Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೬ನೇ ಸಾಲಿನಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಕರ್ನಾಟಕ ರಾಜ್ಯ ಕೌಶಲ್ಯ ಓಲಿಂಪಿಕ್ಸ್–೨೦೨೫ ಆರಂಭಿಸಿದೆ. ಕರ್ನಾಟಕ ರಾಜ್ಯ ಕೌಶಲ್ಯ ಓಲಿಂಪಿಕ್ಸ್–೨೦೨೫ ಅನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಿ, ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸುಧಾರಿತ ತರಬೇತಿ ನೀಡಿ, ವಿಭಾಗ ಮಟ್ಟ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿ, ಮುಂದಿನ ದಿನಗಳಲ್ಲಿ ಜರಗುವ India Skill competition Karnataka-2025&World Skills-೨೦೨೬ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ನೀಡಲಾಗುವುದು. ಈ ಕಾರ್ಯಕ್ರಮವು ಚೀನಾ ದೇಶದ ಶಾಂಘೈನಲ್ಲಿ ಆಯೋಜನೆಗೊಳ್ಳುವುದು.ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳಿಗೆ ೬೩ ವಿವಿಧ ಕೌಶಲ್ಯಗಳ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.ಆನ್‌ಲೈನ್ ನೋಂದಣಿಗಾಗಿ http://www.skillindiadigital.gov.in/homeಲಿಂಕ್‌ನ್ನು ಉಪಯೋಗಿಸಿ ಅಥವಾ ಇಲ್ಲಿರುವ ಕ್ಯೂಆರ್-ಕೋಡ್‌ನ್ನು ಸ್ಕ್ಯಾನ್ ಮಾಡಿ ದಿನಾಂಕ:೩೦-೦೯-೨೦೨೫ ರೊಳಗಾಗಿ ನೋಂದಾಯಿಸಿ ಕೊಳ್ಳಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲೆಯ ಬಾಗಲಕೋಟೆ ರಸ್ತೆ, ಮಹಾನಗರ ಪಾಲಿಕೆ ಹತ್ತಿರವಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ, ದೂ.ಸಂಖ್ಯೆ: ೦೮೩೫೨-೨೯೭೦೧೯,ಮೊ: ೯೭೪೧೭೫೩೫೬೫, ಮೊ: ೮೨೧೭೬೧೫೨೫೭ ಹಾಗೂ ಮೊ: ೯೬೨೦೨೦೨೧೦೨ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಮಟ್ಟದ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಬೆಳಗಾವಿ ವಿಭಾಗಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ.೨೦೨೫-೨೬ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವು ವಿವಿಧ ಜಿಲ್ಲೆಯಲ್ಲಿ ನಡೆಯಲಿದ್ದು, ಸೆಪ್ಟೆಂಬರ್ ೧೧ರ ಬೆಳಿಗ್ಗೆ ೯ಗಂಟೆಗೆ ಬಾಗಲಕೋಟೆಯ ನವನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ, ಗದಗದ ಕೆ.ಎಚ್.ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೮ಗಂಟೆಗೆ ಹಾಕಿ ಮತ್ತು ಪುಟ್ಬಾಲ್ ದೂರವಾಣಿ ಸಂಖ್ಯೆ: ೦೮೩೭೨-೨೩೮೩೪೫ ಸಂಪರ್ಕಿಸಬಹುದಾಗಿದೆ. ವಿಜಯಪುರ ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂದು ಬೆಳಿಗ್ಗೆ ೮ ಗಂಟೆಗೆ ಅಥ್ಲೆಟಿಕ್ ಮತ್ತು ಜುಡೋ ಕ್ರೀಡೆಗಳು ನಡೆಯುತ್ತಿದ್ದು, ೦೮೩೫೨-೨೫೧೦೮೫ಸಂಪರ್ಕ ಸಂಪರ್ಕಿಸಬಹುದು. ಸೆಪ್ಟೆಂಬರ್ ೧೧ ಮತ್ತು ೧೨ರಂದು ಬೆಳಗಾವಿ ಜಿಲ್ಲೆಯ ಹಾರೂಗೇರಿಯ ವಾಲ್ಮೀಕಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ (ಬಿ.ಪಿ.ಇಡಿ) ಮಹಾವಿದ್ಯಾಲಯದ ಆಟದ ಮೈದಾನದಲ್ಲಿ ಹ್ಯಾಂಡಬಾಲ್ ಕ್ರೀಡೆ ನಡೆಯಲಿದ್ದು, ಮಾರುತಿ ಪೂಜಾರಿ ಮೊ : ೮೭೨೨೪೬೩೧೭೫, ನಾಮದೇವ ಮೀರಜಕರ ಮೊ: ೯೩೭೯೭೪೪೭೩೧ ಮಾಹಿತಿಗೆ ಸಂಪರ್ಕಿಸಬಹುದು.ಸೆ.೧೧ ಹಾಗೂ ೧೨ರಂದು ಬೆಳಗಾವಿ ಜಿಲ್ಲೆಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸನ್ 2025-26 ನೇ ಸಾಲಿನಲ್ಲಿ ಮಂಜೂರಿಸಲಾದ ರೂ.11 ಲಕ್ಷ ಅನುದಾನದಲ್ಲಿ ಖರೀದಿಸಲಾದ ನೂತನ ಮಹಿಂದ್ರಾ ಬೋಲೆರೋ ವಾಹನವನ್ನು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಬುಧವಾರ ಆರಕ್ಷಕ ನಿರೀಕ್ಷಕರು, ವಾಹನ ಸಾರಿಗೆ ವಿಭಾಗ, ಡಿಎಆರ್ ವಿಜಯಪುರ ರವರಿಗೆ ಕೀ ನೀಡುವ ಮೂಲಕ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿಗಳಾದ ಸುನೀಲ ಕಾಂಬ್ಳೆ, ಮುರಗೆಪ್ಪ ಉಪಾಸೆ, ಸಿಪಿಐ ಗಳಾದ ರವಿ ಯಡವಣ್ಣವರ, ರಾಯಗೊಂಡ ಜಾನವಾರ, ಪರಶುರಾಮ ಮನಗೂಳಿ, ಪಿ.ಎಸ್.ಐ ಯತಿಂದ್ರ, ಆರ್.ಪಿ.ಐ ಈರಸಂಗಪ್ಪ ತೇಲಿ, ಆರ್.ಎಸ್.ಐ ಶ್ರೀರಂಗಪ್ಪ, ಎ.ಆರ್.ಎಸ್.ಐ ಅಶೋಕ ಕಾಂಬ್ಳೆ, ಹವಾಲ್ದಾರ್ ವಿಶ್ವನಾಥ ಚವ್ಹಾಣ ಮತ್ತಿತರರು ಇದ್ದರು.

