Author: editor.udayarashmi@gmail.com

ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಅಶೋಕ ಯಡಳ್ಳಿ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪತ್ರಿಕಾ ರಂಗ ರಾಜಕೀಯ ಅತ್ತೆ-ಸೊಸೆ ಇದ್ದಂತೆ. ಜೊತೆಯಾಗಿ ಮುನ್ನಡೆದಾಗ ಮಾತ್ರ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲು ಸಾಧ್ಯ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಪತ್ರಕರ್ತ ಅಶೋಕ ಯಡಳ್ಳಿ ಹೇಳಿದರು.ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಒಟ್ಟು ೨೫ ಸ್ಥಾನಗಳಿಗೆ ಅವರೋಧ ಆಯ್ಕೆಗೆ ಸಾಕಷ್ಟು ಶ್ರಮ ವಹಿಸಿದರೂ ಕೊನೆಗೆ ೨೪ ಪದಾಧಿಕಾರಿಗಳು ಅವಿರೋಧ ಆಯ್ಕೆಯಾದರು. ಆದರೆ ಅಧ್ಯಕ್ಷ ಸ್ಥಾನಕ್ಕೆ ಕೊನೆ ಘಳಿಗೆವರೆಗೆ ಪ್ರಯತ್ನಿಸಿದರೂ ಚುನಾವಣೆ ನಡೆಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು ಎಂದರು.ಚುನಾವಣೆಗೆ ಹೋಗುವ ಮುನ್ನ ನಾವು ಅವರೊಂದು ನಾವೊಂದು ಪೆನಲ್ ರೀತಿ ಚುನಾವಣೆ ಎದುರಿಸಿಲ್ಲ. ಪತ್ರಕರ್ತರು ಎಲ್ಲರೂ ನಾವು ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ ಎಂದು ಪ್ರತಿಪಾದಿಸಿದರು.ಜಿಲ್ಲೆಯ ಪತ್ರಕರ್ತರು ಸಮಾಜದ ವಿವಿಧ ಕ್ಷೇತ್ರಗಳ ಮುಖಂಡರನ್ನು ಒಳಗೊಂಡು ಎಲ್ಲರನ್ನು…

Read More

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ಉದಯರಶ್ಮಿ ದಿನಪತ್ರಿಕೆ ಧಾರವಾಡ: ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ನಾಡಿನ ಅವಕಾಶ ವಂಚಿತ ಹಾಗೂ ನಾಡಿನ ಮಕ್ಕಳ ಪಾಲಿನ ಕಾಮಧೇನುವಾಗಿ ಮಕ್ಕಳಿಗಾಗಿ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮಗಳು ನಿಜಕ್ಕೂ ಅರ್ಥಪೂರ್ಣವಾಗಿದ್ದು ಮಕ್ಕಳ ಬದುಕಿಗೆ ಹೊಸ ತಿರುವು ನೀಡಲು ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ತುಂಬಾ ಅರ್ಥಪೂರ್ಣವಾಗಿವೆ. ಜೊತೆಗೆ ಈ ದಿನದಿಂದ 15 ದಿನಗಳವರೆಗೆ ರಾಜ್ಯದ 31 ಜಿಲ್ಲೆಗಳ ಬಾಲ ಮಂದಿರ ಮಕ್ಕಳಿಗಾಗಿ ಏರ್ಪಡಿಸಿರುವ ಮಕ್ಕಳ ವ್ಯಕ್ತಿತ್ವ ವಿಕಸನ ಕಾರ್ಯಾಗಾರವು ನಿಜಕ್ಕೂ ಮಾದರಿಯಾದ ಕಾರ್ಯಕ್ರಮ. ನೀವು ಇಲ್ಲಿ ವಿಶೇಷವಾದ ಸ್ಪೂರ್ತಿಯನ್ನು ಪಡೆದು ನಿಮ್ಮ ಬದುಕನ್ನ ಬದಲಾಯಿಸಿಕೊಳ್ಳಿ ಮತ್ತು ರೂಪಿಸಿಕೊಳ್ಳಿ ಇಂಥ ಪರಿಸರ ಸ್ನೇಹಿ ರೆಸಾರ್ಟ್ ನಲ್ಲಿ ಮಕ್ಕಳಿಗಾಗಿ ನಿಸರ್ಗದ ಮಡಿಲಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾದದ್ದು ಎಂದು ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಹೇಳಿದರು.ಅವರು ಕರ್ನಾಟಕ ಬಾಲ ವಿಕಾಸ ಅಕಾಡೆಮಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾಳೆ ಬುಧವಾರದಿಂದ ವಿಜಯಪುರ ನಗರದಿಂದ-‌ ತೆಲಸಂಗ ವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸದಾಗಿ ಗ್ರಾಮೀಣ ಸಾರಿಗೆ ಬಸ್ ಸಂಚಾರ ಪ್ರಾರಂಭಿಸಲಿದೆ.ವಿದ್ಯಾರ್ಥಿಗಳು, ಸಾರ್ವಜನಿಕರು‌, ರೈತರು‌ ಹಾಗೂ ಕಾರ್ಮಿಕರ ಸಂಚಾರಕ್ಕೆ ಅನುಕೂಲವಾಗಲು‌ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ‌ ಅವರು ಹೊಸ ಬಸ್ ಸೇವೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ‌ ನಾರಾಯಣಪ್ಪ ಕುರಬರ ಕ್ರಮ ಕೈಗೊಂಡಿದ್ದು, ಈ ಹೊಸ ಬಸ್ ಸೇವೆ ಪ್ರಾರಂಭಿಸುತ್ತಿದ್ದಾರೆ.ಒಂದು ಬಸ್ಸು ಪ್ರತಿ‌ದಿನ‌ ವಿಜಯಪುರದ ಸೆಟಲೈಟ್ ಬಸ್ ನಿಲ್ದಾಣದಿಂದ ತಿಕೋಟಾ, ರಾಮಪುರ, ಹೊನವಾಡ ಮಾರ್ಗವಾಗಿ ತೆಲಸಂಗ(ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮ)ಕ್ಕೆ ಎಂಟು ಟ್ರಿಪ್ (ಎಂಟು‌ ಸಲ) ಸಂಚರಿಸಲಿದೆ.ಮತ್ತೊಂದು ಬಸ್ಸು ತೆಲಸಂಗದಿಂದ ಹೊನವಾಡ, ರಾಮಪುರ, ತಿಕೋಟಾ ಮಾರ್ಗವಾಗಿ ವಿಜಯಪುರ ನಗರ ಸೆಟಲೈಟ್ ಬಸ್ ಬಸ್ ನಿಲ್ದಾಣಕ್ಕೆ ಪ್ರತಿ ದಿನ ಎಂಟು ಟ್ರಿಪ್(ಎಂಟು ಸಲ) ಸಂಚರಿಸಲಿದೆ.ಬುಧವಾರ ಬೆಳಿಗ್ಗೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಆಶ್ರಯ ಕಾಲೋನಿಯ ಬಸಮ್ಮ ಚನ್ನಪ್ಪ ಕೊಣ್ಣೂರ(೨೦), ಸಂತೋಷ ಕೋಣ್ಣೂರ(೧೬), ರವಿ ಕೋಣ್ಣೂರ(೧೫) ಅವರು ಶಿರೋಳ ಗ್ರಾಮದ ಹತ್ತಿರ ಚಿಮ್ಮಲಗಿ ಏತನೀರಾವರಿ ಕಾಲುವೆಯ ನೀರಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮೃತ ಪಟ್ಟ ಘಟನೆ ಮಂಗಳವಾರ ಮದ್ಯಾಹ್ನ ನಡೆದಿದೆ.