಡು ನಾಯಿಗಳು ಧಿಡಿರ ದಾಳಿ ನಡೆಸಿವೆ ಎಂದು ತಿಳಿದುಬಂದಿದೆ.ದಾಳಿಯಲ್ಲಿ ಗಾಯಗೊಂಡ ಶಿಕ್ಷಕ ಶ್ರೀಶೈಲ್ ಮಾಳಿ ಅವರು ದೇವರ ನಿಂಬರಗಿಯ ಎಲ್.ಪಿ.ಎಸ್.ಮಣಿಯಾರ ವಸ್ತಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಹೊಲದಲ್ಲಿ ಮನೆ ಮಾಡಿಕೊಂಡು ವಾಸಿಸುವ ಜನರ(ವಸ್ತಿಯಲ್ಲಿರುವ) ಶಿಕ್ಷಕರು ಗಣತಿ ಕಾರ್ಯ ಮಾಡುವದರಿಂದ ಇಂಥಹ ಪರಿಸ್ಥಿತಿ ಬರುವ ಸಾಧ್ಯತೆ ಹೆಚ್ಚು ಆದ್ದರಿಂದ ಚಡಚಣ ಶಿಕ್ಷಣ ಇಲಾಖೆಯ ಬಿಇಓ,ಗ್ರಾಮ ಪಂಚಾಯತಿಯ ಪಿಡಿಓ, ಪ.ಪಂಚಾಯತಿಯ ಸಿಓ ಅವರು ಇನ್ನು ಮುಂದಾದರು ಎಚ್ಚತ್ತುಕೊಂಡು ಸಾರ್ವಜನಿಕರಿಗೆ ಡಂಗುರ ಸಾರಿ ಸಾಕು ಪ್ರಾಣಿ ನಾಯಿಗಳನ್ನು ಮುಂಜಾನೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ…
ಉಮರಜ ಶಿಥಿಲ ಶಾಲೆಗೆ ಅಪರ ಆಯುಕ್ತ ಡಾ.ಉಳ್ಳಾಗಡ್ಡಿ ಭೇಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಶೀಲನೆ | ಕೂಡಲೆ ಕ್ರಮಕ್ಕೆ ಚಡಚಣ ಬಿಇಓ ಅವರಿಗೆ ಆದೇಶ ಉದಯರಶ್ಮಿ ದಿನಪತ್ರಿಕೆ ಚಡಚಣ: ಅ.03 ಶುಕ್ರವಾರ ಚಡಚಣ ತಾಲೂಕಿನ ಕರ್ನಾಟಕ ಮಹಾರಾಷ್ಟ್ರ ಗಡಿಭಾಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಮರಜ ಶಾಲೆಗೆ ಬೆಳಗಾವಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಅವರು ಸದರಿ ಶಾಲೆಯ ಕುರಿತು ಗ್ರಾಮಸ್ಥರ ದೂರು ಹಾಗೂ ನಾಗಠಾಣ ಶಾಸಕರಾದ ವಿಠ್ಠಲ ಕಟಕಧೋಂಡ ಅವರು ಗ್ರಾಮಕ್ಕೆ ಸೆ.24 ರಂದು ಉಮರಜ ಗ್ರಾಮಕ್ಕೆ ಭೇಟಿಕೊಟ್ಟು ಮಳೆಯಿಂದಾಗಿ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು ತಕ್ಷಣ ನಾಲ್ಕು ಹೊಸ ಕೊಣೆಗಳನ್ನು ನಿರ್ಮಿಸಿಕೊಡುವದಾಗಿ ಭರವಸೆ ಕೊಟ್ಟ ವರದಿ ’ಉದಯ ರಶ್ಮಿ’ ದಿನಪತ್ರಿಕೆಯಲ್ಲಿ ಸೆ.26 ರಂದು ಪ್ರಕಟವಾದ ಆಧಾರದ ಮೇಲೆ ಸಂದರ್ಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.ಈ ಕುರಿತು ’ಉದಯರಶ್ಮಿ’ ಪತ್ರಿಕೆಯಲ್ಲಿ ವಿವರವಾದ ವರದಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.ಈ ಸಂದರ್ಭದಲ್ಲಿ ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳ ಕುರಿತಾಗಿ…
