ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಾಂಧಿ ಭಾರತ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಮಹಾತ್ಮ ಗಾಂಧೀಜಿಯವರು ಜೀವನವಡೀ ದೇಶದ ಏಳಿಗೆಗಾಗಿ ದುಡಿದ ಮಹಾನ್ ತತ್ವಜ್ಞಾನಿಯಾಗಿದ್ದಾರೆ ಯುವ ಜನಾಂಗ ಗಾಂಧೀಜಿಯವರ ವಿಚಾರಗಳು ಪಾಲನೆ ಮಾಡಬೇಕು ಎಂದು ಭಾರತ ಚುನಾವಣಾ ಆಯೋಗದ ರಾಷ್ಟ್ರೀಯ ಮಟ್ಟದ ಚುನಾವಣಾ ತರಬೇತಿದಾರ ಡಾ.ಶಶಿಶೇಖರ ರೆಡ್ಡಿ ಕರೆ ನೀಡಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ನಡೆದ ಗಾಂಧಿ ಭಾರತ ನಾವು ಮನುಜರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡುತ್ತಾ ದೇಶದ ಕುರಿತಾಗಿ ಗಾಂಧೀಜಿಯವರಲ್ಲಿರುವ ಅಪಾರ ಕಾಳಜಿಯಿಂದಾಗಿ ಭಾರತವನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಗಾಂಧೀಜಿಯವರ ಅಲೋಚನೆಗಳು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ.ಸತೋಷ ಹುಗ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯೇದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರುವುದರಿಂದ ಆತ್ಮಸ್ಥರ್ಯ ಹೆಚ್ಚಿಸುತ್ತದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದರು.
ಸಿಬ್ಬಂದಿ ಕಾರ್ಯದರ್ಶಿ ಡಾ.ಸೂರ್ಯಕಾಂತ ಉಮ್ಮಾಪುರೆ ಮಾತನಾಡಿ ಗಾಂಧಿ ಭಾರತ ಕಾರ್ಯಕ್ರಮದಡಿ ಕೆಲ ದಿನಗಳ ಹಿಂದೆ ಎಲ್ಲ ವಿಭಾಗಗಳ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ವಿದ್ಯಾರ್ಥಿಳಿಗೆ ಇಂದು ಬಹುಮಾನ ವಿತರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಹಿನ್ನಲೆ ವಿದ್ಯಾರ್ಥಿಗಳಿಗೆ ಕೆಲ ದಿನಗಳ ಹಿಂದೆ ಕಾಲೇಜಿನಲ್ಲಿ ಆಯೋಜಿಸಿರುವ ಪ್ರಬಂಧ, ರಂಗೋಲಿ, ಪೇಂಟಿಂಗ್, ದೇಶಭಕ್ತಿ ಗೀತೆ, ರಸಪ್ರಶ್ನೆ, ಭಾಷಣ, ನಾಟಕ, ಏಕ ಪಾತ್ರಾಭಿನಯ, ಮೂಕಾಭಿನಯ ಸೇರಿ ವಿವಿಧ ಸ್ಪರ್ಧೆಗಳು ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಪ್ರಾಧ್ಯಾಪಕಿ ಎಂ.ಎಸ್ ರಾಜೇಶ್ವರಿ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ.ಶಾಂತಲಾ, ಭಾರತಿ ಭೂಸಾರೆ, ಡಾ.ವಿನಾಯಕ ಜಿ.ಕೆ, ಡಾ. ಮಹ್ಮದ್ ಯೂನುಷ್, ಡಾ.ದತ್ತಾತ್ರೇಯ ಸಿ.ಹೆಚ್, ಹೀರೂ ರಾಠೋಡ, ಡಾ.ರಾಘವೇಂದ್ರ, ಪ್ರವೀಣ, ವೈಜನಾಥ ಭಾವಿ, ಸುರೇಶ ಮುಗಳಿ, ಎಸ್.ಎಸ್ ತಾವರಖೇಡ, ಮಂಜುನಾಥ, ಡಾ.ಸುರೇಖಾ ಕರೂಟಿ, ಮಮತಾ ಪಾಟೀಲ ಸೇರಿದಂತೆ ಪಿಜಿ, ಯುಜಿ ವಿದ್ಯಾರ್ಥಿಗಳು ಇದ್ದರು.

