ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುಗೆ ನೀಡುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಪಾಲಕರು ತಮ್ಮ ಪ್ರತಿಯೊಂದು ಮಗುವಿನ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣ ಕೊಡಿಸಿ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಕರೆ ನೀಡಿದರು.
ಪಟ್ಟಣದ ತೆಲಗಿ ರಸ್ತೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ 5 ಕೋಟಿ ರೂ. ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಸಕ್ತ ಸಂದರ್ಭದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಜಾಗತಿಕ ಮಟ್ಟದಲ್ಲಿ ಸುಮಾರು 230 ಕ್ಕೂ ಹೆಚ್ಚು ದೇಶಗಳಲ್ಲಿ ಇಂಗ್ಲಿಷ್ ಭಾಷೆಯೇ ಪ್ರಧಾನವಾಗಿ ವ್ಯವಹಾರಿಕ ಭಾಷೆಯಾಗಿದೆ. ಆಂಗ್ಲ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ಇದೆ. ಇದನ್ನರಿತು ಸರ್ಕಾರ ರಾಜ್ಯದಲ್ಲಿಭಾಷೆಯಾಗಿದೆ. ಆಂಗ್ಲ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ಇದೆ. ಇದನ್ನರಿತು ಸರ್ಕಾರ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ 100 ಮೌಲಾನ ಆಜಾದ ಆಂಗ್ಲ ಶಾಲೆ ಸ್ಥಾಪನೆಗೆ ಮುಂದಾಗಿದ್ದು, ನಮ್ಮ ಕ್ಷೇತ್ರಕ್ಕೂ ಈ ಶಾಲೆಯು ಮಂಜೂರಾಗಿದೆ ಎಂದರು.
ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರು, ಶಾಲಾ ಕಟ್ಟಡ, ಪ್ರಯೋಗಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸವುದು ಅಗತ್ಯವಾಗಿದೆ. ಮೌಲಾನಾ ಆಜಾದ್ ಶಾಲೆಯಲ್ಲಿ ಎಲ್.ಕೆ.ಜಿ. ಯಿಂದ ಪಿಯುಸಿ ವರೆಗೆ ಶಿಕ್ಷಣ ನೀಡುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದರು.
ಎಲ್ಲ ಸಮುದಾಯದ ಜನರು ಸುಶಿಕ್ಷಿತರಾಗಿ, ಸಾಮರಸ್ಯದಿಂದ ಬದುಕಿದಾಗಲೇ ದೇಶಕ್ಕೆ ದೊಡ್ಡ ಕೊಡುಗೆ ನೀಡಿ, ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ. ಭೌತಿಕ ಆಸ್ತಿ ಮಾಡುವ ಬದಲು ನಿಮ್ಮ ಮಕ್ಕಳಿಗೆ ಯಾರಿಂದಲೂ ಕದಿಯಲಾಗದ ವಿದ್ಯೆ ಎಂಬ ಆಸ್ತಿ ಕೊಡಿಸಿ ಎಂದು ಕಿವಿ ಮಾತು ಹೇಳಿದ ಅವರು, ಬಸವವನಬಾಗೇವಾಡಿ ನಗರದಲ್ಲಿ ನಿರ್ಮಾಣ ಆಗುತ್ತಿರುವ ಮೌಲಾನ ಆಜಾದ ಶಾಲೆಗೆ ನಿಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಕಲ್ಪಿಸುವ ಮೂಲಕ ಸರ್ಕಾರಿ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳಬೇಕು. ವೈಚಾರಿಕ ಜ್ಞಾನ, ಸಾಂಸ್ಕೃತಿಕ ಸಿರಿ, ಆರ್ಥಿಕ ಸಮೃದ್ಧಿ ಸಾಧಿಸಲು ಅಲ್ಪಸಂಖ್ಯಾತ ಸಮುದಾಯದ ಎಲ್ಲರೂ ತಪ್ಪದೇ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಕಿವಿಮಾತು ಹೇಳಿದರು.
ಧರ್ಮಗುರು ಹಾಫೀಜಮೊಹ್ಮದಅಲಿ ಮಿಲಿ ಮೌಲಾನ ಆಜಾದ ಕುರಿತು ಮಾತನಾಡಿದರು.