ಈ ಕುರಿತು ಮಾಹಿತಿ ತಿಳಿದ ಪಿಎಸೈ ಸಂಜಯಕುಮಾರ ತಿಪ್ಪಾರಡ್ಡಿ ನೇತೃತ್ವದ ಪೋಲಿಸ್ ತಂಡ ಹಾಗೂ ಅಗ್ನಿಶಾಮಕದಳದ ತಂಡವರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರೀಶಿಲನೆ ನಡೆಸಿ ಮೃತ ದೇಹದ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಕಾಲುವೆಯಲ್ಲಿ ನೀರು ಹರಿಯುತ್ತಿರುವುದರಿಂದ ಶವಗಳು ಪತ್ತೆಯಾಗಿಲ್ಲ. ಘಟನೆ ಕುರಿತು ಯಾವುದೇ ಮಾಹಿತಿ ಮೃತರ ಕುಟುಂಬದಿಂದ ಲಭ್ಯವಾಗಿಲ್ಲ.ಮುದ್ದೇಬಿಹಾಳ ಪಟ್ಟಣದ ಶಿರೋಳ ಗ್ರಾಮದ ಹತ್ತಿರ ಚಿಮ್ಮಲಗಿ ಏತನೀರಾವರಿ ಕಾಲುವೆಯ ನೀರಲ್ಲಿ ಮುಳುಗಿ ಮೃತ ಪಟ್ಟ ಘಟನೆಯ ಕುರಿತು ಪಿಎಸೈ ಸಂಜಯಕುಮಾರ ತಿಪ್ಪಾರೆಡ್ಡಿ ತನಿಖೆ ನಡೆಸುತ್ತಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಚಡಚಣ:ಓಬವ್ವ ಸ್ವಾಮಿನಿಷ್ಠೆ, ಸಮಯಸ್ಪೂರ್ತಿ ಮತ್ತು ತ್ಯಾಗದ ತ್ರಿವೇಣಿ ಸಂಗಮ. ಸಾಮಾನ್ಯ ಗೃಹಿಣಿಯೊಬ್ಬಳು ತೋರಿದ ಅಸಾಮಾನ್ಯ ಸಾಹಸ ಇಂದಿಗೂ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ನಂ. ೨), ಮರಡಿ ಶಾಲೆಯಲ್ಲಿ ನಡೆದ ಮೌಲಾನಾ ಅಬುಲ್ ಕಲಾಂ ಅಜಾದ್ ಹಾಗೂ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.“ಓಬವ್ವ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ಹೊಂದಿದ್ದು, ಅವಳ ಆಚಾರ–ವಿಚಾರ, ನಡೆ–ನುಡಿ ಮತ್ತು ಕಾಯಕನಿಷ್ಠೆಯ ದೃಢಸಂಕಲ್ಪ ಇಂದಿನ ಮಹಿಳೆಯರಿಗೆ ಚೇತನ ಶಕ್ತಿ. ಅವಳು ಧೈರ್ಯ, ಶೌರ್ಯ ಮತ್ತು ನಂಬಿಕೆಯ ಪ್ರತೀಕ,” ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ಮಾತನಾಡಿ, “ಭಾರತೀಯ ಶಿಕ್ಷಣದ ಪ್ರವರ್ತಕ ಮೌಲಾನಾ ಅಬುಲ್ ಕಲಾಂ ಅಜಾದ್ ಅವರು ಸ್ವಾತಂತ್ರ‍್ಯ ಹೋರಾಟಗಾರರಾಗಿ, ಚಿಂತಕರಾಗಿ ಹಾಗೂ ಶಿಕ್ಷಣ ತಜ್ಞರಾಗಿ ನೀಡಿದ ಕೊಡುಗೆಗಳು ಇಂದಿನ ಪೀಳಿಗೆಗೆ ಸ್ಪೂರ್ತಿಯಾಗಿದೆ,” ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ಡಿ.ಎಸ್. ಬಗಲಿ, ಮಹಾದೇವ ಆದಿಗೊಂಡೆ, ಎಚ್.