ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ನಾಗರಾಜ ಅಮರಗೊಂಡ ವಿಜಯಪುರ ಜಿಲ್ಲಾ ಸಹಕಾರಿ ಯೂನಿಯನ್ ನಿಯಮಿತ ( ಒಕ್ಕೂಟದ) ಆಡಳಿತ ಮಂಡಳಿ ನಿರ್ದೇಶಕರಾಗಿ ಅವಿರೋಧ ಆಯ್ಕೆ. ಆಲಮೇಲ ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿರ್ದೇಶಕ ನಾಗರಾಜ ಅಮರಗೊಂಡ ಅವರು ವಿಜಯಪುರ ಜಿಲ್ಲಾ ಸಹಕಾರಿ ಯೂನಿಯನ್ ನಿಯಮಿತ( ಒಕ್ಕೂಟದ) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಯೂನಿಯನ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎನ್.ಪಾರಗೊಂಡ ತಿಳಿಸಿದರು. ಆಲಮೇಲ ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಪ್ರಾರಂಭಗೊಂಡು118 ವರ್ಷಗಳ ಹಳೆಯ ಸಂಘವಿದು. ಇದರ ನಂತರ ಪ್ರಾರಂಭಗೊಂಡ 88 ವರ್ಷದ ವಿಜಯಪುರ ಜಿಲ್ಲಾ ಸಹಕಾರಿ ಯೂನಿಯನ್ ನಿಯಮಿತ (ಒಕ್ಕೂಟದ) ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಆಲಮೇಲದ ನಾಗರಾಜ ಅಮರಗೊಂಡ ಮೊದಲಿಗರು.

