ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕರಾಗಿ ಆವಿರೋಧ ಆಯ್ಕೆಯಾಗಿರುವ ಬಸವರಾಜ ಮಹಾದೇವಪ್ಪ ಕುಂಬಾರ ಇವರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಸಚಿವ ಶಿವಾನಂದ ಪಾಟೀಲ ಅವರನ್ನು ನಗರದ ತೋಟದ ಮನೆಯಲ್ಲಿ ಸನ್ಮಾನಿಸಿದರು.
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಬಿ.ಎಸ್.ಪಾಟೀಲ ಯಾಳಗಿ, ತಾಳಿಕೋಟೆ ಪಿ.ಕೆ.ಪಿ.ಎಸ್. ಅಧ್ಯಕ್ಷರಾದ ಡಿ.ವಿ.ಪಾಟೀಲ, ಎಸ್.ಬಿ.ಇಲಕಲ್, ಗೋವಿಂದಸಿಂಗ್ ಮೂಲಿಮನಿ, ಬಸನಗೌಡ ಮಾಲೀಪಾಟೀಲ, ಯಮನಪ್ಪ ಬರದೇನಾಳ, ಎಂ.ಬಿ.ಕಟ್ಟಿಮನಿ, ಸಂಗನಗೌಡ ಅಸ್ಕಿ, ರಘುವೀರಸಿಂಗ್ ಹಜೇರಿ, ಶಂಕರಗೌಡ ಪಾಟೀಲ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