Read More

ಚಿಮ್ಮಡದ ಸರಕಾರಿ ಗೋಮಾಳ ಜಮೀನು ಖಾಸಗಿ ವ್ಯಕ್ತಿಗಳ ಹೆಸರಿಗೆ ಪರಭಾರೆ ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಸರಕಾರಿ ಗೋಮಾಳ ಜಮೀನು ಖಾಸಗಿ ವ್ಯಕ್ತಿಗಳ ಹೆಸರಿಗೆ ಪರಭಾರೆ ಮಾಡಿಕೊಂಡಿರುವ ಭೂಗಳ್ಳರನ್ನು ಹಾಗೂ ಅವರಿಗೆ ಸಹಕಾರ ನೀಡಿದ ಅಧಿಕಾರಿಗಳನ್ನು ಬಂಧಿಸುವಂತೆ ಆಗ್ರಹಿಸಿ ಗ್ರಾಮದ ಪ್ರಮುಖರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.ಗ್ರಾಮದ ವ್ಯಾಪ್ತಿಯಲ್ಲಿರುವ ಸರ್ವೆ ನಂ. ೫೯/೧ ರಲ್ಲಿನ ಸುಮಾರು ೧೯ ಎಕರೆ ೨೩ ಗುಂಟೆ ಜಮೀನು ಸರಕಾರ ಜಾನುವಾರುಗಳನ್ನು ಮೇಯಿಸಲು (ಗೋಮಾಳ) ಮೀಸಲಿರಿಸಿತ್ತು ಅದಕ್ಕೆ ಧಾಖಲೆಗಳಲ್ಲಿ ಗುರುಚರಣ (ಸರಕಾರಿ ಜಮೀನು) ಎಂದು ನೊಂದನಿಯಾಗಿರುತ್ತದೆ ಈ ಭಾಗದಲ್ಲಿ ಬಹುತೇಕ ಗೋಮಾಳ ಜಾಗೆಗಳಿಗೆ ಗುರುಚರಣ ಎಂದೇ ದಾಖಲಾಗಿರುತ್ತವೆ ಇದನ್ನೇ ದುರುಪಯೋಗ ಪಡೆದುಕೊಂಡ ಶಿವಮೊಗ್ಗದ ಶ್ರೀ ಗುರುಚರಣ ಬಿನ್ ಮುರುಳಪ್ಪ ಎನ್ನುವ ವ್ಯಕ್ತಿ ಆ.೧೪ರಂದು ಶಿವಮೊಗ್ಗದ ಉಪನೊಂದನಾಧಿಕಾರಿ ಕಛೇರಿಯಲ್ಲಿ ತಮ್ಮ ಹೆಸರಿಗೆ ಮುಕ್ತ್ಯಾರ ಪತ್ರ (ಜಿಪಿಎ) ಮಾಡಿಕೊಂಡಿದ್ದಾರೆ, ನಂತರ ದಿನಾಂಕ ೨೬-೮-೨೦೨೫ರಂದು ಒಟ್ಟು ಮುಕ್ತ್ಯಾರ ಪತ್ರದನ್ವಯ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ಮೋರಟಗಿ ವಲಯ ಮಟ್ಟದ ಕ್ರೀಡಾಕೂಟಗಳನ್ನು ಬಗಲೂರ ಪ್ರೌಢಶಾಲೆ ಯಲ್ಲಿ ಆಯೋಜಿಸಲಾಗಿತ್ತು.ಈ ಕ್ರೀಡಾ ಕೂಟಗಳಲ್ಲಿ ಸರಕಾರಿ ಪ್ರೌಢಶಾಲೆ ಸೋಮಜಾಳ ವಿದ್ಯಾರ‍್ಥಿ/ನಿಯರು ಗಳು ಥ್ರೋ ಬಾಲ್ ನಲ್ಲಿ ಪ್ರಥಮ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ‍್ಥಿಗಳ ಈ ಸಾಧನೆಗೆ ಎಸ್ ಡಿ ಎಮ್ ಸಿ ಸದಸ್ಯರು ಮುಖ್ಯಪಾಧ್ಯಾಯರು ಶಿಕ್ಷಕರು ರ‍್ಷ ವ್ಯಕ್ತ ಪಡಿಸಿದ್ದಾರೆ.ಈ ಸಂದರ‍್ಭದಲ್ಲಿ ದೈಹಿಕ ಶಿಕ್ಷಕ ಭೀಮರಾಯ ಅರಳಗುಂಡಗಿ, ಎನ್ ಎಸ್ ಬಿರಾದಾರ, ಸಂತೋಷ ಅಮರಗೊಂಡ, ಸೂರ‍್ಯಕಾಂತ್ ಸಾಲೋಟಗಿ, ರಾಕೇಶ್ ಬಿರಾದಾರ ಇದ್ದರು

