ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಆಶ್ರಯ ಕಾಲೋನಿಯ ಬಸಮ್ಮ ಚನ್ನಪ್ಪ ಕೊಣ್ಣೂರ(೨೦), ಸಂತೋಷ ಕೋಣ್ಣೂರ(೧೬), ರವಿ ಕೋಣ್ಣೂರ(೧೫) ಅವರು ಶಿರೋಳ ಗ್ರಾಮದ ಹತ್ತಿರ ಚಿಮ್ಮಲಗಿ ಏತನೀರಾವರಿ ಕಾಲುವೆಯ ನೀರಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮೃತ ಪಟ್ಟ ಘಟನೆ ಮಂಗಳವಾರ ಮದ್ಯಾಹ್ನ ನಡೆದಿದೆ.
ಈ ಕುರಿತು ಮಾಹಿತಿ ತಿಳಿದ ಪಿಎಸೈ ಸಂಜಯಕುಮಾರ ತಿಪ್ಪಾರಡ್ಡಿ ನೇತೃತ್ವದ ಪೋಲಿಸ್ ತಂಡ ಹಾಗೂ ಅಗ್ನಿಶಾಮಕದಳದ ತಂಡವರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರೀಶಿಲನೆ ನಡೆಸಿ ಮೃತ ದೇಹದ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಕಾಲುವೆಯಲ್ಲಿ ನೀರು ಹರಿಯುತ್ತಿರುವುದರಿಂದ ಶವಗಳು ಪತ್ತೆಯಾಗಿಲ್ಲ. ಘಟನೆ ಕುರಿತು ಯಾವುದೇ ಮಾಹಿತಿ ಮೃತರ ಕುಟುಂಬದಿಂದ ಲಭ್ಯವಾಗಿಲ್ಲ.
ಮುದ್ದೇಬಿಹಾಳ ಪಟ್ಟಣದ ಶಿರೋಳ ಗ್ರಾಮದ ಹತ್ತಿರ ಚಿಮ್ಮಲಗಿ ಏತನೀರಾವರಿ ಕಾಲುವೆಯ ನೀರಲ್ಲಿ ಮುಳುಗಿ ಮೃತ ಪಟ್ಟ ಘಟನೆಯ ಕುರಿತು ಪಿಎಸೈ ಸಂಜಯಕುಮಾರ ತಿಪ್ಪಾರೆಡ್ಡಿ ತನಿಖೆ ನಡೆಸುತ್ತಿದ್ದಾರೆ.