ಜೆ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಒನಕೆ ಓಬವ್ವಳು ಸ್ವಾಮಿನಿಷ್ಠೆ, ಸಮಯ ಸ್ಫೂರ್ತಿ ಮತ್ತು ತ್ಯಾಗದ ತ್ರಿವೇಣಿ ಸಂಗಮ. ಅವಳು ನಿಷ್ಕಲ್ಮಷ ನಾಡಭಕ್ತಿಯ ದ್ಯೋತಕ. ಅವಳು ರೂಢಿಸಿಕೊಂಡ ಸಂಸ್ಕಾರಗಳು ಇಂದಿನ ಪೀಳಿಗೆಗೆ ಆದರ್ಶವಾಗಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಮಂಗಳವಾರದಂದು ತಾಲೂಕಿನ ನಾಗಠಾಣ ಗ್ರಾಮದಲ್ಲಿ ಹಮ್ಮಿಕೊಂಡ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಒನಕೆ ಓಬವ್ವ 18ನೇ ಶತಮಾನದ ಓರ್ವ ವೀರ ವನಿತೆ,ನಿಸ್ವಾರ್ಥ ನಾಡಪ್ರೇಮಿ. ವೀರರ ನಾಡೆನಿಸಿದ ಚಿತ್ರದುರ್ಗದ ಉಕ್ಕಿನ ಕೋಟೆಯನ್ನು ಶತ್ರುಗಳ ಆಕ್ರಮಣದಿಂದ ರಕ್ಷಿಸಲು ಒನಕೆಯನ್ನು ಆಯುಧವಾಗಿ ಹಿಡಿದು ಶತ್ರುಗಳ ಸಂಹಾರ ಮಾಡಿದ್ದರಿಂದ ಚರಿತ್ರೆಯಲ್ಲಿ ಅಜರಾಮರಳಾಗಿ, ಸ್ತ್ರೀ ಶಕ್ತಿಯ ಸಂಕೇತವಾಗಿ ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ. ಅವರ ಧೈರ್ಯ, ಸಾಹಸ ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡುತ್ತದೆ ಎಂದು ಹೇಳಿದರು.ಶಿಕ್ಷಕ ರಾಘು ಮೊಗಳ ಮಾತನಾಡಿ, ಬಾಲ್ಯದಿಂದಲೂ ಸಂಕಷ್ಟಗಳ ಅನುಭವಗಳೊಂದಿಗೆ ಅನನ್ಯವಾದ ಸಂಸ್ಕಾರಗಳನ್ನು ರೂಢಿಸಿಕೊಂಡ ಓಬವ್ವಳ ಬದುಕು ಇಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದು ಹೇಳಿದರು.ಅವಳಿ ಮಕ್ಕಳಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ಓಬವ್ವಳ ವೇಷಧರಿಸಿ…

Read More

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನವದೆಹಲಿ: ಕುಮಾರಸ್ವಾಮಿ ಅವರೂ ಭಯೋತ್ಪಾದಕರ ಭಾಗವಾಗಿದ್ದಾರೆಯೇ? ಅವರೂ ಸಹ ವಿಧಾನಸೌಧದಲ್ಲಿ ಕುಳಿತಿರಲಿಲ್ಲವೇ? ಅವರಿಗೂ ಹಾಗೂ ಅವರ ಪಕ್ಷದವರಿಗೂ, ಅವರ ಆಡಳಿತಕ್ಕೂ ಇದು ಅನ್ವಯಿಸುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.ದೆಹಲಿಯಲ್ಲಿ ಎಐಸಿಸಿ ನೂತನ ಕಟ್ಟಡ ಇಂದಿರಾ ಭವನದ ಆವರಣದಲ್ಲಿ ಮಾತನಾಡಿದ ಅವರು ವಿಧಾನಸೌಧದಲ್ಲಿ ಭಯೋತ್ಪಾದಕರಿದ್ದಾರೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು.ಚುನಾವಣಾ ಆಯೋಗವು ಬಿಹಾರದ ಮತದಾರರಿಗೆ ಸರಿಯಾದ ನ್ಯಾಯ ಒದಗಿಸಿಲ್ಲ. ಬಿಜೆಪಿ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ‌ ಮಾಡಿಕೊಂಡಿದೆ. ಯಾವುದು ಕಾಡದಿದ್ದರೂ ಆತ್ಮಸಾಕ್ಷಿ ಎನ್ನುವುದು ಇದ್ದೇ ಇರುತ್ತದೆ. ಅದು ಅಂತಿಮವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.ನಾನು ರಾಜಕೀಯ ವಿಚಾರಗಳನ್ನು ಮಾತನಾಡುವುದಿಲ್ಲ. ನಾನು ಪ್ರಜಾಪ್ರಭುತ್ವ, ಮತದಾನದ ಹಕ್ಕು, ಸಂವಿಧಾನವನ್ನು ಉಳಿಸುವ ವಿಚಾರವಾಗಿ ಮಾತನಾಡುತ್ತೇನೆ” ಎಂದು ಉತ್ತರಿಸಿದರು. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿ ಫ್ರೀಡಂ ಪಾರ್ಕ್ ನಿಂದ ಈ ಹೋರಾಟ ಆರಂಭಿಸಲಾಯಿತು. ನಂತರ ಮಹಾರಾಷ್ಟ್ರ, ಹರಿಯಾಣ ಚುನಾವಣಾ ಅಕ್ರಮ…

Read More

ಸಿಂದಗಿಯಲ್ಲಿ ರೂ.೫ ಕೋಟಿ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಅವರಿಂದ ಭೂಮಿ ಪೂಜೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರವನ್ನು ಸೌಂದರ್ಯಿಕರಣಗೊಳಿಸುವ ನಿಟ್ಟಿನಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಿಂದಗಿ ನಗರಕ್ಕೆ ತರಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಗಾಂಧೀ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆಯವತಿಯಿಂದ ರಸ್ತೆ ಡಾಂಬರೀಕರಣ, ವಿದ್ಯುತ್ ದೀಪ ಅಳವಡಿಕೆ ರೂ. ೫ ಕೋಟಿ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಅವರು ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.೧೯೯೪ ರಲ್ಲಿ ದಿವಂಗತ ಎಂ.ಸಿ.ಮನಗೂಳಿ ಅವರ ಅಧಿಕಾರಾವಧಿಯಲ್ಲಿ ಸಿಂದಗಿ ನಗರದಲ್ಲಿ ಮಹಾತ್ಮಾ ಗಾಂಧಿ ವೃತ್ತವನ್ನು ನಿರ್ಮಿಸಿದ್ದರು. ಪ್ರಸ್ತುತ ನನ್ನ ಅವಧಿಯಲ್ಲಿ ಒಂದು ಸುಸಜ್ಜಿತ ಮಹಾತ್ಮಾ ಗಾಂಧಿ ವೃತ್ತವನ್ನು ನಿರ್ಮಿಸಲಾಗುತ್ತಿದೆ. ಪ್ರಸ್ತುತ ಸ್ಥಳದಲ್ಲಿರುವ ಮಹಾತ್ಮಾ ಗಾಂಧಿ ವೃತ್ತವನ್ನು ಸ್ಥಳಾತರಿಸಿ ಆ ಜಾಗದಲ್ಲಿ ರಾಷ್ಟ್ರದ ಹೆಮ್ಮೆಯ ಪ್ರತೀಕ, ರಾಷ್ಟ್ರ ಲಾಂಛನವಾದ ಸಾರಾನಾಥದ ಅಶೋಕ ಸ್ಥಂಬದ ಮಾದರಿಯಲ್ಲಿಯೇ ವೃತ್ತವನ್ನು ನಿರ್ಮಿಸಬೇಕೆಂಬ ಮಹಾದಾಸೆ ನನ್ನದಾಗಿದೆ. ಜನೇವರಿ ೨೬ ರಂದು ಲೋಕಾರ್ಪಣೆಗೊಳಿಸಲಾಗುವುದು.