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಹಿಂದೂ ಧರ್ಮವನ್ನೇ ಒಪ್ಪದವರಿಂದ ನಾಡ ಹಬ್ಬ ದಸರಾಹಬ್ಬ ಉದ್ಘಾಟಿಸುತ್ತಿರುವುದು ಖಂಡನಾರ್ಹ ಎಂದು ಯುವಾ ಬ್ರಿಗೇಡ್ ವಿಭಾಗದ ಸಹ ಸಂಚಾಲಕ ಶಿವಮೂರ್ತಿ ಕಾಟಕರ್ (ದೇವಣಗಾಂವ) ಹೇಳಿದರು.ಅವರು ಯುವಾ ಬ್ರಿಗೇಡ್ ಸಿಂದಗಿ ವತಿಯಿಂದ ರಾಜ್ಯಪಾಲರಿಗೆ ಬರೆದಿರುವ ಮನವಿ ಪತ್ರವನ್ನು ಸಿಂದಗಿ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಸಲ್ಲಿಸಿ ಮಾತನಾಡುತ್ತಿದ್ದರು.ದಸರಾ ಹಬ್ಬವು ಸಮಸ್ತ ಹಿಂದುಗಳ ಸಂಸ್ಕೃತಿ ಮತ್ತು ನಂಬಿಕೆಯ ಗುರುತಾಗಿದೆ, ನಮ್ಮ ಪರಂಪರೆಯ ಪ್ರತೀಕವಾಗಿದೆ ಎಂಥ ಭವ್ಯ ಪರಂಪರೆ ಹೊಂದಿರುವ ನಾಡಹಬ್ಬದಲ್ಲಿ ರಾಜಕೀಯ ಮಾಡಿ ಸಮಸ್ತ ಹಿಂದುಗಳ ಭಾವನೆಗೆ ಧಕ್ಕೆ ತರುವಂತ ಕೆಲಸ ಸರ್ಕಾರ ಮಾಡುತ್ತಿದೆ ಇದನ್ನು ನಾಡಿನ ಸಮಸ್ತ ಹಿಂದೂ ಜನತೆ ಇದನ್ನು ಒಪ್ಪುತ್ತಿಲ್ಲ ಈ ಕಾರಣಕ್ಕಾಗಿ ಭಾನು ಮುಸ್ತಾಕ್ ಅವರಿಂದ ಉದ್ಘಾಟನೆ ವಾಪಸ್ ಪಡೆಯುವ ಮೂಲಕ ಹಿಂದುಗಳ ಭಾವನೆಗೆ ಗೌರವಿಸಬೇಕಿದೆ. ಗೌರವಾನ್ವಿತ ರಾಜ್ಯಪಾಲರು ಮಧ್ಯೆಸ್ಥಿಕೆ ವಹಿಸಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅವರು ಆಗ್ರಹಿಸಿದರು.ಈ ಸಂದರ್ಭದಲ್ಲಿ ವಿಭಾಗ ಸಂಚಾಲಕ ರಾಜು ಪಾಟೀಲ,ವಿ ಎಚ್ ಪಿ ಮುಖಂಡ ಶೇಖರಗೌಡ ಹರನಾಳ,ಜಿಲ್ಲಾ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ವಿಜಯಪುರ ಜಿಲ್ಹಾ ಅಮೇಚೂರ ಕಬಡ್ಡಿ ಸಂಸ್ಥೇಯ ಪ್ರಧಾನ ಕಾರ್ಯದರ್ಶೀಯಾಗಿ ಮತ್ತು ರಾಜ್ಯ ಸೈಕ್ಲಿಂಗ್ ಅಸೋಷೀಯೇಶನ್ ಸಂಘಟನಾ ಕಾರ್ಯದರ್ಶಿಯಾಗಿ ಕಳೆದ ಮೂರು ದಶಕಗಳ ಕಾಲ ಯಾವುದೇ ಪ್ರತಿಫಲಾಪೇಕ್ಷೇ ಬಯಸದೆ ವೇತನವಿಲ್ಲದೆ ನಿಸ್ವಾರ್ಥ ಮನೋಬಲದಿಂದ ಆಟಗಾರರಿಗೆ ಸ್ಥೈರ್ಯ ತುಂಬುತ್ತಿದ್ದ ಕ್ರೀಡಾ ಪ್ರೇಮಿ ರಮೇಶ ಪಾಟೀಲ ಇನ್ನು ನೆನಪು ಮಾತ್ರ.