೧೦೦ ಎಂಬಿಬಿಎಸ್ ಸೇರಿದಂತೆ ೧೮೨ ಮೆಡಿಕಲ್ ಸೀಟುಗಳನ್ನು ಪಡೆದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೫ನೇ ಸಾಲಿನ ವೈದ್ಯಕೀಯ ಸೀಟು ಹಂಚಿಕೆ ಪ್ರಕ್ರೀಯೆ ಪೂರ್ಣಗೊಂಡಿದ್ದು ನೀರಿಕ್ಷೆಯಂತೆ ವಿಜಯಪುರದ ಪ್ರತಿಷ್ಠಿತ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯೂ ಕಳೆದ ಬಾರಿಗಿಂತಲೂ ಹೆಚ್ಚಿನ ಸೀಟುಗಳನ್ನು ಪಡೆಯುವ ಮೂಲಕ ಸಾಧನೆಯ ಹಾದಿಯಲ್ಲಿನ ತನ್ನ ಹೆಜ್ಜೆ ಗುರುತುಗಳನ್ನು ಹಾಗೆ ಉಳಿಸಿಕೊಂಡು ಸಾಗಿದೆ.
ಕಳೆದ ಬಾರಿಗಿಂತ ಈ ಬಾರಿಯ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕಠೀಣವಾಗಿತ್ತು ಎಂಬುದು ವಿದ್ಯಾರ್ಥಿಗಳ ಅಭಿಮತವಾಗಿತ್ತು. ಅಂತಹ ಕಷ್ಟಕರವಾಗಿರುವ ಪರೀಕ್ಷೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಎಕ್ಸಲಂಟ್ ವಿದ್ಯಾರ್ಥಿಗಳು ೧೦೦ ಎಂಬಿಬಿಎಸ್ ಸೇರಿದಂತೆ ಒಟ್ಟು ೧೮೨ ಸೀಟುಗಳನ್ನು ಪಡೆದುಕೊಳ್ಳುವ ಮೂಲಕ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸರ್ಕಾರಿ ಕೋಟಾದಡಿಯಲ್ಲಿ ೧೦೦ ಎಂಬಿಬಿಎಸ್ ಸೀಟುಗಳನ್ನು ಪಡೆದರೆ ೧೦ ಬಿಡಿಎಸ್ ಹಾಗೂ ೭೨ ಬಿಎಎಂಎಸ್ ಹಾಗೂ ಬಿಹೆಚ್‌ಎಂಎಸ್ ಸೀಟುಗಳನ್ನು ಪಡೆಯುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ವೈದ್ಯರಾಗಬೇಕೆನ್ನುವ ತಮ್ಮ ಕನಸನ್ನು ಈಡೇರಿಸಿಕೊಳ್ಳುವುದರೊಂದಿಗೆ ಮಹಾವಿದ್ಯಾಲಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ಈ ಕುರಿತು ಮಾಹಿತಿಯನ್ನು ಹಂಚಿಕೊಂಡು ಹರ್ಷ ವ್ಯಕ್ತ ಪಡಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್‌ಮನ್ ಬಸವರಾಜ್ ಕೌಲಗಿ; ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯುತ್ತಮವಾದ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎನ್ನುವ ಉದ್ಧೇಶದಿಂದ ಪ್ರಾರಂಭಗೊಂಡ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳು ತಾನಂದುಕೊಂಡ ಕಾರ್ಯದಲ್ಲಿ ಹಂತ ಹಂತವಾಗಿ ಯಶಸ್ಸು ಸಾಧಿಸುತ್ತ ಬೆಳೆಯುತ್ತಿದೆ. ಪ್ರತಿ ವರ್ಷವೂ ಕೂಡ ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ಪಡೆಯುವ ಮೂಲಕ ಜನರ ಮನೆ ಮಾತಾಗಿದೆ. ಹೆಸರಿಗೆ ತಕ್ಕಂತ ಸೇವೆಯನ್ನು ನೀಡುತ್ತಿರುವ ನಮ್ಮ ಸಂಸ್ಥೆಯು ಈ ಬಾರಿಯೂ ಪಾಲಕರು ಇಟ್ಟ ನಿರೀಕ್ಷೆಯನ್ನು ಹುಸಿಗೊಳಿಸದೆ ಉತ್ತಮ ಫಲಿತಾಂಶ ನೀಡಿ ೧೮೨ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ದೊರಕಿಸಿಕೊಟ್ಟಿದ್ದು ನಮ್ಮ ಸಂಸ್ಥೆಯ ಗುಣಮಟ್ಟಕ್ಕೆ ಸಾಕ್ಷ್ಯ ಒದಗಿಸುತ್ತದೆ ಎಂದರು.
ಯಾವುದೇ ಕಾರ್ಯವಾದರೂ ಸರಿ ಅಲ್ಲಿ ಸಾತ್ವಿಕವಾದ ವಿಚಾರವನ್ನಿಟ್ಟುಕೊಂಡು ಮಾಡಲು ಹೊರಟರೆ ಅದು ಫಲ ಕೊಟ್ಟೇ ಕೊಡುತ್ತದೆ. ಹಾಗೆಯೇ ಮಕ್ಕಳಲ್ಲಿ ನೈತಿಕ ಶಿಕ್ಷಣದ ಜೊತೆಯಲ್ಲಿ ಅವರ ಕನಸುಗಳಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದರೆ ಸಾಧನೆ ಎನ್ನುವುದು ಸವಾಲಾಗಿ ಪರಿಣಮಿಸದೆ ಸುಲಭದಲ್ಲಿ ಸಾಧಿಸಬಹುದು ಎನ್ನುವ ಭಾವನೆಯನ್ನುಂಟು ಮಾಡುತ್ತದೆ. ಆ ನಿಟ್ಟಿನಲ್ಲಿ ನಮ್ಮ ವಿದ್ಯಾಲಯದಲ್ಲಿ ಈ ವಿದ್ಯಾರ್ಥಿಗಳ ಅವಿರತ ಪರಿಶ್ರಮದ ಜೊತೆಯಲ್ಲಿ ಕಾಲೇಜಿನ ಬೋಧಕ ವರ್ಗದವರು ನಿರಂತರ ಶ್ರಮಿಸಿದ್ದರ ಪರಿಣಾಮ ಈ ಫಲಿತಾಂಶ ದೊರೆತಿದೆ. ಮುಂದೆ ಇವರು ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಿದಾಗ ನಾವಂದುಕೊಂಡ ಕಾರ್ಯ ಯಶಸ್ವಿಯಾದಂತಾಗುತ್ತದೆ ಎಂದು ಹೇಳಿದರು.
ಫಲಿತಾಂಶದ ಕುರಿತು ಹರ್ಷ ವ್ಯಕ್ತಪಡಿಸಿದ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಈ ಸಾಧನೆಯ ಶ್ರೇಯ ನಮ್ಮ ಆಡಳಿತ ಮಂಡಳಿಗೂ ಹಾಗೂ ಎಲ್ಲ ಬೋಧಕ ಬೋಧಕೇತರ ವರ್ಗಕ್ಕೆ ಸಲ್ಲಬೇಕು ಎಂದು ಹೇಳಿದರು.