ಮಹಾತ್ಮಾ ಗಾಂಧಿ ವೃತ್ತದಿಂದ ಡಾಲ್ಪಿನ್ ಡಾಬಾದವರೆಗೆ ರೂ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ೧೧೦/೩೩/೧೧ಕೆವ್ಹಿ ಸಿಂದಗಿ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಬರುವ ಎಫ್-೧೩ ಸಿಂದಗಿ ಮಾರ್ಗದ ಮೇಲೆ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ, ಸದರಿ ಮಾರ್ಗಗಳ ಮೇಲೆ ಬರುವ ಬಂದಾಳ ರಸ್ತೆ, ಗೋಲಿಬಾರ ಮಡ್ಡಿ, ಬಿ.ಟಿ.ಸುಣಗಾರ, ಗಣೇಶ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನ.೧೨ರಂದು ಬೆಳಿಗ್ಗೆ ೧೦ಗಂಟೆಯಿAದ ಸಾಯಂಕಾಲ ೫ಗಂಟೆಯವರೆಗೆ ವಿದ್ಯುತ್ ವ್ಯತ್ಯೆಯ ಉಂಟಾಗಲಿದ್ದು, ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪ-ವಿಭಾಗ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಲೇಖನ- ವೀಣಾ ಹೇಮಂತಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ವಿಚಾರವಂತರೊಂದಿಗಿನ ಸಹವಾಸ ನಮ್ಮೊಳಗಿನ ವಿಚಾರಗಳನ್ನು ತರ್ಕದ ತಳಹದಿಯಲ್ಲಿ ಪರೀಕ್ಷಿಸಿ ಮತ್ತೆ ನಮಗೆ ಕೂಡ ವಿಚಾರ ಮಾಡಲು ಅವಕಾಶ ಮಾಡಿಕೊಡುತ್ತದೆ.ಓರ್ವ ವ್ಯಕ್ತಿಯ ವ್ಯಕ್ತಿತ್ವವು ನಿರ್ಧಾರವಾಗುವುದು ಆತ ರೂಢಿಸಿಕೊಂಡಿರುವ ಹವ್ಯಾಸಗಳ ಮೇಲೆ. ಅಂತೆಯೇ ಪಾಲಕರಾದವರು ತಮ್ಮ ಮಕ್ಕಳ ಹವ್ಯಾಸಗಳ ಕುರಿತು ಯೋಚಿಸಲೇಬೇಕು. ಹವ್ಯಾಸವು ವ್ಯಕ್ತಿಯ ( ಗುರುತಿನ ಚೀಟಿ ) ಐಡೆಂಟಿಟಿ ಕಾರ್ಡ್ ಗಳು ಇದ್ದಂತೆ ಆತನನ್ನು ಗುರುತಿಸುವಾಗ ಆತನ ಉತ್ತಮ ಹವ್ಯಾಸಗಳ ಮೂಲಕ ಗುರುತಿಸಿದರೆ ಅದಕ್ಕಿಂತ ಮತ್ತಿನ್ನೇನು ಬೇಕು. ಪಾಲಕರು ಮಕ್ಕಳ ಬದುಕಿನಲ್ಲಿ ಹವ್ಯಾಸಗಳನ್ನು ರೂಢಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಅಂತೆಯೇ ಮಕ್ಕಳು ಎರಡು ವರ್ಷದವರಿದ್ದಾಗಲೇ ಆ ಮಕ್ಕಳಿಗೆ ತನ್ನ ಮನೆ, ತನ್ನ ಕುಟುಂಬ ಎಂಬ ಕುರಿತು ಅರಿವನ್ನು ಮೂಡಿಸಬೇಕು.. ನನ್ನ ಮನೆಯ ಚಿಕ್ಕಪುಟ್ಟ ಕೆಲಸಗಳನ್ನು ತಾನು ನಿರ್ವಹಿಸಬೇಕು ಎಂಬ ಜವಾಬ್ದಾರಿ ಪ್ರಜ್ಞೆಯನ್ನು ಮಗುವಿನಲ್ಲಿ ತುಂಬಬೇಕು. ವಸ್ತುಗಳನ್ನು ಆಯಾ ಸ್ಥಳಗಳಲ್ಲಿಯೇ ಇಡುವ ಹವ್ಯಾಸವನ್ನು ಮಕ್ಕಳಲ್ಲಿ ರೂಢಿಸಬೇಕು. ಮನೆಯಲ್ಲಿ ತಯಾರಿಸುವ ಆಹಾರವನ್ನು ಸೇವಿಸುವ ಸ್ವೀಕರಿಸುವ…

Read More