ಕೃಷ್ಣಾ ನದಿ ತೀರದ ಅವಳಿ ಜಿಲ್ಹೆಯ ನೂರಾರು ಯುವಕ ಯುವತಿಯರಿಗೆ ಕ್ರೀಡೆಯ ಬಗ್ಗೆ ಅದರಲ್ಲೂ ಕಬಡ್ಡಿ ಆಟ ಮತ್ತು ಸೈಕ್ಲೀಂಗ್ ಸ್ಪರ್ಧೇಯ ಬಗ್ಗೆ ಆಸಕ್ತಿ ಮೂಡಿಸಿ ಸ್ಪೂರ್ತಿ ತುಂಬಿ ಗ್ರಾಮೀಣ ಪಟ್ಟಣ ನಗರ ಪ್ರದೇಶದ ಹಲವಾರು ಆಟಗಾರರು ತಂಡಗಳು ತಾಲೂಕು ಜಿಲ್ಹಾ ರಾಜ್ಯ ಹಾಗೂ ರಾಷ್ಟç ಮಟ್ಟದ ಅತ್ಯುತ್ತಮ ಕ್ರೀಡಾ ಪ್ರತಿಭೆಗಳು ಮಿಂಚಿ ಪ್ರಶಸ್ತಿ ಪಡೆಯಲು ಕಾಣದ ಕೈಯಂತೆ ಶಕ್ತಿ ತುಂಬಲು ಶ್ರಮಿಸಿದವರು ರಮೇಶ ತ್ರೀವಿಕ್ರಮ ಪಾಟೀಲ.ಕ್ರೀಡಾ ಕ್ಷೇತ್ರದಲ್ಲಿ ಅಪ್ರತಿಮ ಕ್ರೀಡಾ ಸಾಧಕರನ್ನು ನಾಡಿಗೆ ಪರಿಚಯಿಸಿದ ರಮೇಶ ಜನಿಸಿದ್ದು ಕೆನೆಮೋಸರ ಸವಿನಾಡು ಕೊಲ್ಹಾರದಲ್ಲಿ. ಇವರು ದೈಹಿಕ ಶಿಕ್ಷಣವನ್ನು ಓದದೆ ಇದ್ದರೂ ಪಟ್ಟಣ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಅತಿಥಿ ಉಪನ್ಯಾಸಕರ ನೇಮಕವಾಗದೆ ಇರುವದರಿಂದ ಪೂರ್ಣಪ್ರಮಾಣದಲ್ಲಿ ತರಗತಿಗಳು ನಡೆಯುತ್ತಿಲ್ಲ , ಆದಷ್ಟೂ ಬೇಗ ಅತಿಥಿ ಉಪನ್ಯಾಸಕರ ನೇಮಕ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.ಬೆಳಿಗ್ಗೆ ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಸಾವಿರಾರು ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ ಪಟ್ಟಣದ ಆಡಳಿತಸೌಧವರೆಗೆ ಪಾದಯಾತ್ರೆಯ ಮೂಲಕ ಆಗಮಿಸಿದರು.ಬಸ್ ನಿಲ್ದಾಣದ ಬಸವೇಶ್ವರ ಸರ್ಕಲ್ ನಲ್ಲಿ ಬರುತ್ತಿದ್ದಂತೆ ಟ್ರಾಫಿಕ್ ಜ್ಯಾಮ್ ಹೆಚ್ಚಾಯಿತು.ಉಪವಿಭಾಗಾಧಿಕಾರಿ ಅವರ ಕಛೇರಿಗೆ ಆಗಮಿಸಿ ಪ್ರತಿಭಟನೆ ಮುಂದುವರೆಸಿದರು. ತಹಶಿಲ್ದಾರ ಅವರಿಗೆಮನವಿ ಸಲ್ಲಿಸಿದ ನಂತರ ಮಾತನಾಡಿದ ವಿದ್ಯಾರ್ಥಿ ಮುಖಂಡ ಬಸವರಾಜ ಹಿರೇಕುರಬರ ‘ಕಳೆದ ಎರಡು ತಿಂಗಳಿಂದ ಸರಿಯಾಗಿ ನಮ್ಮ ತರಗತಿಗಳು ನಡೆಯುತ್ತಿಲ್ಲ, ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಭೋದನೆ ಮಾಡುತ್ತಿದ್ದರು, ಅವರನ್ನು ಬಿಡುಗಡೆ ಮಾಡಿದ ದಿನದಿಂದ ತರಗತಿಗಳೇ ಸರಿಯಾಗಿ ನಡೆಯುತ್ತಿಲ್ಲ, ನಮ್ಮ ಪರೀಕ್ಷೆಗಳು ಸಮೀಪ ಬರುತ್ತಿದ್ದರಿಂದ ನಮಗೆ ಅನ್ಯಾಯವಾಗುತ್ತಿದೆ, ಆದಷ್ಟು ಬೇಗ ಸರಿಯಾಗಿ ಕ್ಲಾಸ್ ಗಳು ನಡೆಯುವಂತಾಗಬೇಕು ಎಂದು ಆಗ್ರಹಿಸಿದರು.