ಬಸವೇಶ್ವರ ಸಹಕಾರಿ ಬ್ಯಾಂಕ ಅಧ್ಯಕ್ಷ ಲೋಕನಾಥ ಅಗರವಾಲ, ಜಾಮೀಯಾ ಮಸೀದಿ ಕಮೀಟಿ ಅಧ್ಯಕ್ಷ ಡಾ.ಶಬ್ಬೀರಅಹ್ಮದ್ ನದಾಫ, ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಮಹಿಬೂಬ ನಾಯ್ಕೋಡಿ, ಮುಖಂಡರಾದ ಮತಾಬ ಬೊಮ್ಮನಹಳ್ಳಿ, ಇಲಾಹಿ ನಾಗರಾಳ, ಅಜೀಜ ಬಾಗವಾನ, ಅಲ್ತಾಫ್ ಮುದ್ದೇಬಿಹಾಳ, ಅಬ್ದುಲರಜಾಕ ಬಾಗವಾನ,ರಫೀಕ ಹೊಕ್ರಾಣಿ, ಕಮಲಸಾಬ ಕೊರಬು, ಅಬ್ದುಲಹಮೀದ ನದಾಫ, ಬುಡ್ಡೇಸಾಬ ಹುಬ್ಬಳ್ಳಿ, ಎಚ್.ಆರ್.ಬಾಗವಾನ,ಇಕ್ಬಾಲ ಕೊರಬು, ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ, ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ, ತಾಲೂಕಾ ಅಧಿಕಾರಿ ಇಲಾಹಿ ನಾಗರಾಳ, ಕ್ಷೇತ್ರಸಮನ್ವಾಧಿಕಾರಿ ಸುನಿಲ ನಾಯಕ, ಕ್ಷೇತ್ರಸಂಪನ್ಮೂಲ ವ್ಯಕ್ತಿ ಎಂ.ಬಿ.ಗಬ್ಬೂರ, ಮುಖ್ಯೋಪಾಧ್ಯಾಯಿನಿ ಜಿ.ಎಸ್. ಸಾತಲಗಾಂವ ಇತರರು ಇದ್ದರು. ಮಹಮ್ಮದ ಸೋಹಿಬ ಕುರಾನ್ ಪಠಿಸಿದರು. ಅಲ್ತಾಪಹುಸೇನ ಮುದ್ದೇಬಿಹಾಳ ಸಮುದಾಯದ ಎಲ್ಲರೂ ತಪ್ಪದೇ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಕಿವಿಮಾತು ಹೇಳಿದರು.
ಧರ್ಮಗುರು ಹಾಫೀಜಮೊಹ್ಮದಅಲಿ ಮಿಲಿ ಮೌಲಾನ ಆಜಾದ ಕುರಿತು ಮಾತನಾಡಿದರು.
ಬಸವೇಶ್ವರ ಸಹಕಾರಿ ಬ್ಯಾಂಕ ಅಧ್ಯಕ್ಷ ಲೋಕನಾಥ ಅಗರವಾಲ, ಜಾಮೀಯಾ ಮಸೀದಿ ಕಮೀಟಿ ಅಧ್ಯಕ್ಷ ಡಾ.ಶಬ್ಬೀರಅಹ್ಮದ್ ನದಾಫ, ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಮಹಿಬೂಬ ನಾಯ್ಕೋಡಿ, ಮುಖಂಡರಾದ ಮತಾಬ ಬೊಮ್ಮನಹಳ್ಳಿ, ಇಲಾಹಿ ನಾಗರಾಳ, ಅಜೀಜ ಬಾಗವಾನ, ಅಲ್ತಾಫ್ ಮುದ್ದೇಬಿಹಾಳ, ಅಬ್ದುಲರಜಾಕ ಬಾಗವಾನ,ರಫೀಕ ಹೊಕ್ರಾಣಿ, ಕಮಲಸಾಬ ಕೊರಬು, ಅಬ್ದುಲಹಮೀದ ನದಾಫ, ಬುಡ್ಡೇಸಾಬ ಹುಬ್ಬಳ್ಳಿ, ಎಚ್.ಆರ್.ಬಾಗವಾನ,ಇಕ್ಬಾಲ ಕೊರಬು, ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ, ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ, ತಾಲೂಕಾ ಅಧಿಕಾರಿ ಇಲಾಹಿ ನಾಗರಾಳ, ಕ್ಷೇತ್ರಸಮನ್ವಾಧಿಕಾರಿ ಸುನಿಲ ನಾಯಕ, ಕ್ಷೇತ್ರಸಂಪನ್ಮೂಲ ವ್ಯಕ್ತಿ ಎಂ.ಬಿ.ಗಬ್ಬೂರ, ಮುಖ್ಯೋಪಾಧ್ಯಾಯಿನಿ ಜಿ.ಎಸ್. ಸಾತಲಗಾಂವ ಇತರರು ಇದ್ದರು. ಮಹಮ್ಮದ ಸೋಹಿಬ ಕುರಾನ್ ಪಠಿಸಿದರು. ಅಲ್ತಾಪಹುಸೇನ ಮುದ್ದೇಬಿಹಾಳ ಸ್ವಾಗತಿಸಿದರು. ರಮಜಾನ ಹೆಬ್ಬಾಳ ನಿರೂಪಿಸಿದರು. ಮಹಿಬೂಬ ನಾಯ್ಕೋಡಿ ವಂದಿಸಿದರು.

