ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ೧೧೦/೩೩/೧೧ಕೆವ್ಹಿ ಸಿಂದಗಿ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಬರುವ ಎಫ್-೧೩ ಸಿಂದಗಿ ಮಾರ್ಗದ ಮೇಲೆ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ, ಸದರಿ ಮಾರ್ಗಗಳ ಮೇಲೆ ಬರುವ ಬಂದಾಳ ರಸ್ತೆ, ಗೋಲಿಬಾರ ಮಡ್ಡಿ, ಬಿ.ಟಿ.ಸುಣಗಾರ, ಗಣೇಶ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನ.೧೨ರಂದು ಬೆಳಿಗ್ಗೆ ೧೦ಗಂಟೆಯಿAದ ಸಾಯಂಕಾಲ ೫ಗಂಟೆಯವರೆಗೆ ವಿದ್ಯುತ್ ವ್ಯತ್ಯೆಯ ಉಂಟಾಗಲಿದ್ದು, ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪ-ವಿಭಾಗ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