ವೈಷ್ಣವಿ ಮುಜಗೊಂಡ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಶಬಾನಾ ಮಲ್ಲೇದ ಅವರು ಸಲ್ಲಿಸಿದ್ದ ಇಂಪ್ಯಾಕ್ಟ್ ಆಫ್ ಗೂಡ್ಸ್ ಆಂಡ್ ಸರ್ವೀಸಸ್ ಟ್ಯಾಕ್ಸ್(ಜಿ.ಎಸ್.ಟಿ) ಆನ್ ರಿಟೇಲ್ ಸೇಲ್: ಅ ಸ್ಟಡಿ ಆಫ್ ಟೆಕ್ಸಟೈಲ್ ಮಾರ್ಕೆಟ್ ಇನ್ ವಿಜಯಪುರ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಸ್ಟೇಟ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಶಬಾನಾ ಮಲ್ಲೇದ ಅವರು ಅರ್ಥಶಾಸ್ತ್ರ ವಿಭಾಗದ ಪ್ರೊ. ಆರ್.ವಿ. ಗಂಗಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಶಬಾನಾ ಮಲ್ಲೇದ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಎಸ್ಡಿಪಿ 2022-23‌ ನೇ ಸಾಲಿನ ಸುಮಾರು 1 ಕೋಟಿ 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ನಿರ್ಮಿಸಿದ ನೂತನ ಸಭಾಂಗಣ ಮತ್ತು ಗ್ರಂಥಾಲಯ ಕಟ್ಟಡ, ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಶರಣಬಸಪ್ಪಗೌಡ ದರ್ಶನಪುರವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು. ಕಾಲೇಜಿನ ಪ್ರಾಯೋಗಿಕ ಕೋಣೆಗಳ ನಿರ್ಮಾಣಕ್ಕೆ, 2023-24 ನೇ ಸಾಲಿನಲ್ಲಿ ಯಾದಗಿರಿ ಜಿಲ್ಲಾ ಪಂಚಾಯತ್ ಇಲಾಖೆ, ಸುಮಾರು 1 ಕೋಟಿ 56 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಪ್ರಾಯೋಗಿಕ ಕೋಣೆಗಳ ಅಡಿಗಲ್ಲು ಹಾಗೂ ನೂತನ ಸಭಾಂಗಣ ಮತ್ತು ಗ್ರಂಥಾಲಯ ಕಟ್ಟಡದ ಉದ್ಘಾಟನೆಯನ್ನು, 15/09/2025 ರಂದು ಸೋಮವಾರ ನೆರವೇರಿಸುವುದಾಗಿ ತಿಳಿಸಿದರು, ಈಗಾಗಲೇ…

Read More