ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪುರಾಣ ಕಥೆಗಳ ಮೂಲಕ ನಮ್ಮಲ್ಲಿ ಜ್ಞಾನ ಹಾಗೂ ಮೌಲ್ಯಧಾರಿತ ಗುಣಗಳನ್ನು ಬೆಳೆಯಲು ಸಹಕಾರಿಯಾಗುವುದು ಎಂದು ಬೆಂಗಳೂರಿನ ಶಿಕ್ಷಣ ತಜ್ಞ ಡಾ.ಗಣೇಶ ಭಟ್ಟ ಹೇಳಿದರು.
ಸಿಂದಗಿ ಪಟ್ಟಣ ಹೊರವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಹಮ್ಮಿಕೊಂಡ ವಿದ್ಯಾರ್ಥಿ ಹಾಗೂ ಶಿಕ್ಷಕರ ಮಾರ್ಗದರ್ಶನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ನಮ್ಮ ಸುತ್ತಮತ್ತ ಪರಿಸರದ ವಾತಾವರಣದಲ್ಲಿ ಸಸಿ ನೆಡೆಸುವುದು. ನೀರುಣಿಸುವುದರ ಜೊತೆಗೆ ಅವುಗಳ ರಕ್ಷಣಿ ಮಾಡುವುದು. ನಮ್ಮಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.
ಈ ವೇಳೆ ಬೆಂಗಳೂರಿನ ಜೀವಶಾಸ್ತ್ರ ತಜ್ಞ ಪ್ರಕಾಶ ಎಂ.ಬಿ., ಪ್ರಾಧ್ಯಾಪಕಿ ಕವಿತಾ ಎಸ್. ಮಾತನಾಡಿ, ಜ್ಞಾನವೆಂಬುವುದು ಅತ್ಯಂತ ಹರಿತವಾದ ಆಯುಧ ಜೀವನ ಯಶಸ್ವಿಗೊಳಿಸಬೇಕಾದರೆ ಅಕ್ಷರದ ಜ್ಞಾನ ಅವಶ್ಯಕವಾಗಿ ಪಡೆದುಕೊಳ್ಳಬೇಕು. ಭಾಷಾ ಕೌಶಲ್ಯ ಬೆಳೆಯಲು ಕ್ರಮಬದ್ಧತೆ, ವಾಕ್ಯ ರಚನೆ, ಸರಳ ಮತ್ತು ಸ್ಪಷ್ಟತೆಗೆ ವ್ಯಾಕರಣ ಕಲಿಕೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಸರಳ ವಿಧಾನದ ಜೊತೆಗೆ ಕೌಶಲ್ಯಭರಿತ ತರಬೇತಿ, ಶಿಕ್ಷಕರಿಗೆ ಕಲಿಸುವಿಕೆ ವಿಧಾನ, ಸರಳ ಹಾಗೂ ವಿನೂತನ ರೀತಿಯ ತರಬೇತಿಯನ್ನು ನೀಡಲಾಯಿತು.
ಇದೇ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ವಿಠ್ಠಲ ಕೋಳುರ ಮಾತನಾಡಿದರು.
ಶಾಲೆಯ ಪ್ರಾಚಾರ್ಯೆ ಶಾಹಿನ್ ಶೇಖ್ ಸೇರಿದಂತೆ ಶಾಲೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.